ತಿರುಪತಿ ತಿಮ್ಮಪ್ಪನ ಟ್ರಯಲ್ ದರ್ಶನ ಪಡೆದವನಿಗೆ ಕೊರೊನಾ; ಸೋಂಕಿತ ನಾಪತ್ತೆ!
ಕೊರೊನಾ ಲಾಕ್ಡೌನ್ನಿಂದಾಗಿ ಪ್ರಮುಖ ದೇವಾಲಯಗಳ ದರ್ಶನವನ್ನು ನಿಷೇಧಿಸಲಾಗಿತ್ತು. ಲಾಕ್ಡೌನ್ ಸಡಿಲಿಕೆಯ ನಂತರ, ತಿರುಪತಿ ತಿರುಮಲ ದೇವಾಲಯದಲ್ಲಿ ಟ್ರಯಲ್ ದರ್ಶನದಲ್ಲಿ ಬಾಗಿಯಾಗಿದ್ದ ವ್ಯಕ್ತಿಯೊಬ್ಬನಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತ ವ್ಯಕ್ತಿ ಎಸ್ಕೇಪ್ ಆಗಿದ್ದಾನೆ.
ತಿರುಮಲದ ಬಾಲಾಜಿ ನಗರದ ನಿವಾಸಿಯಾದ 32 ವರ್ಷದ ಸೋಂಕಿತ ವ್ಯಕ್ತಿ ಕಾಣೆಯಾಗಿದ್ದು, ಆತನಿಗಾಗಿ ತಿರುಮಲ ಮತ್ತು ತಿರುಪತಿಯಲ್ಲಿ ಶೋಧ ನಡೆಸಲಾಗುತ್ತಿದೆ. ಟಿಟಿಡಿಯವರು ಆಯೋಜಿಸಿದ್ದ ಮೂರು ದಿನಗಳ ಪ್ರಯೋಗಾತ್ಮಕ ದರ್ಶನದಲ್ಲಿ ಆತ ದೇವರ ದರ್ಶನ ಪಡೆದಿದ್ದ.