ಅತ್ಯಾಚಾರ ಕೇಸ್ ನಲ್ಲಿ ರೌಡಿ ಶೀಟರ್ ಅನಿಲ್ ರಾಜ್ ಬಂಧನ…!
ಅತ್ಯಾಚಾರ ಕೇಸ್ ನಲ್ಲಿ ರೌಡಿ ಶೀಟರ್ ಅನಿಲ್ ರಾಜ್ ನನ್ನು ಬಂಧಿಸಲಾಗಿದೆ.
22 ವರ್ಷದ ಅಮಾಯಕ ಹುಡುಗಿ ನಯನ (ಹೆಸರು ಬದಲಾಯಿಸಿದೆ) ಎಂಬಾಕೆಯನ್ನ ಮದುವೆಯಾಗೋದಾಗಿ ನಂಬಿಸಿ ಮೋಸ ಮಾಡಿದ್ದ ಆರೋಪಿ. ಅಲ್ಲದೆ ಅಮಾಯಕ ಹುಡುಗಿಯನ್ನು ಮದುವೆಯಾಗಲು ಕುಟುಂಬಸ್ಥರನ್ನು ಬಿಡೋದಾಗಿ ಹೇಳಿಕೆ ನೀಡಿದ್ದ. ಓದಲು ಬರೆಯಲು ಬಾರದಿದ್ದರೂ ಮಾಸಿಕ ಪತ್ರಿಕೆಯೊಂದರ ಸಂಪಾದಕ ಎಂದು ರೌಡಿ ಶೀಟರ್ ಹೇಳಿಕೊಳ್ಳುತ್ತಿದ್ದ.
ಅದೇ ಮಾಸಿಕ ಪತ್ರಿಕೆಯಲ್ಲಿ ವರದಿಗಾರಳಾಗಿ ಕೆಲಸ ಮಾಡುತ್ತಿದ್ದ ನಯನಳಿಗೆ ಹಲವು ಬಾರಿ ಲೈಂಗಿಕ ಕಿರುಕುಳ ನೀಡಿದ್ದ ಎಂದು ದೂರು ಕೂಡ ದಾಖಲಿಸಲಾಗಿತ್ತು.
ಪತ್ರಿಕೆಯನ್ನು ತನ್ನ ಅಕ್ರಮ ದಂಧೆಗಳ ರಕ್ಷಣೆಗೆ ಹಾಗೂ ಅಧಿಕಾರಿಗಳು, ಸಾರ್ವಜನಿಕರಿಂದ ಹಣ ವಸೂಲಿಗಾಗಿ ಬಳಸಿಕೊಳ್ಳುತ್ತಿದ್ದ ಎನ್ನಲಾಗಿದೆ. ಅಲ್ಲದೇ ಯಲಹಂಕ ಮಿನಿ ವಿಧಾನಸೌಧ, ಬಿಬಿಎಂಪಿ ಸೇರಿದಂತೆ ಇತರೆ ಅಧಿಕಾರಿಗಳ ಬಳಿ ಹಣ ವಸೂಲಿ ಮಾಡಿದ್ದ ಈತನ ವಿರುದ್ಧ ಯಲಹಂಕ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿತ್ತು.
ಐಪಿಎಸ್ ಸೆಕ್ಷನ್ 354A, 341, 376, 509 ಮತ್ತು 506 ಅಡಿಯಲ್ಲಿ ಯಲಹಂಕ ಠಾಣೆಯ ಪೊಲೀಸರು ರೌಡಿ ಶೀಟರ್ ಅನಿಲ್ ರಾಜ್ ನನ್ನು ಬಂಧಿಸಿದ್ದಾರೆ.