FACT CHECK | 188 ವರ್ಷದ ಬಾಬಾ ಬೆಂಗಳೂರಿನ ಗುಯೆಯೊಂದರಲ್ಲಿ ಪತ್ತೆಯಾಗಿದ್ದಾರೆಯೇ?

ಬೆಂಗಳೂರು ಸಮೀಪದ ಗುಹೆಯೊಂದರಲ್ಲಿ ತಂಗಿದ್ದ 188 ವರ್ಷ ವೃದ್ಧನನ್ನು ಸ್ಥಳೀಯರು ಹೊರಗೆ ಕರೆತಂದಿದ್ದಾರೆ. ಆತನಿಗೆ 188 ವರ್ಷ ಎಂದು ಹೇಳಲಾಗಿರುವ ವೃದ್ಧನ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಆಗಿರುವ 24 ಸೆಕೆಂಡ್‌ಗಳ ವಿಡಿಯೋದಲ್ಲಿ ಊರುಗೋಲಿನ ಸಹಾಯದಿಂದ ನಡೆದುಕೊಂಡು ಬರುತ್ತಿರುವ ವಯೋವೃದ್ಧರೊಬ್ಬರನ್ನು ಇಬ್ಬರು ವ್ಯಕ್ತಿಗಳು ಹಿಡಿದುಕೊಂಡು ಬರುತ್ತಿರುವುದನ್ನು ಕಾಣಬಹುದು. ಬಾಗಿದ ಬೆನ್ನು, ಅರೆನಗ್ನಾವಸ್ಥೆಯಲ್ಲಿರುವ ಹಣ್ಣು ಹಣ್ಣು ಮುದುಕುನಂತಿರುವ ಈ ವ್ಯಕ್ತಿಗೆ ನಿಜವಾಗಿಯೂ 188 ವರ್ಷ ವಯಸ್ಸಾಗಿದೆಯೇ ಎಂದು ಹೇಳಲಾಗುತ್ತಿದೆ.

ಜಪಾನ್, ಚೀನಾದಂತಹ ದೇಶದಲ್ಲಿ ಹೀಗೆ ಹೆಚ್ಚು ವರ್ಷಗಳು ಬರುಕಿರುವ ವ್ಯಕ್ತಿಗಳನ್ನು ಉಲ್ಲೇಖಿಸಿ ಪ್ರಕಟವಾದ ವರದಿಗಳನ್ನು ಆಗಾಗ್ಗೆ ನೋಡುತ್ತಿದ್ದೆವು. ಆದ್ರೆ ಭಾರತದಲ್ಲಿಯೂ ಒಬ್ಬರು ಶತಾಯುಷಿ ಇದ್ದಾರೆ. ಅವರು ಬರೋಬ್ಬರಿ 188 ವರ್ಷ ಬದುಕಿದ್ದಾರೆ ಎಂದು ಹೇಳಲಾಗುತ್ತಿರುವ ಸುದ್ದಿಯೊಂದು ಭಾರೀ ವೈರಲ್ ಆಗಿದೆ. ಹಾಗಿದ್ದರೆ ಈ ಸುದ್ದಿ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಬಾಗಿದ ಬೆನ್ನಿನ ಹಣ್ಣು ಹಣ್ಣು ವೃದ್ದನನ್ನು  ಇಬ್ಬರು ವ್ಯಕ್ತಿಗಳು ಅವನ ಕೈಗಳನ್ನು ಅವನ ಎರಡೂ ಬದಿಗಳಲ್ಲಿ ಹಿಡಿದಿ ಸಹಾಯ ಮಾಡುತ್ತಿರುವ ವಿಡಿಯೋದಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಿದಾಗ, ವಿಡಿಯೋದಲ್ಲಿರುವುದು ಸಿಯಾರಾಮ್ ಬಾಬಾ ಎಂದು ಬಳಕೆದಾರರೊಬ್ಬರು ಅವರನ್ನು ಪ್ರತಿಕ್ರಿಯಿಸಿರುವುದು ಕಂಡುಬಂದಿದೆ,  188 ವರ್ಷವಲ್ಲ, ಇವರ ನಿಜವಾದ ವಯಸ್ಸು 110 ವರ್ಷ ಎಂದು ಕಾಮೆಂಟ್​​ ಮಾಡಿದ್ದಾರೆ.

ಇದರ ಕ್ಲೂ ತೆಗೆದುಕೊಂಡು ಗೂಗಲ್ ಸರ್ಚ್ ಮಾಡಿದಾಗ ನವಭಾರತ್ ಟೈಮ್ಸ್‌ನ ವರದಿಯೊಂದು ಲಭ್ಯವಾಗಿದೆ.

सियाराम बाबा

ನವಭಾರತ್ ಟೈಮ್ಸ್‌ ವರದಿಯ ಪ್ರಕಾರ, ಈ ವೃದ್ಧ ಸಿಯಾರಾಮ್ ಬಾಬಾ ಮಧ್ಯಪ್ರದೇಶ ಮೂಲದವರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ..  ಈ ವೃದ್ಧ 110 ವರ್ಷ ವಯಸ್ಸಿನವರು ಎಂದು ಅಂದಾಜಿಸಲಾಗಿದೆ. ರಾಮನ ಪರಮ ಭಕ್ತನಾಗಿದ್ದ ಈತ 10 ವರ್ಷಗಳ ಕಾಲ ಒಂದೇ ಕಾಲಿನ ಮೇಲೆ ಕಠಿಣ ತಪಸ್ಸು ಮಾಡಿದ್ದಾರೆಂದು ಹೇಳಲಾಗುತ್ತದೆ. ಆದರೆ ಎಷ್ಟರ ಮಟ್ಟಿಗೆ ಸತ್ಯ ಎನ್ನುವುದು ಮಾತ್ರ ಗೊತ್ತಿಲ್ಲ.. ಸಿಯಾರಾಮ್ ಬಾಬಾ ರಾಮನಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು. 110 ವರ್ಷ ವಯಸ್ಸಿನ ಈ ಬಾಬಾ  ಕನ್ನಡಕವಿಲ್ಲದೆ ಪುಸ್ತಕ ಓದುತ್ತಾರೆ.  ಈ ಇಳಿವಯಸ್ಸಿನಲ್ಲಿಯೂ ನಡೆದಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಆದರೆ ಈಗ ಅವರ ದೇಹ ಸೊರಗಿದ್ದು ಅವರೆಂದು ಗುರುತಿಸುವುದು ಸ್ವಲ್ಪ ಕಷ್ಟವಾಗುತ್ತದೆ.

ಸಿಯಾರಾಮ್ ಬಾಬಾಗೆ 109 ವರ್ಷ ವಯಸ್ಸಾಗಿದ್ದು,ಈಗಲೂ ಎಲ್ಲಾ ಕೆಲಸಗಳನ್ನು ತಾವೇ ಮಾಡುತ್ತಿದ್ದಾರೆ, 12 ವರ್ಷಗಳ ಕಾಲ ತಪ್ಪಸ್ಸಿನಲ್ಲಿದ್ದು, ಕೋಟ್ಯಂತರ ರೂಪಾಯಿ ದೇಣಿಗೆ ನೀಡಿದ್ದಾರೆ”  ಎಂಧು ಉಲ್ಲೇಖಿಸಲಾಗಿದೆ. ಸಿಯಾರಾಮ್ ಬಾಬಾ ಭಟ್ಯಾನ್ ಆಶ್ರಮದ ಸಂತ, ಇದು ನರ್ಮದಾ ನದಿಯ ದಡದಲ್ಲಿರುವ ಖಾರ್ಗೋನ್‌ನ ಮಧ್ಯಪ್ರದೇಶ ಪ್ರದೇಶದಲ್ಲಿದೆ. ಭಕ್ತರಿಂದ ಕೇವಲ ಹತ್ತು ರೂಪಾಯಿ ಮಾತ್ರ ಪಡೆಯುತ್ತಾರೆ ಎಂದು ಹೇಳಲಾಗಿದೆ.

 

ವಿಡಿಯೋದಲ್ಲಿರುವ ವ್ಯಕ್ತಿ ಮಧ್ಯಪ್ರದೇಶದ ಹಿಂದೂ ಸನ್ಯಾಸಿ ಸಿಯಾರಾಮ್ ಬಾಬಾ ಎನ್ನಲಾಗಿದೆ. ಇವರು ಮಧ್ಯಪ್ರದೇಶದಲ್ಲಿ ವಾಸಿಸುತ್ತಿದ್ದಾರೆ ಎನ್ನಲಾಗಿದೆ.  ವಾಸ್ತವವಾಗಿ ಈ ಸನ್ಯಾಸಿಗೆ ಕೇವಲ 109 ವರ್ಷ ಎನ್ನಲಾಗಿದೆ. ಸಿಯಾರಾಮ್ ಬಾಬಾ ಮಧ್ಯಪ್ರದೇಶದ ಖಾರ್ಗೋನೆ ಜಿಲ್ಲೆಯವರು, 10 ವರ್ಷಗಳ ಕಾಲ ಒಂದೇ ಕಾಲಿನ ಮೇಲೆ ತಪಸ್ಸು ಮಾಡಿದಿದ್ದಾರಂತೆ.  ಹಿಂದೂ ಮಹಾಕಾವ್ಯ ರಾಮಾಯಣದ ರಾಮನ ಅಪ್ರತಿಮ ಭಕ್ತರೆಂದು ಗುರುತಿಸಲಾದ ಇವರು ಇಡೀ ದಿನ ರಾಮಾಯಣ ಓದಿಕೊಂಡು ಕಾಲ ಕಳೆಯುತ್ತಾರಂತೆ.  ಈ ವಯಸ್ಸಿನಲ್ಲೂ ಕನ್ನಡಕದ ಸಹಾಯವಿಲ್ಲದೆಯೇ ದಿನದಲ್ಲಿ 21 ಗಂಟೆ ರಾಮಾಯಣವನ್ನು ಓದುತ್ತಾರೆಂದು ಎಂದು ವರದಿಯಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, 188 ವರ್ಷದ ಬಾಬಾ ಬೆಂಗಳೂರಿನ ಗುಹೆಯೊಂದರಲ್ಲಿ ಪತ್ತೆಯಾಗಿದ್ದಾರೆ ಎಂದು ಸುಳ್ಳು ಸುದ್ದಿಯನ್ನು ಹಂಚಿಕೊಂಡಿದ್ದು, ವಾಸ್ತವವಾಗಿ ಅವರ ವಯಸ್ಸು 110 ಎಂದು ಮಾಧ್ಯಮ ವರದಿಗಳು ಉಲ್ಲೇಖಿಸಿವೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಕಚೇರಿಯಲ್ಲಿ ಮೊಘಲ್ ದೊರೆ ಬಾಬರ್‌ನ ಚಿತ್ರವನ್ನು ಹಾಕಲಾಗಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights