ವಿಶ್ವದಾದ್ಯಂತ ಕೊರೊನಾ ಪ್ರಕರಣಗಳಲ್ಲಿ ಇಟಲಿ ಹಿಂದಿಕ್ಕಿ 6ನೇ ಸ್ಥಾನಕ್ಕೆ ಜಿಗಿದ ಭಾರತ…!

ಭಾರತದಲ್ಲಿ ಕೊರೋನವೈರಸ್ ಪ್ರಕರಣಗಳ ಸಂಖ್ಯೆ 2.35 ಲಕ್ಷಕ್ಕೆ ಏರಿಕೆಯಾಗಿದ್ದು, ಭಾತರ ಇಟಲಿಗಿಂತ ವಿಶ್ವದಾದ್ಯಂತ ಆರನೇ ಸ್ಥಾನಕ್ಕೆ ಜಿಗಿದಿದೆ.

ಹೌದು…. 2.35 ಲಕ್ಷ ಕೊರೊನಾವೈರಸ್ ಪ್ರಕರಣಗಳನ್ನು ದಾಟಿ ಇಟಲಿ ಹಿಂದಿಕ್ಕಿ 6 ನೇ ಸ್ಥಾನಕ್ಕೆ ಭಾರತ ಜಿಗಿದಿದೆ. ಈವರೆಗೆ ಸಾವಿನ ಸಂಖ್ಯೆ 6,600 ದಾಟಿದೆ ಎಂದು ರಾಜ್ಯ ಸರ್ಕಾರಗಳು ಮತ್ತು ಅಮೆರಿಕದ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಅಂಕಿ ಅಂಶಗಳು ತಿಳಿಸಿವೆ. ಕೊರೊನಾ ಪ್ರಕರಣಗಳ ವಿಷಯದಲ್ಲಿ, ಕೇವಲ ಒಂದು ವಾರದ ಹಿಂದೆ ಒಂಬತ್ತನೇ ಸ್ಥಾನಕ್ಕೆ ಭಾರತ ಬಂದಿತ್ತು.

ಮೇ 1 ರಿಂದ ದೊಡ್ಡ ನಗರ‌ಗಳಿಂದ ತಮ್ಮ ಹಳ್ಳಿಗಳಿಗೆ ವಿಶೇಷ ರೈಲುಗಳಲ್ಲಿ ವಲಸೆ ಕಾರ್ಮಿಕರ ಸಂಚಾರಕ್ಕೆ ಕೇಂದ್ರವು ಅವಕಾಶ ನೀಡಿದಾಗಿನಿಂದ ರಾಜ್ಯಗಳಲ್ಲಿ ಸೋಂಕಿತರ ಸಂಖ್ಯೆ ದ್ವಿಗುಣಗೊಂಡಿದೆ. ಕೆಲ ರಾಜ್ಯಗಳಲ್ಲಿ  10 ಪಟ್ಟು ಸೋಂಕಿತರ ಸಂಖ್ಯೆ ಹೆಚ್ಚಾಗಿದೆ.

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಒಟ್ಟು ದೃಢಪಡಿಸಿದ ಪ್ರಕರಣಗಳ ಸಂಖ್ಯೆ 2,26,770 ಕ್ಕೇರಿದ್ದು, ಸಾವಿನ ಸಂಖ್ಯೆ 6,348 ಕ್ಕೆರಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಒಟ್ಟು ದೃಢಪಡಿಸಿದ ಪ್ರಕರಣಗಳು, ಸಕ್ರಿಯ ಪ್ರಕರಣಗಳು ಮತ್ತು ಸಾವುಗಳ ವಿಷಯದಲ್ಲಿ ಮಹಾರಾಷ್ಟ್ರವು ಅಗ್ರಸ್ಥಾನದಲ್ಲಿದೆ. ಒಟ್ಟು ಪ್ರಕರಣಗಳ ವಿಷಯದಲ್ಲಿ ದೆಹಲಿ ತಮಿಳುನಾಡಿನ ನಂತರ ಮೂರನೇ ಸ್ಥಾನದಲ್ಲಿದ್ದರೂ, ಸಕ್ರಿಯ ಪ್ರಕರಣಗಳ ವಿಷಯದಲ್ಲಿ ದೆಹಲಿ ಎರಡನೇ ಸ್ಥಾನದಲ್ಲಿದೆ. ಮಾರಣಾಂತಿಕ ಪ್ರಕರಣಗಳಲ್ಲಿ ಗುಜರಾತ್ ಎರಡನೇ ಸ್ಥಾನದಲ್ಲಿದ್ದರೆ, ದೆಹಲಿ ಮೂರನೇ ಸ್ಥಾನದಲ್ಲಿದೆ.

ಮಹಾರಾಷ್ಟ್ರ 2,436 ಹೊಸ ಪ್ರಕರಣಗಳನ್ನು ವರದಿ ಮಾಡಿದ್ದು ಸೋಂಕಿತರ ಸಂಖ್ಯೆ 80,229 ಕ್ಕೆ ತಲುಪಿದೆ. ಆದರೆ ವೈರಸ್ ಸೋಂಕಿನಿಂದ 139 ಜನರು ಸಾವನ್ನಪ್ಪಿದ ನಂತರ ಸಾವಿನ ಸಂಖ್ಯೆ 2,849 ಕ್ಕೆ ಏರಿದೆ. ಗುಜರಾತ್‌ನಲ್ಲಿ ದೃಢಪಡಿಸಿದ ಪ್ರಕರಣಗಳ ಸಂಖ್ಯೆ 19,199 ಮತ್ತು ಸಾವಿನ ಸಂಖ್ಯೆ 1,190 ಆಗಿದೆ. ಪಶ್ಚಿಮ ಬಂಗಾಳದಲ್ಲಿ ದಾಖಲೆಯ ಹೆಚ್ಚಳ ದಾಖಲಾಗಿದ್ದು, 427 ಹೊಸ ಪ್ರಕರಣಗಳು 7,303 ಕ್ಕೆ ತಲುಪಿದೆ. ಕರ್ನಾಟಕವು 500 ಕ್ಕೂ ಹೆಚ್ಚು ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದ್ದು, ರಾಜ್ಯದಲ್ಲಿ ಒಟ್ಟು ಸೋಂಕುಗಳ ಸಂಖ್ಯೆ 4,835 ಕ್ಕೆ ತಲುಪಿದೆ.  ತಮಿಳುನಾಡಿನಲ್ಲಿ ಶುಕ್ರವಾರ 1,438 ಹೊಸ ಪ್ರಕರಣಗಳು ಮತ್ತು 12 ಸಾವುಗಳು ದಾಖಲಾಗಿದ್ದು, ಪ್ರಕರಣಗಳ ಸಂಖ್ಯೆ 28,694 ಮತ್ತು ಸಾವಿನ ಸಂಖ್ಯೆ 232 ಕ್ಕೆ ತಲುಪಿದೆ.

ಕೇರಳದಲ್ಲಿ ಮೊದಲ ಒಂದೇ ದಿನದಲ್ಲಿ ಸೋಂಕಿತರ ಸಂಖ್ಯೆ 111 ರಷ್ಟು ಏರಿಕೆಯಾಗಿ 1,699 ಕ್ಕೆ ತಲುಪಿದೆ. ರಾಜ್ಯದಲ್ಲಿ ಸುಮಾರು 1.77 ಲಕ್ಷ ಜನರು ವೀಕ್ಷಣೆಯಲ್ಲಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights