ಭಾರತದ ವಲಸೆ ದುರಂತದ ಸಂಕೇತವಾಗಿದ್ದ ಕಾರ್ಮಿಕ ಹೇಳಿದ್ದೇನು?

ಕೊರೊನಾ ವೈರಸ್‌ ಕಾರಣದಿಂದಾಗಿ ದೇಶಾದ್ಯಂತ ಲಾಕ್‌ಡೌನ್‌ ಮಾಡಿದ ಸಂದರ್ಭದಲ್ಲಿ ವಲಸೆ ಕಾರ್ಮಿಕರೊಬ್ಬರು ದೆಹಲಿಯ ರಸ್ತೆಬದಿಯಲ್ಲಿ ಕುಳಿತು ಅಳುತ್ತಿದ್ದರು. ಅಳುತ್ತಿದ್ದ ಆ ಕಾರ್ಮಿಕನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಆತನನ್ನು ಬಿಹಾರದ ಬೆಗುಸರೈ ಜಿಲ್ಲೆಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಆತ ತನ್ನ ಪತ್ನಿ ಮತ್ತು ಮಗಳನ್ನು ಭೇಟಿ ಮಾಡಲು ಅವಕಾಶ ಸಿಕ್ಕಿದೆ.

ತನ್ನ ಎಳೆಯ ಮಗನ ಸಾವಿನ ಸುದ್ದಿ ಕೇಳಿದ 38 ವರ್ಷದ ರಾಂಪುಕರ್‌ ಪಂಡಿತ್, ಬಿಹಾರದಲ್ಲಿರುವ ತನ್ನ ಊರಿಗೆ ದೆಹಲಿಯಿಂದ ಪ್ರಯಾಣ ಬೆಳೆಸಿದ್ದರು. ಇತ್ತೀಚೆಗೆ ಶ್ರಮಿಕ್‌ ಸ್ಪೆಷಲ್‌ ರೈಲಿನ ಮೂಲಕ ಬಿಹಾರಕ್ಕೆ ಆತನನ್ನು ತಲುಪಿಸಿ, ಬೆಗುಸರಾಯ್ ಪಟ್ಟಣದ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಅಧಿಕಾರಿಗಳು ಭಾನುವಾರ ಅವರನ್ನು ಆಸ್ಪತ್ರೆಗೆ ಕರೆತಂದು ಆರೊಗ್ಯ ಪರೀಕ್ಷೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಆತ ತನ್ನ ಪತ್ನಿ ಮತ್ತು ಮಗಳನ್ನು ದೂರದಲ್ಲಿ ನಿಂತು ಭೇಟಿ ಮಾಡಿದ್ದಾರೆ.

“ನಾನು ಕಣ್ಣು ತೆರೆದಾಗ ನನ್ನ ತಲೆ ತಿರುಗಿದಂತಾಯಿತು, ನಾನು ತುಂಬಾ ದುರ್ಬಲನಾಗಿದ್ದೇನೆ ಎನ್ನಿಸಿತು. ಅಧಿಕಾರಿಗಳು ಕ್ವಾರಂಟೈನ್‌ ಸ್ಥಳದಿಂದ ನನ್ನನ್ನು ಆಸ್ಪತ್ರೆಗೆ ಕರೆ ತಂದರು. ಗಂಟಲು ಮತ್ತು ಮೂಗಿನಿಂದ ದ್ರವಗಳ ಸ್ಯಾಂಪಲ್‌ ತೆಗೆದುಕೊಂಡು ಪರೀಕ್ಷಿಸುತ್ತಿದ್ದಾರೆ. ಇನ್ನೂ ಫಲಿತಾಂಶ ಬಂದಿಲ್ಲ” ಎಂದು ರಾಂಪುಕರ್ ತಿಳಿಸಿದ್ದಾರೆ.

“ತನ್ನ ಪತ್ನಿ ಮತ್ತು ಮಗಳು ಪೂನಮ್ ಅವರನ್ನು ಭಾನುವಾರ ಸಂಜೆ ಜಿಲ್ಲೆಯ ಖೋಡವಾಂಡ್‌ಪುರ ಬ್ಲಾಕ್‌ನಲ್ಲಿರುವ ಆಸ್ಪತ್ರೆಯಲ್ಲಿ ಭೇಟಿ ಮಾಡಿದೆ. ಆದರೆ, ಅವರನ್ನು ದೂರದಿಂದಲೇ ಭೇಟಿ ಮಾಡಲು ವೈದ್ಯರು ಅವಕಾಶ ಮಾಡಿಕೊಟ್ಟರು. ಇಬ್ಬರೂ ಮಾಸ್ಕ್‌ಗಳನ್ನು ಧರಿಸಿ ಹಾಸಿಗೆಯಿಂದ ಸ್ವಲ್ಪ ದೂರದಲ್ಲಿ ನಿಲ್ಲುವಂತೆ ವೈದ್ಯರು ಹೇಳಿದರು” ಎಂದು ರಾಂಪುಕರ್ ಹೇಳಿದ್ದಾರೆ.

“ನಾವೆಲ್ಲರೂ ಅಳುತ್ತಿದ್ದೆವು, ನಾವು ಒಬ್ಬರನ್ನೊಬ್ಬರು ತಬ್ಬಿಕೊಳ್ಳಬೇಕೆಂದು ಬಯಸಿದ್ದೆವು. ನನ್ನ ಮಗಳನ್ನು ಸಮಾಧಾನ ಮಾಡುವುದು ಕಷ್ಟವಾಯಿತು.ಆದರೂ 10 ನಿಮಿಷ ಮಾತನಾಡಲು ಸಾಧ್ಯವಾಯಿತು”ಎಂದು ಅವರು ಹೇಳಿದರು.

ನನ್ನ ಜೊತೆಗೆ ಒಬ್ಬ ಸ್ನೇಹಿತನೂ ಬಂದಿದ್ದ, ಆತನೂ ಬಳಲಿದ್ದ ಯಾರದ್ದೋ ಸಹಾಯದಿಂದ ನಾವು ಊರು ತಲುಪಿದ್ದೇನೆ. ನಮ್ಮಂತಹ ಹಲವಾರು ಮಂದಿ ನಿರ್ಗತಿಕರಾಗಿದ್ದಾರೆ ಅವರಿಗೆಲ್ಲರಿಗೂ ಸಹಾಯ ದೊರೆತರೆ ಒಳ್ಳೆಯದು ಎಂದು ಆತ ಹೇಳಿದ್ದಾನೆ.

ದೆಹಲಿ ರಸ್ತೆಬದಿಯಲ್ಲಿ ಕುಳಿತು ಫೋನ್‌ನಲ್ಲಿ ಮಾತನಾಡುತ್ತ ಅಳುತ್ತಿದ್ದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿತ್ತು. ಈ ಫೋಟೋ ವೈರಲ್‌ ಆದ ನಂತರ ರಾಂಪುಕರ್‌ ಭಾತರದ ವಲಸೆ ಬಿಕ್ಕಟ್ಟಿನ ಕನ್ನಡಿಯಾಗಿದ್ದರು.

ಫೋಟೋ ವೈರಲ್ ಆದ ನಂತರ, ವಲಸೆ ಆತನಿಗೆ ತಕ್ಷಣದ ಸಹಾಯ ದೊರಕಿತು ಮತ್ತು ಆತ ಬಿಹಾರದಲ್ಲಿರುವ ತಮ್ಮ ಮನೆಗೆ ತಲುಪಲು ಸಾಧ್ಯವಾಯಿತು.

ಸುಮಾರು ದಿನಗಳ ಕಾಲ ನಿಜಾಮುದ್ದೀನ್ ಸೇತುವೆಯ ಕೆಳಗೆ ಸಿಲುಕಿಕೊಂಡಿದ್ದ ರಾಂಪುಕರ್‌ನನ್ನು ದೆಹಲಿಯ ಆಸ್ಪತ್ರೆಗೆ ಕರೆದೊಯ್ದು ಕೊರೊನಾ ಪರೀಕ್ಷೆ ನಡೆಸಲಾಗಿತ್ತು. ಸೋಂಕಿ ಇಲ್ಲದಿರುವುದು ಕಂಡು ಬಂದ ನಂತರ ಆತ ಶ್ರಮಿಕ್‌ ಸ್ಪೆಷಲ್‌ ರೈಲಿಗೆ ಬುಕ್‌ ಮಾಡಿಕೊಂಡು ತನ್ನೂರು ತಲುಪಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “ಭಾರತದ ವಲಸೆ ದುರಂತದ ಸಂಕೇತವಾಗಿದ್ದ ಕಾರ್ಮಿಕ ಹೇಳಿದ್ದೇನು?

  • September 30, 2020 at 10:58 pm
    Permalink

    Right away I am going to do my breakfast, once having my breakfast coming yet
    again to read further news.

    Reply

Leave a Reply

Your email address will not be published.

Verified by MonsterInsights