ಕೋವಿಡ್ ಮಾರ್ಗಸೂಚಿ ಬಿಡುಗಡೆ: 17 ದಿನಗಳ ಬಳಿಕ ಕ್ವಾರಂಟೈನ್‌ ಅಂತ್ಯ – ಕೊರೊನಾ ಟೆಸ್ಟ್ ಅಗತ್ಯವಿಲ್ಲ

ಕೇಂದ್ರ ಆರೋಗ್ಯ ಸಚಿವಾಲಯ ಕೋವಿಡ್ ಸೋಂಕಿತ ರೋಗಿಗಳಿಗೆ ಪರಿಷ್ಕೃತ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಪರಿಷ್ಕೃತ ಮಾರ್ಗಸೂಚಿ ಪ್ರಕಾರ, ಕೊರೊನಾ ಸೋಂಕು ಪತ್ತೆ ಪರೀಕ್ಷೆ ನಡೆಸಿದ ದಿನದಿಂದ 17 ದಿನಗಳು ಪೂರೈಸಿದ ಬಳಿಕ ಕ್ವಾರಂಟೈನ್‌ ಅಂತ್ಯಗೊಳಿಸಬಹುದು. ರೋಗ ಲಕ್ಷಣಗಳು ಕಂಡು ಬಂದು ಚಿಕಿತ್ಸೆ ನಂತರ 10 ದಿನಗಳವರೆಗೆ ಜ್ವರ ಇಲ್ಲದಿದ್ದರೆ ಮತ್ತೆ ಪರೀಕ್ಷೆಗೆ ಒಳಪಡಿಸದೆ ಕ್ವಾರಂಟೈನ್‌ ಮುಕ್ತಾಯಗೊಳಿಸಬಹುದು.

ಜೊತೆಗೆ ಸೌಮ್ಯವಾದ ರೋಗ ಲಕ್ಷಣಗಳು ಕಂಡು ಬರುವ ರೋಗಿಗಳು ತಮ್ಮ ಕುಟುಂಬದವರ ಸಂಪರ್ಕವನ್ನು ತಪ್ಪಿಸಲು ತಮ್ಮ ಮನೆಯಲ್ಲಿ ಸ್ವಯಂ ಪ್ರತ್ಯೇಕತೆ ವ್ಯವಸ್ಥೆ ಹೊಂದಿದ್ದರೆ ಮನೆಯಲ್ಲೇ ಕ್ವಾರಂಟೈನ್‌ಗೆ ಒಳಗಾಗಬಹುದು. ರೋಗಿಯನ್ನು ಪೂರ್ವ ರೋಗ ಲಕ್ಷಣ ಆಥವಾ ಸೌಮ್ಯವಾದ ಲಕ್ಷಣ ಪ್ರಕರಣ ಎಂದು ವೈದ್ಯಕೀಯ ಅಧಿಕಾರಿ ಘೋಷಿಸಬೇಕು. ಕಣ್ಗಾವಲು ತಂಡಗಳು ನಿರಂತರವಾಗಿ ರೋಗಿಗಳ ಆರೋಗ್ಯ ಸ್ಥಿತಿ ಕುರಿತು ಜಿಲ್ಲಾ ಕಣ್ಗಾವಲು ಅಧಿಕಾರಿಗೆ ಮಾಹಿತಿ ನೀಡಬೇಕು.

ಮಾತ್ರವಲ್ಲದೇ ಸೋಂಕಿತರು ಆರೋಗ್ಯ ಸೇತು ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡಿರಬೇಕು. ಇದಕ್ಕೆ ವೈಫೈ ಅಥವಾ ಬ್ಲೂಟೂತ್‌ ವ್ಯವಸ್ಥೆ ಕಲ್ಪಿಸಿ, ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು ಎಂಬೆಲ್ಲಾ ಷರತ್ತುಗಳು ಈ ಹೊಸ ಮಾರ್ಗಸೂಚಿಯಲ್ಲಿ ಅಡಕವಾಗಿದೆ.

ದಾಖಲೀಕರಣಕ್ಕೆ ಐಸಿಎಂಆರ್‌ ಮಾರ್ಗಸೂಚಿ
 ಸಾವಿನ ದವಡೆಗೆ ತಳ್ಳುವ ಕೋವಿಡ್ ಸೋಂಕನ್ನು ‘ಮರಣಕ್ಕೆ ಮೂಲ ಕಾರಣ’ ಎಂದು ಪರಿಗಣಿಸಲು ಐಸಿಎಂಆರ್‌ ನಿರ್ಧರಿಸಿದೆ. ಮಾತ್ರವಲ್ಲದೇ ನ್ಯುಮೋನಿಯಾ, ಹೃದಯಕ್ಕೆ ಹಾನಿ ಮಾಡುವುದು, ರಕ್ತ ನಾಳಗಳಲ್ಲಿ ರಕ್ತ ಹೆಪ್ಪುಗಟ್ಟಲು ಕಾರಣವಾಗುವುದೂ ಸೇರಿ ಹಲವು ರೀತಿಯಲ್ಲಿ ಮಾನವನ ದೇಹವನ್ನು ಆಂತರಿಕವಾಗಿ ಹಾನಿಗೊಳಿಸುತ್ತದೆ.

ಕೆಲವೊಂದು ಕೊರೊನಾ ಶಂಕಿತ ಪ್ರಕರಣಗಳಲ್ಲಿ ವ್ಯಕ್ತಿಗಳು ಆಸ್ಪತ್ರೆಗೆ ತರುವಾಗಲೇ ಮೃತಪಟ್ಟಿದ್ದರೆ ಅದು ಮೆಡಿಕೊ ಲೀಗಲ್‌ ಪ್ರಕರಣವಾಗುತ್ತದೆ.ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ಶವ ಪರೀಕ್ಷೆ ನಡೆಸಬೇಕಾಗುತ್ತದೆ. ಆದರೆ ಕೋವಿಡ್ ಪ್ರಕರಣದಲ್ಲಿ ಇದಕ್ಕೆ ವಿನಾಯಿತಿ ನೀಡಬಹುದು ಎಂದು ಐಸಿಎಂಆರ್ ತಾನು ಸೋಮವಾರ ಹೊರಡಿಸಿರುವ ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಿದೆ. ಒಂದು ವೇಳೆ ಸೋಂಕಿತ ರೋಗಿ ಆಸ್ಪತ್ರೆಗಳಲ್ಲಿ ಮೃತಪಟ್ಟರೆ, ಶವಪರೀಕ್ಷೆಯ ಅಗತ್ಯವಿಲ್ಲ. ಚಿಕಿತ್ಸೆ ನೀಡುತ್ತಿದ್ದ ವೈದ್ಯರೇ ಮರಣ ಪ್ರಮಾಣಪತ್ರ ನೀಡಬಹುದು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights