FACT CHECK | ಕೊಲೆಯಾದ ಹಿಂದೂ ಕಾರ್ಯಕರ್ತನ ಫೋಟೊ ಎಂದು ರಾಘವೇಂದ್ರ ಶುಕ್ಲಾ ಎಂಬ ಪತ್ರಕರ್ತನ ಫೋಟೊ ಹಂಚಿಕೆ

ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ಭಾನುವಾರ ಅಂದರೆ ದುರ್ಗಾಪೂಜೆ ಮೂರ್ತಿ ವಿಸರ್ಜನೆಯ ದಿನ ನಡೆದ ಹಿಂಸಾಚಾರದಲ್ಲಿ ರಾಮ್ ಗೋಪಾಲ್ ಮಿಶ್ರಾ ಎಂಬ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮೃತ ರಾಮ್ ಗೋಪಾಲ್ ಮಿಶ್ರಾ ಬಗ್ಗೆ ದೊಡ್ಡ ಮಟ್ಟದಲ್ಲಿ ಪ್ರಚಾರ ನಡೆಸಲಾಗುತ್ತಿದೆ. ಮರಣೋತ್ತರ ಪರೀಕ್ಷೆಯ ವರದಿಯು ರಾಮ್ ಗೋಪಾಲ್ ಮಿಶ್ರಾಗೆ ನಡೆದ ದೌರ್ಜನ್ಯದ ಕಥೆಯನ್ನು ಬಹಿರಂಗಪಡಿಸಿದೆ. ಇದಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಸತ್ಯಕ್ಕೆ ಮೀರಿದ ಇಂತಹ ಹಲವು ಪೋಸ್ಟ್ ಗಳು ಹರಿದಾಡುತ್ತಿವೆ. ರಾಮ್ ಗೋಪಾಲ್ ಮಿಶ್ರಾ ಅವರ ಚಿತ್ರಕ್ಕೆ ಸಂಬಂಧಿಸಿದಂತೆ ಹೊಸ ಪ್ರಕರಣವೊಂದು ಬೆಳಕಿಗೆ ಬಂದಿದೆ.

(Source: Social media screenshot)

ಈ ಮಧ್ಯೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತಿಯೊಬ್ಬರ ಭಾವಚಿತ್ರಕ್ಕೆ ಹೂವಿನ ಮಾಲೆಯನ್ನು ಹಾಕಿರಿವ ಪೋಟೊದೊಂದಿಗೆ ಪೋಸ್ಟ್‌ವೊಂದನ್ನು, ಇದು ರಾಮ್ ಗೋಪಾಲ್ ಮಿಶ್ರಾ ಅವರ ಫೋಟೊ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಇದೇ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಹಿಂಸಾಚಾರದಲ್ಲಿ ಹತ್ಯೆಯಾದ ರಾಮ್ ಗೋಪಾಲ್ ಮಿಶ್ರಾ  ಎಂದು ಹೇಳಿಕೊಳ್ಳಲಾದ ಚಿತ್ರಕ್ಕೆ ಹಲವರು ಕಮೆಂಟ್‌ ಮಾಡಿದ್ದು, ಪೋಸ್ಟರ್‌ನಲ್ಲಿರುವ ವ್ಯಕ್ತಿಯನ್ನು ರಾಘವೇಂದ್ರ ಶುಕ್ಲಾ ಎಂಬ ಪತ್ರಕರ್ತದ್ದು ಎಂದು ಗುರುತಿಸುವ ಕಮೆಂಟ್‌ಗಳು ಲಭ್ಯವಾಗಿವೆ. ಒಂದು ಕಮೆಂಟ್‌ನಲ್ಲಿ ಇವರನ್ನು ನವಭಾರತ್ ಟೈಮ್ಸ್‌ ವೆಬ್‌ಸೈಟ್ ನಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತ ಎಂದು ಹೇಳಿದ್ದಾರೆ.

Ramgopal Mishra Raghvendra Shukla News

ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ದುರ್ಗಾಪೂಜೆ ಮೂರ್ತಿ ವಿಸರ್ಜನೆಯ ದಿನ ನಡೆದ ಹಿಂಸಾಚಾರದಲ್ಲಿ ಹತ್ಯೆಯಾದ ರಾಮ್ ಗೋಪಾಲ್ ಮಿಶ್ರಾ  ಎಂಬ ವ್ಯಕ್ತಿಯ ಚಿತ್ರ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿರುವ ಫೋಟೊದ ಕೀ ಫ್ರೇಮ್‌ಗಳನ್ನು ಗೂಗಲ್ ಲೆನ್ಸ್‌ನಲ್ಲಿ ಸರ್ಚ್ ಮಾಡಿದಾಗ, ರಾಘವೇಂದ್ರ ಶುಕ್ಲಾ ಅವರು ನವಭಾರತ್ ಟೈಮ್ಸ್ ಆನ್‌ಲೈನ್‌ನಲ್ಲಿ ಹಿರಿಯ ಡಿಜಿಟಲ್ ವಿಷಯ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಡಿಯೋರಿಯಾದ ನಿವಾಸಿ ರಾಘವೇಂದ್ರ ಶುಕ್ಲಾ ಅವರು ಜುಲೈ 2017 ರಲ್ಲಿ IMC ಯಿಂದ ಪತ್ರಿಕೋದ್ಯಮ ಪದವಿ ಪಡೆದರು. ಇದರ ನಂತರ ನವಭಾರತ್ ಟೈಮ್ಸ್ ಆನ್‌ಲೈನ್‌ನ ಲಕ್ನೋ ತಂಡದ ಭಾಗವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲಹಾಬಾದ್ ವಿಶ್ವವಿದ್ಯಾನಿಲಯದಿಂದ ವಿಜ್ಞಾನ ಪದವೀಧರರಾಗಿರುವ ರಾಘವೇಂದ್ರ ಶುಕ್ಲಾ ಅವರು ಸಾಹಿತ್ಯದಲ್ಲಿಯೂ ಆಸಕ್ತಿ ಹೊಂದಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಅವರ ಚಿತ್ರವನ್ನು ಪೋಸ್ಟ್ ಮಾಡಿದಾಗಿನಿಂದ,  ಹಲವು ರೀತಿಯ ವದಂತಿಗಳು ಹರಡುತ್ತಿವೆ ಎಂದು ತಿಳಿಸಿದ್ದಾರೆ. ಅದೇ ಸಮಯದಲ್ಲಿ, ಅವರ ಸ್ನೇಹಿತರು ಮತ್ತು ಪ್ರೀತಿಪಾತ್ರರು ಅವನ ಯೋಗಕ್ಷೇಮದ ಬಗ್ಗೆ ತಿಳಿದುಕೊಳ್ಳಲು ಅವನಿಗೆ ನಿರಂತರವಾಗಿ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

Image

ರಾಘವೇಂದ್ರ ಶುಕ್ಲಾ ಅವರ ಎಕ್ಸ್‌ ಖಾತೆ ಲಭ್ಯವಾಗಿದ್ದು, ಅಲ್ಲಿ ಪತ್ರಕರ್ತರು ವೈರಲ್ ಹೇಳಿಕೆಯನ್ನು ಉದ್ದೇಶಿಸಿ ಪೋಸ್ಟ್ ಮಾಡಿದ್ದಾರೆ. ಪೋಸ್ಟರ್‌ನಲ್ಲಿನ ಅವರ ಚಿತ್ರವು ಬಹ್ರೈಚ್ ಘಟನೆಯ ಬಗ್ಗೆ ಸುಳ್ಳು ನಿರೂಪಣೆಗಳೊಂದಿಗೆ ವೈರಲ್ ಆಗಿದೆ ಮತ್ತು ಅವರು ಜೀವಂತವಾಗಿರುವುದರಿಂದ ಜನರು ಈ ಹೇಳಿಕೆಯನ್ನು ನಂಬಬೇಡಿ ಎಂದು ಅವರು ವಿಂತಿಸಿದ್ದಾರೆ.

ರಾಮ್ ಗೋಪಾಲ್ ಮಿಶ್ರಾ ಅವರ ಫೋಟೊ ಬದಲು ನನ್ನ ಫೋಟೋವನ್ನು ಹಾಕುವ ಮೂಲಕ ಹಲವರು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.
ಈ ಫೋಟೋವನ್ನು ಬಳಸಬೇಡಿ ಎಂದು ನಿಮ್ಮೆಲ್ಲರಲ್ಲಿ ವಿನಂತಿಸುತ್ತಾ, ಇದು ಎಲ್ಲಿಯಾದರೂ ಬಳಸುತ್ತಿರುವುದು ಕಂಡುಬಂದರೆ ಅದನ್ನು ತೆಗೆದುಹಾಕಲು ಹೇಳಿ ಎಂದು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ದುರ್ಗಾಪೂಜೆ ಮೂರ್ತಿ ವಿಸರ್ಜನೆಯ ದಿನ ನಡೆದ ಹಿಂಸಾಚಾರದಲ್ಲಿ ಬರ್ಬರವಾಗಿ ಹತ್ಯೆಯಾದ ರಾಮ್ ಗೋಪಾಲ್ ಮಿಶ್ರಾ ಎಂಬ ಯುವಕನಿಗೆ ಶ್ರದ್ದಾಂಜಲಿ ಎಂದು ನವಭಾರತ್ ಟೈಮ್ಸ್ ಆನ್‌ಲೈನ್‌ ವೆಬ್‌ಸೈಟ್‌ನಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿರುವ ರಾಘವೇಂದ್ರ ಶುಕ್ಲಾ ಎಂಬುವವರ ಫೋಟೊವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | RSS ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ ಮುಸ್ಲಿಮನಲ್ಲ ! ಮತ್ತ್ಯಾರು ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights