ದೇಶಾದ್ಯಂತ ಮೇ 20 ರಿಂದ 27ರವರೆಗೆ “ಶ್ರಮಿಕ ಹಕ್ಕು ಅಭಿಯಾನ”ಕ್ಕೆ ವಿವಿಧ ಸಂಘಟನೆಗಳ ಕರೆ

ಕಾರ್ಮಿಕ ಕಾನೂನುಗಳನ್ನು ರದ್ದುಗೊಳಸಿ, ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳುತ್ತಿರುವ ಹಾಗೂ ಎಪಿಎಂಪಿ ಕಾಯ್ದೆಗೆ ತಿದ್ದುಪಡಿ ತಂದು ರೈತರನ್ನು ಸಂಕಷ್ಟಕ್ಕೆ ದೂಡುತ್ತಿರುವ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ದೇಶಾದ್ಯಂತ ಶ್ರಮಿಕ ಹಕ್ಕು ಅಭಿಯಾನಕ್ಕೆ ವಿವಿಧ ಜನಪರ ಸಂಘಟನೆಗಳು ಕರೆಕೊಟ್ಟಿವೆ

ಕೊರೋನಾ ಪಿಡುಗಿನ ಸಂಕಷ್ಟಗಳಿಂದ ಈಗಾಗಲೇ ದುಡಿಯುವ ಜನರು ತತ್ತರಿಸಿಹೋಗಿದ್ದಾರೆ. ವಲಸೆ ಕಾರ್ಮಿಕರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿರುವ ಸಂದರ್ಭದಲ್ಲಿ ಅವರ ಹಕ್ಕುಗಳನ್ನು ಕಿತ್ತುಕೊಳ್ಳುವ ದುರಾಡಳಿತಕ್ಕೆ ಸರ್ಕಾರ ಮುಂದಾಗಿದೆ ಎಂದು ವಿವಿಧ ಸಂಘಟನೆಗಳು ಮುಖಂಡರು ಆರೋಪಿಸಿದ್ದಾರೆ.

ಕೊರೊನಾ ಸಂಕಷ್ಟದಲ್ಲಿ ಇಡೀ ದೇಶವೇ ನಲುಗುತ್ತಿರುವ ಸಂದರ್ಭದಲ್ಲಿ ಸರ್ಕಾರಗಳು ಕಾರ್ಮಿಕ ಕಾನೂನುಗಳನ್ನೂ ಹಾಗೂ ಮಾರುಕಟ್ಟೆ ನೀತಿಗಳನ್ನು ತಿದ್ದುಪಡಿ ಮಾಡಿ ಕಾರ್ಮಿಕರ ಹಾಗೂ ರೈತರ ಹಕ್ಕುಗಳನ್ನು ಸರ್ಕಾರ ಕಿತ್ತುಕೊಳ್ಳುತ್ತಿದೆ. ಕೋಟ್ಯಾಂತರ ಕಾರ್ಮಿಕರು ಉದ್ಯೋಗವಿಲ್ಲದೆ ಕೂತಿವೆ. ರೈತರು ತಮ್ಮ ಕೃಷಿಯಲ್ಲಿ ಹಾಕಿದ ಬಂಡವಾಳವೂ ಬರದೆ ಬಿಕ್ಕಟ್ಟಿನಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಗಾಯದ ಮೇಲೆ ಬರೆ ಎಳೆಯುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಇರಲಿ ಕಾರ್ಮಿಕ ಮತ್ತು ಕೃಷಿ ವಲಯದ ನೀತಿಗಳನ್ನು ತಿರುಚುವ ಕೆಲಸವನ್ನು ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.

ರೈತ ಕಾರ್ಮಿಕರಿಗೆ ಹಕ್ಕುಗಳನ್ನು ನೀಡಿದ್ದ ಕಾನೂನುಗಳನ್ನು ಕಿತ್ತು, ಕಾರ್ಮಿಕರ ದುಡಿಮೆಯ ಅವಧಿಯನ್ನು ಹೆಚ್ಚಿಸುವ, ಕೃಷಿ ಯೋಗ್ಯ ಭೂಮಿಯನ್ನು ಕಾರ್ಪೊರೇಟ್ ಶಕ್ತಿಗಳಿಗೆ ಪರಭಾರೆ ಮಾಡಲು ಗೇಣಿ ನೀತಿಯಲ್ಲಿ, ಕೃಷಿ ಭೂಮಿಯ ಖರೀದಿಯ ನಿಯಮಗಳಲ್ಲಿ ಬದಲಾವಣೆ ತರುತ್ತಿರುವುದಲ್ಲದೆ, ರೈತರ ಬೆಳೆಗೆ ಒಂದಷ್ಟಾದರೂ ಬೆಲೆ ಸುರಕ್ಷತೆಯನ್ನು ಕೊಡುತ್ತಿದ್ದ ಎಪಿಎಂಸಿಯನ್ನು ದುರ್ಬಲಗೊಳಿಸುವ ತಿದ್ದುಪಡಿಗೆ ಸರ್ಕಾರ ಮುಂದಾಗಿದೆ. ಕಾರ್ಮಿಕರ ಶ್ರಮಶಕ್ತಿಯನ್ನು, ರೈತರ ಭೂಮಿ ಮತ್ತು ಬೆಳೆಯನ್ನು ಅಗ್ಗದ ದರದಲ್ಲಿ ಕಬಳಿಸುವ ಕಾರ್ಪೊರೇಟ್ ಷಡ್ಯಂತ್ರಕ್ಕೆ ಸರ್ಕಾರ ಮಣಿದಿದೆ ಎಂದಿದ್ದಾರೆ.

ಉದ್ಯಮ ಪತಿಗಳ ಹಾಗೂ ಕೇಂದ್ರ ಸರ್ಕಾರ ಒತ್ತಡ ಮಣಿದು ಕಾರ್ಮಿಕರು ಹಾಗೂ ರೈತರನ್ನು ಬಲಿಕೊಡಲು ಸರ್ಕಾರ ಮುಂದಾಗಬಾರದು. ಕಾರ್ಮಿಕರ ಹಾಗೂ ಕೃಷಿಕರ ಹಕ್ಕುಗಳನ್ನು ರಕ್ಷಿಸಲು ಸರ್ಕಾರ ಮುಂದಾಗಬೇಕು. ಇಲ್ಲವಾದರೆ ರಾಜ್ಯಾಧ್ಯಂತ ತೀವ್ರ ಪ್ರತಿರೋಧಕ್ಕೆ ಸರ್ಕಾರ ಗುರಿಯಾಗಲಿದೆ ಎಂದು ಎಚ್ಚರಿಸಿದ್ದಾರೆ.

ಮೇ 20 ರಿಂದ 27ರ ತನಕ “ಶ್ರಮಿಕ ಹಕ್ಕು ಅಭಿಯಾನ”ವನ್ನು ಹಮ್ಮಿಕೊಂಡಿದ್ದು, ಮೇ 22 ರಂದು ನಡೆಯಲಿರುವ ಅಖಿಲ ಭಾರತ ಕಾರ್ಮಿಕರ ಹೋರಾಟಕ್ಕೆ ಮತ್ತು ಮೇ 27ರಂದು ನಡೆಯಲಿರುವ ಅಖಿಲ ಭಾರತ ರೈತರ ಹೋರಾಟಕ್ಕೆ ಕರೆ ಕೊಡಲಾಗಿದೆ.

ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ, ಭಾರತೀಯ ಫ್ಯಾಸಿಸ್ಟ್ ವಿರೋಧಿ ಒಕ್ಕೂಟ, ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ, ಆಹಾರ ಹಕ್ಕು ಸಮಿತಿ, ಕರ್ನಾಟಕ ರೈತ ಸಂಘಟನೆ, ಕರ್ನಾಟಕ ಶ್ರಮಿಕ ಶಕ್ತಿ, ಕರ್ನಾಟಕ ಜನಶಕ್ತಿ ಸಂಘಟನೆಗಳು  ಹೊರಾಟಕ್ಕೆ ಕರೆಕೊಟ್ಟಿದ್ದು, ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights