ದೇಶಾದ್ಯಂತ ಕೊರೊನಾ ರೌದ್ರನರ್ತನ : 80 ಸಾವಿರ ಗಡಿಯಂಚಿನಲ್ಲಿ ಸೋಂಕಿತರ ಸಂಖ್ಯೆ!

ದೇಶಾದ್ಯಂತ ಕೊರೋನಾ ವೈರಸ್​​ ರೌದ್ರನರ್ತನವಾಡುತ್ತಿದ್ದು. ಕಾಡ್ಗಿಚ್ಚಿನಂತೆ ವೇಗವಾಗಿ ಹರಡುತ್ತಿದೆ.  ಆತಂಕಕಾರಿ ವಿಚಾರ ಅಂದರೆ ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಬರೋಬ್ಬರಿ 3,604 ಮಂದಿಗೆ ಎಗ್ಗಿಲ್ಲದೇ ಸೋಂಕು ಹರಡಿದೆ. ಆ ಮೂಲಕ ದೇಶದಲ್ಲಿ ಈವರೆಗೆ ಕೊರೊನಾ ಸೋಂಕಿತರ ಸಂಖ್ಯೆ 70,756ಕ್ಕೆ ಏರಿಕೆಯಾಗಿದೆ.

ಹೌದು.. ಇಂದು ಕೇಂದ್ರ ಆರೋಗ್ಯ ಇಲಾಖೆ ಹೆಲ್ತ್​​​ ಬುಲೆಟಿನ್ ಬಿಡುಗಡೆ ಮಾಡಿದ್ದು, ಈ ವರೆಗೆ ದೇಶದಲ್ಲಿ ಒಟ್ಟು 70,756 ಸೋಂಕಿತರಿದ್ದು, ಇದರಲ್ಲಿ ಕೇವಲ 22454 ಮಂದಿ ಸಂಪೂರ್ಣವಾಗಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಉಳಿದ 46008 ಸಕ್ರಿಯ ಪ್ರಕರಣಗಳಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ.

ಇಲ್ಲಿಯತನಕ 2293 ಮಂದಿ ಮಾರಕ ಕೊರೋನಾಗೆ ಬಲಿಯಾಗಿದ್ದಾರೆ. ಶರವೇಗದಲ್ಲಿ ಹರಡುತ್ತಿರುವ ಕೊರೊನಾದಿಂದಾಗಿ ದೇಶದ ಜನರಲ್ಲಿ ಆತಂಕ ಮತ್ತಷ್ಟು ಹೆಚ್ಚಾಗತೊಡಗಿದೆ.ಕೊಂಚ ನಿಟ್ಟುಸಿರು ಬಿಡುವ ವಿಚಾರ ಅಂದ್ರೆ ಕೊರೋನಾ ಇನ್ನೂ ಸಮುದಾಯ ಹಂತ ತಲುಪಿಲ್ಲ ಎಂದು ಕೇಂದ್ರ ಸ್ಪಷ್ಟಪಡಿಸಿದೆ.

ದೇಶದಲ್ಲೀಗ ಮಾರಾಕ ಕೊರೋನಾ ವೈರಸ್​ ಮತ್ತಷ್ಟು ವ್ಯಾಪಕವಾಗಿ ಹರಡುತ್ತಿದೆ. ಇದರ ಪರಿಣಾಮ ಮಹಾರಾಷ್ಟ್ರ ಬೆನ್ನಲ್ಲೀಗ ತಮಿಳುನಾಡು ಭಾರತದ ಕೊರೋನಾ ಹಾಟ್‌ಸ್ಪಾಟ್‌ ಕೇಂದ್ರವಾಗಿ ಬದಲಾಗುತ್ತಿದೆ. ಆರಂಭದಲ್ಲಿ ತಹಬದಿಗೆ ಬಂದಿದ್ದ ಕೋವಿಡ್​​-19 ಈಗ ನಿಯಂತ್ರಣ ತಪ್ಪಿದ ಕಾರಣ ಸೋಂಕಿತರ ಸಂಖ್ಯೆ 8 ಸಾವಿರಕ್ಕೇರಿದೆ ಎಂದು ತಿಳಿದು ಬಂದಿದೆ.

ಅತ್ತ ವಿಶ್ವದ ದೊಡ್ಡಣ್ಣ ಅಮೆರಿಕವನ್ನು ಕೊರೋನಾ ವೈರಸ್‌ ಬಿಟ್ಟೂ ಬಿಡದೆ ಕಾಡುತ್ತಿದ್ದು, ಒಟ್ಟಾರೆ ಸಾವಿನ ಸಂಖ್ಯೆ 80,352ಕ್ಕೆ ಏರಿಕೆಯಾಗಿದೆ. ಇನ್ನೂ ಸೋಂಕು ಪೀಡಿತರ ಸಂಖ್ಯೆ 13,46,723ಕ್ಕೆ ಏರಿಕೆಯಾಗಿದೆ. ಹೀಗಾಗಿ ಸಾವಿನ ಸಂಖ್ಯೆ ಮತ್ತಷ್ಟು ಏರುವ ಸಾಧ್ಯತೆ ಇದೆ.  ಚೀನಾ, ಅಮೆರಿಕಾ ಬೆನ್ನಲ್ಲೀಗ ಭಾರತದ ಸರದಿ, ಮುಂದೆ ದೇಶದಲ್ಲಿ ಮತ್ತಷ್ಟು ಪ್ರಕರಣಗಳು ಹೆಚ್ಚಾಗಲಿವೆ ಎನ್ನಲಾಗುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights