60 ಸಾವಿರ ಬಡ ಕುಟುಂಬಳಿಗೆ ಹೆಚ್ಡಿಕೆ ಫ್ಯಾಮಿಲಿಯಿಂದ ದಿನಸಿ ಕಿಟ್
ಕೋವಿಡ್-19 ಲಾಕ್ಡೌಡ್ ನಿಂದಾಗಿ ರಾಜ್ಯದ ಜನತೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು ಒಂದು ಹೊತ್ತಿನ ಊಟಕ್ಕೂ ಕಷ್ಟಪಡುವಂತಾಗಿದೆ. ಇದರಿಂದಾಗಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕುಟುಂಬಸ್ಥರು ಇಂದು ರಾಮನಗರ- ಚನ್ನಪಟ್ಟಣ ಜನರಿಗೆ ದಿನಸಿ ಕಿಟ್ ವಿತರಣೆ ಮಾಡಿದ್ರು.
ಕೊರೊನಾ ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಜನರ ಹಸಿವು ನೀಗಿಸಲು ಮುಂದಾದ ಹೆಚ್ ಡಿಕೆ ಕುಟುಂಬ ರಾಮನಗರದ ಮಂಜುನಾಥ ಕನ್ವೆನ್ಷನ್ ಹಾಲ್ನಲ್ಲಿ ಕಿಟ್ ವಿತರಣೆ ಮಾಡಿದೆ. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ದಂಪತಿ ಹಾಗೂ ಪುತ್ರ ನಿಖಿಲ್ ಕುಮಾರಸ್ವಾಮಿ, ಸೊಸೆ ರೇವತಿ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು. ಇದೇ ಮೊದಲನೇ ಬಾರಿಗೆ ಕುಟುಂಬದ ಜೊತೆ ನಿಖಿಲ್ ಪತ್ನಿ ರೇವತಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ವಿಶೇಷ ಅಂದ್ರೆ ರಾಮನಗರದಲ್ಲಿಯೇ ಇತ್ತೀಚೆಗೆ ಅವರು ನಿಖಿಲ್ ಕುಮಾರಸ್ವಾಮಿ ಕೈ ಹಿಡಿದಿದ್ದಾರೆ.
ಇನ್ನು ಬಡ ಕುಟುಂಬಗಳಿಗೆ ಅಕ್ಕಿ, ಬೇಳೆ, ಸಕ್ಕರೆ ಇರುವ ದಿನಸಿ ಕಿಟ್ಗಳನ್ನ 60 ಸಾವಿರ ಬಡ ಕುಟುಂಬಳಿಗೆ ಹೆಚ್ಡಿಕೆ ಫ್ಯಾಮಿಲಿಯಿಂದ ವಿತರಣೆ ಮಾಡಲಾಗ್ತಿದ್ದು, ಇಂದು ಅದಕ್ಕೆ ಚಾಲನೆ ನೀಡಲಾಯ್ತು.

