ತಿರುಪತಿ ತಿಮ್ಮಪ್ಪನ ಟ್ರಯಲ್ ದರ್ಶನ ಪಡೆದವನಿಗೆ ಕೊರೊನಾ; ಸೋಂಕಿತ ನಾಪತ್ತೆ!

ಕೊರೊನಾ ಲಾಕ್‌ಡೌನ್‌ನಿಂದಾಗಿ ಪ್ರಮುಖ ದೇವಾಲಯಗಳ ದರ್ಶನವನ್ನು ನಿಷೇಧಿಸಲಾಗಿತ್ತು. ಲಾಕ್‌ಡೌನ್‌ ಸಡಿಲಿಕೆಯ ನಂತರ, ತಿರುಪತಿ ತಿರುಮಲ ದೇವಾಲಯದಲ್ಲಿ ಟ್ರಯಲ್‌ ದರ್ಶನದಲ್ಲಿ ಬಾಗಿಯಾಗಿದ್ದ ವ್ಯಕ್ತಿಯೊಬ್ಬನಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತ ವ್ಯಕ್ತಿ ಎಸ್ಕೇಪ್‌ ಆಗಿದ್ದಾನೆ.

ತಿರುಮಲದ ಬಾಲಾಜಿ ನಗರದ ನಿವಾಸಿಯಾದ 32 ವರ್ಷದ ಸೋಂಕಿತ ವ್ಯಕ್ತಿ ಕಾಣೆಯಾಗಿದ್ದು, ಆತನಿಗಾಗಿ ತಿರುಮಲ ಮತ್ತು ತಿರುಪತಿಯಲ್ಲಿ ಶೋಧ ನಡೆಸಲಾಗುತ್ತಿದೆ. ಟಿಟಿಡಿಯವರು ಆಯೋಜಿಸಿದ್ದ ಮೂರು ದಿನಗಳ ಪ್ರಯೋಗಾತ್ಮಕ ದರ್ಶನದಲ್ಲಿ ಆತ ದೇವರ ದರ್ಶನ ಪಡೆದಿದ್ದ.

ಕಾಣೆಯಾಗಿರುವ ಸೋಂಕಿತ ವ್ಯಕ್ತಿಯು ಇತ್ತೀಚೆಗೆ ತಮಿಳುನಾಡಿಗೆ ಹೋಗಿಬಂದಿದ್ದ. ಭಾನುವಾರ ಆತ ತಿರುಪತಿಗೆ ಬರುವಾಗ ಅಲಿಪಿರಿ ಚೆಕ್ ಪೋಸ್ಟ್ ನಲ್ಲಿ ಪರೀಕ್ಷೆಗಾಗಿ ಗಂಟಲು ದ್ರವದ ಮಾದರಿ ನೀಡಿದ್ದ. ಪರೀಕ್ಷೆ ವರದಿ ಬಂದಿದ್ದು ಕೊರೋನಾ ಪಾಸಿಟಿವ್ ಬಂದಿದೆ.
ಕೂಡಲೇ ತಿರುಮಲ ಆರೋಗ್ಯಾಧಿಕಾರಿಗಳು ಆತನ ಮನೆಗೆ ದಾವಿಸಿದ್ದಾರೆ, ಆದರೆ ಆತ ಮನೆಯಲ್ಲೂ ಇಲ್ಲ, ಆತನನ್ನು ಸಂಪರ್ಕಿಸಲೂ ಸಾಧ್ಯವಾಗುತ್ತಿಲ್ಲ.
ಸೋಂಕಿತ ವ್ಯಕ್ತಿಯು ಜೂನ್ 10 ರಂದು ತಿರುಮಲದಲ್ಲಿ ತಿಮ್ಮಪ್ಪನ ದರ್ಶನ ಪಡೆದಿದ್ದ.
ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights