ಫ್ಯಾಕ್ಟ್‌ಚೆಕ್ : ಚಿರತೆಗೆ ಹೆಂಡ ಕುಡಿಸಿ ಸೆಲ್ಫಿ ತೆಗೆದುಕೊಳ್ಳಲಾಗಿದೆ ಎಂಬುದು ನಿಜವೇ?
ಜನರ ಗುಂಪೊಂದು ಚಿರತೆಯನ್ನು ಹಿಂಬಾಲಿಸುತ್ತಿದ್ದು, ಕೆಲವರು ಅದರ ಮೇಲೆ ಸವಾರಿ ಮಾಡುತ್ತ ಸೆಲ್ಫಿ ತೆಗೆದುಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
This leopard drank desi liquor from a bhatti of desi daru.. Villagers had to drop him to his abode.. 😃😃
Liquor affects everyone in a similar manner pic.twitter.com/c3psCttWR3— Maj Gen Harsha Kakar (@kakar_harsha) September 1, 2023
“ಚಿರತೆಯೊಂದಕ್ಕೆ ಮದ್ಯ ಕುಡಿಸಿ ಅದರ ಮೇಲೆ ಸವಾರಿ ಮಾಡುತ್ತ ಸೆಲ್ಫಿ ತೆಗೆದುಕೊಳ್ಳುತ್ತಿರುವ ಗ್ರಾಮಸ್ಥರು, ಹೆಂಡ ಕುಡಿದ ಮೇಲೆ ಎಲ್ಲರೂ ಒಂದೇ” ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋವನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಘಟನೆಗೆ ಸಂಬಂಧಿಸಿದಂತೆ ಹಲವು ವರದಿಗಳು ಲಭ್ಯವಾಗಿವೆ. ಅದರಲ್ಲಿ ABP ನ್ಯೂಸ್‌ನಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ ಇಂದೋರ್‌ನಿಂದ ಸುಮಾರು 80 ಕಿ.ಮೀ ದೂರದಲ್ಲಿರುವ ಇಕ್ಲೇರಾ ಗ್ರಾಮದಲ್ಲಿ ಅಸ್ವಸ್ಥಗೊಂಡಿರುವ ಚಿರತೆಯನ್ನು ಸುತ್ತುವರೆದ ಗ್ರಾಮಸ್ಥರ ಗುಂಪು, ಅದರ ಮೇಲೆ ಕುಳಿತು ಸೆಲ್ಫಿ ತೆಗೆದುಕೊಂಡು ಅದರ ಮೇಲೆ ಸವಾರಿ ಮಾಡಲು ಪ್ರಯತ್ನಿಸಿದೆ ಎಂದು ವರದಿ ಮಾಡಿದೆ
ದಿನಾಂಕ 30 ಆಗಸ್ಟ್ 2023ದಂದು ದೇವಾಸ್‌ನ ಇಕ್ಲೇರಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ರಕ್ಷಿಸಿ, ಚಿಕಿತ್ಸೆ ನೀಡುತ್ತಿದ್ದಾರೆ.ಚಿರತೆಯನ್ನ ಸುತ್ತುವರಿದು, ಅದರ ಮೇಲೆ ಆನೆ ಮೇಲೆ ಕುಳಿತಂತೆ ಕುಳಿತು ಕಪಿಚೇಷ್ಟೆ ಆಡಿದ್ದಾರೆ. ಸುಮಾರು 15ರಿಂದ 20 ಜನರು ಚಿರತೆ ಬಳಿ ಸುತ್ತುವರಿದು ಅದರ ಜೊತೆಗೆ ಹುಚ್ಚಾಟ ಮೆರೆದಿದ್ದಾರೆ.
A visibly-ill Leopard was harassed by residents in Eklera village of MP’s Dewas district on Tuesday. Sensing that the Leopard wasn’t well, villagers hounded it, clicked selfies and even seemingly tried to ride it. @NewIndianXpress @TheMornStandard @santwana99 @Shahid_Faridi_ pic.twitter.com/OR4zS9rqIb
— Anuraag Singh (@anuraag_niebpl) August 30, 2023
ಒಟ್ಟಾರೆಯಾಗಿ ಹೇಳುವುದಾದರೆ, ದೇವಾಸ್‌ನ ಇಕ್ಲೇರಾ ಎಂಬ ಗ್ರಾಮದ ವ್ಯಾಪ್ತಿಯಲ್ಲಿ ಅರಣ್ಯ ಪ್ರದೇಶದಿಂದ ಅಸ್ವಸ್ಥಗೊಂಡಿದ್ದ ಚಿರತೆಯ ಮೇಲೆ ಸವಾರಿ ಮಾಡಲು ಯತ್ನಿಸಿ ಗ್ರಾಮಸ್ಥರು ಸೆಲ್ಫಿ ತೆಗೆದುಕೊಂಡಿದ್ದಾರೆ. ಈ ಘಟನೆಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಚಿರತೆಗೆ ಹೆಂಡ ಕುಡಿಸಿ ಸವಾರಿ ಮಾಡಲಾಗಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಮೀಸಲಾತಿ ಬಗ್ಗೆ ದಾರಿ ತಪ್ಪಿಸುವಂತ ಪೋಸ್ಟ್ ಹಂಚಿಕೆ