ಕೊರೊನಾ ಮಧ್ಯೆ IPL: ಇಂದು ಮುಂಬೈ ಇಂಡಿಯನ್ಸ್‌ – RCB ನಡುವೆ ಮೊದಲ ಪಂದ್ಯ!

2021ರ ಐಪಿಎಲ್‌ ಆವೃತ್ತಿಯು ಇಂದಿನಿಂದ (ಶುಕ್ರವಾರ) ಆರಂಭವಾಗಲಿದೆ. ಐಪಿಎಲ್‌-14ರ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್‌ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಗಳು ಎದುರಾಗಲಿವೆ. ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ನಡುವೆಯೂ ಟೂರ್ನಿ ನಡೆಯುತ್ತಿದ್ದು, ಸ್ಟೇಡಿಯಂನಲ್ಲಿ ಪ್ರೇಕ್ಷಕರಿಲ್ಲದೇ ಪಂದ್ಯಗಳು ನಡೆಯಲಿವೆ.

ಪ್ರತಿ ಬಾರಿಯೂ ಕಪ್‌ ನಮ್ದೇ ಎಂದು ಹೇಳುವ ಆರ್‌ಸಿಬಿ ಮೊದಲ ಪಂದ್ಯದಲ್ಲಿ ಗೆದ್ದು, ತನ್ನ ಅಭಿಮಾನಿಗಳಿಗೆ ಭರವಸೆಯನ್ನು ಹುಟ್ಟಿಸಲು ಸೆಣಸಾಡಲಿದೆ. ಇದೇ ವೇಳೆ, ಹಲವು ಬಾರಿ ಚಾಂಪಿಯನ್‌ ಆದರೂ ಪ್ರತಿ ಟೂರ್ನಿಯ ಮೊದಲ ಪಂದ್ಯದಲ್ಲಿ ಸೋಲುತ್ತಾ ಬಂದಿರುವ ಮುಂಬೈ ಇಂಡಿಯನ್ಸ್‌ ಈ ಬಾರಿ ಗೆಲ್ಲಲೇ ಬೇಕು ಎಂದು ಪಣತೊಟ್ಟಿವೆ.

ಕೋವಿಡ್-19 ಸೋಂಕಿಗೆ ಸಿಲುಕಿರುವ ಆರಂಭಿಕ ಆಟಗಾರ ದೇವದತ್ ಪಡಿಕಲ್ ಆರ್‌ಸಿಬಿಯಲ್ಲಿ ಆಡುವುದು ಅನುಮಾನವಾಗಿದೆ. ಕೊಂಚ ಹಿನ್ನಡೆಯಾದರೂ ಸರಿಯೇ ಆರ್‌ಸಿಬಿ ಪಂದ್ಯವನ್ನು ಗೆಲ್ಲಲು ಸಜ್ಜಾಗಿದೆ.

ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಮ್ಯಾಕ್ಸ್ ವೆಲ್ ಒಳಗೊಂಡ ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿರುವ ಆರ್​ಸಿಬಿ ಮುಂಬೈ ಬೌಲರ್​ಗಳನ್ನೂ ಎದುರಿಸಿ ಸೆಣೆಸಾಡಬಹುದು. ಯಜುವೇಂದ್ರ ಚಾಹಲ್-ವಾಷಿಂಗ್ಟನ್ ಸುಂದರ್ ಸ್ಪಿನ್ ಜೋಡಿ, ಮೊಹಮದ್ ಸಿರಾಜ್-ನವದೀಪ್ ಸೈನಿ ವೇಗದ ಜೋಡಿ ಮಿಂಚುವ ತವಕದಲ್ಲಿದೆ. ಮತ್ತೊಂದೆಡೆ, ಐದು ಬಾರಿ ಪ್ರಶಸ್ತಿ ಗೆದ್ದ ಹುಮ್ಮಸ್ಸಿನಲ್ಲಿರುವ ಮುಂಬೈ ಇಂಡಿಯನ್ಸ್ ಟೂರ್ನಿಯಲ್ಲಿ ಯಶಸ್ವಿ ತಂಡ ಎನಿಸಿಕೊಂಡರೂ ಮೊದಲ ಪಂದ್ಯದಲ್ಲಿ ಸೋಲುವ ಇತಿಹಾಸ ಬದಲಿಸುವ ತವಕದಲ್ಲಿದೆ.

ಇದನ್ನೂ ಓದಿ: IPL 2021ಕ್ಕೆ ದಿನಾಂಕ ಫಿಕ್ಸ್‌: ಏಪ್ರಿಲ್‌ 09ರಿಂದ ಮೇ 30ರ ವರೆಗೆ ಐಪಿಎಲ್‌ ಹಂಗಾಮ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights