FACT CHECK | ಆಂಧ್ರ ಪ್ರದೇಶದಲ್ಲಿ ಆಂಜನೇಯ ದೇವಸ್ಥಾನವನ್ನು ಧ್ವಂಸ ಮಾಡಿದ್ದು ಮುಸ್ಲಿಮರಲ್ಲ ! ಮತ್ತ್ಯಾರು ?

ಆಂಧ್ರ ಪ್ರದೇಶದಲ್ಲಿ ಮುಸ್ಲಿಂ ಜಿಹಾದಿಗಳು ಮತ್ತೊಂದು ಹಿಂದೂ ದೇವಾಲಯವನ್ನು ಧ್ವಂಸ ಮಾಡಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ವೊಂದು ವೈರಲ್ ಆಗುತ್ತಿದೆ.

ಆಂಧ್ರ ಪ್ರದೇಶದ ಅನ್ನಮಯ್ಯ ಜಿಲ್ಲೆಯಲ್ಲಿ ಮೂರು ದಿನಗಳ ಹಿಂದೆ ಅಭಯ ಆಂಜನೇಯ ಸ್ವಾಮಿ ದೇವಾಲಯಕ್ಕೆ ಹಾನಿ ಮಾಡಲಾಗಿತ್ತು. ಸಾಕಷ್ಟು ಟಿವಿ ಚಾನಲ್ ಗಳು ಈ ಕುರಿತಂತೆ ಸುದ್ದಿಯನ್ನು ಬಿತ್ತರಿಸಿದ್ದವು. ಕೆಲವು ಮಾಧ್ಯಮಗಳು ಕೋಮು ನಿರೂಪಣೆಯೊಂದಿಗೆ ಪ್ರಸಾರ ಮಾಡುತ್ತಿದ್ದು, ನಿಜವಾಗಿಯೂ ಈ ಕೃತ್ಯದಲ್ಲಿ ಮುಸ್ಲಿಮರ ಪಾತ್ರವಿದೆಯೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವಂತೆ ಆಂಧ್ರ ಪ್ರದೇಶದಲ್ಲಿ ಹನುಮಂತ ದೇವಾಲಯವನ್ನು ಮುಸ್ಲಿಮರು ಹಾನಿ ಮಾಡಿದ್ದಾರೆಯೇ  ಎಂದು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಅಕ್ಟೋಬರ್ 16, 2024 ರಂದು ಇಂಡಿಯಾ ಟುಡೆ ಯೂಟ್ಯುಬ್‌ ಚಾನಲ್‌ನಲ್ಲಿ ಹಂಚಿಕೊಂಡ ವಿಡಿಯೋ ವರದಿಯೊಂದು ಲಭ್ಯವಾಗಿದೆ. ಅದರಲ್ಲಿ ಚಿತ್ತೂರು ಜಿಲ್ಲೆಯ ಚೇವರೂರಿನ ಮಲ್ಕಾರದಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನವನ್ನು ಅಪರಿಚಿತ ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ ಎಂದು ಬುಲೆಟಿನ್ ವರದಿಯಲ್ಲಿ ಉಲ್ಲೇಖಿಸಿಲಾಗಿದೆ.

ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಪಡೆಯಲು ಕೆಲವು ಕೀ ವರ್ಡ್‌ಗಳನ್ನು ಬಳಸಿ ಗೂಗಲ್‌ನಲ್ಲಿ ಸರ್ಚ್ ಮಾಡಿದಾಗ, ಅಕ್ಟೋಬರ್ 18 ರಂದು ತೆಲಂಗಾಣ ಟುಡೆ ಪ್ರಕಟಿಸಿದ ವರದಿಯೊಂದು ಲಭ್ಯವಾಗಿದೆ. ಈ ವರದಿಯ ಪ್ರಕಾರ “ಕನಗುಂಡ ಸ್ವಾಮಿ ದೇವಾಲಯದ ಅರ್ಚಕನಾಗಿರುವ ಹರಿನಾಥನಿಗೆ ಅಭಯ ಆಂಜನೇಯ ದೇವಾಲಯದ ಅರ್ಚಕನೊಂದಿಗೆ ಮನಸ್ತಾಪವಿತ್ತು. ದೇವಾಲಯಕ್ಕೆ ಬರುವ ಆದಾಯವನ್ನು ಹಂಚಿಕೊಳ್ಳುವ ವಿಷಯದಲ್ಲಿ ಈ ಮನಸ್ತಾಪ ಉಂಟಾಗಿತ್ತು” ಎಂದು ಉಲ್ಲೇಖಿಸಲಾಗಿದೆ.

 

 

 

 

 

 

 

 

 

 

 

 

 

 

 

 

 

 

 

 

 

ಈ ವರದಿಯಲ್ಲಿ ಇನ್ನೂ ಮುಂದುವರೆದು “ಅಭಯ ಆಂಜನೇಯ ಸ್ವಾಮಿ ದೇವಾಲಯವನ್ನು ತನ್ನ ಅಧೀನಕ್ಕೆ ತಂದುಕೊಳ್ಳುವ ಉದ್ದೇಶವನ್ನು ಅರ್ಚಕ ಹರಿನಾಥ ಹೊಂದಿದ್ದ. ಆದರೆ ಅಭಯ ಆಂಜನೇಯ ಸ್ವಾಮಿ ದೇವಾಲಯದ ಅರ್ಚಕ ವಿದ್ಯಾಸಾಗರ್ ಇದಕ್ಕೆ ಒಪ್ಪಿಕೊಳ್ಳಲಿಲ್ಲ. ಇದು ಹರಿನಾಥನಲ್ಲಿ ಸಿಟ್ಟು ತರಿಸಿತು. ಆದ್ದರಿಂದ ಅಭಯ ಆಂಜನೇಯ ಸ್ವಾಮಿ ದೇವಾಲಯವನ್ನು ಸ್ಪೋಟಿಸುವುದಕ್ಕೆ ಹರಿನಾಥ ತಂತ್ರ ಹೆಣೆದ. ಅದಕ್ಕಾಗಿ ದೇವಸ್ಥಾನದಲ್ಲಿ ಸ್ಫೋಟಕಗಳನ್ನು ಇರಿಸಿದ. ಒಂದು ವೇಳೆ ಸ್ಪೋಟಕ ಸಿಡಿದು ದೇವಾಲಯಕ್ಕೆ ಹಾನಿ ಆದರೆ ಅಲ್ಲಿಂದ ಈ ವಿದ್ಯಾಸಾಗರ ಹೊರಟು ಹೋಗಬಹುದು ಎಂದು ಆತ ಅಂದಾಜಿಸಿದ್ದ. ಸ್ಪೋಟಕ ಸಿಡಿಯದೆ ಹೋದಾಗ ಸುತ್ತಿಗೆ ಇತ್ಯಾದಿಗಳನ್ನು ಬಳಸಿ ದೇವಸ್ಥಾನದ ಮೂರ್ತಿಗಳಿಗೆ ಹಾನಿ ಮಾಡಿದ್ದ” ಎಂಬುದನ್ನು ಕೂಡ ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದೇ ಅಂಶವನ್ನು ಇನ್ನೂ ಹಲವು ಪತ್ರಿಕೆಗಳ ವರದಿಗಳಲ್ಲಿ ಕಾಣಬಹುದಾಗಿದೆ.

 

 

 

 

 

 

 

 

 

 

 

 

 

 

 

ಇನ್ನು ಅನ್ನಮಯ್ಯ ಜಿಲ್ಲೆಯ ಪೊಲೀಸರು ಇದೀಗ ಅರ್ಚಕ ಹರಿನಾಥ ಸೇರಿದಂತೆ ಇನ್ನೂ 5 ಕನರನ್ನು ಬಂಧಿಸಿದ್ದಾರೆ. ಈ ಬಗ್ಗೆ ಅನ್ನಮಯ್ಯ ಜಿಲ್ಲಾ ಪೊಲೀಸರು ತಮ್ಮ ಅಧಿಕೃತ ಎಕ್ಸ್‌ ಖಾತೆ ಹಾಗೂ ಫೇಸ್‌ಬುಕ್‌ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದು, ಈ ಗಲಭೆಗೆ ಮುಸಲ್ಮಾನರೇ ಕಾರಣ ಎಂಬ ಅಂಶ ಎಲ್ಲೂ ಉಲ್ಲೇಖವಾಗಿಲ್ಲ.

 

 

 

 

 

 

 

 

 

 

 

 

 

 

 

 

 

 

ಒಟ್ಟಾರೆಯಾಗಿ ಹೇಳುವುದಾದರೆ, ಆಂಧ್ರ ಪ್ರದೇಶದ ಅನ್ನಮಯ್ಯ ಜಿಲ್ಲೆಯ ಅಭಯ ಅಂಜನೇಯ ದೇವಸ್ಥಾನದ ವಿಚಾರವಾಗಿ ಇಬ್ಬರು ಅರ್ಚಕರ ನಡುವೆ ಇದ್ದ ಜಗಳದಿಂದಾಗಿ  ಆಂಜನೇಯ ದೇವಸ್ಥಾನಕ್ಕೆ ಹಾನಿ ಮಾಡಿದ ಘಟನೆಯನ್ನು, ಸುಳ್ಳು ಪ್ರತಿಪಾದನೆಯೊಂದಿಗೆ ಮುಸ್ಲಿಮರು ಹಿಂದೂ ದೇವಸ್ಥಾನವನ್ನು ಧ್ವಂಸಗೊಳಿಸಿದ್ದಾರೆ ಎಂದು ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಪ್ರವಾದಿ ಮುಹಮ್ಮದ್ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದಕ್ಕೆ ವಿದೇಶದಲ್ಲಿ ಯತಿ ನರಸಿಂಹಾನಂದನ ವಿರುದ್ದ ಪ್ರತಿಭಟನೆ ನಡೆದಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights