ಸಂಸದರಿಗೆ ನಿಂದನೆ; ಇಬ್ಬರು ನಾಯಕರನ್ನು ಪಕ್ಷದಿಂದ ಅಮಾನತುಗೊಳಿಸಿದ ಕಾಂಗ್ರೆಸ್!
ಕಾಂಗ್ರೆಸ್ ರಾಜ್ಯಾಧ್ಯಕ್ಷ ಕೆ ಸುಧಾಕರನ್ ಅವರು ಕಾಸರಗೋಡಿನ ಇಬ್ಬರು ಸ್ಥಳೀಯ ಕಾಂಗ್ರೆಸ್ ನಾಯಕರನ್ನು ಆರು ತಿಂಗಳ ಕಾಲ ಪಕ್ಷದಿಂದ ಅಮಾನತುಗೊಳಿಸಿದ್ದಾರೆ.
ಕಾಂಗ್ರೆಸ್ ಕಾಸರಗೋಡು ಜಿಲ್ಲಾ ಅಧ್ಯಕ್ಷ ಪದ್ಮರಾಜನ್ ಐಂಗೋತ್ ಮತ್ತು ಮಾಜಿ ಕೌನ್ಸಿಲರ್ ಅನಿಲ್ ವಜುನ್ನೊರೊಡಿ ಎಂಬ ಇಬ್ಬರೂ ನಾಯಕರು, ಸಂಸದ ರಾಜಮೋಹನ್ ಉನ್ನಿಥನ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಮೂಲಕ ಅವರು ಪಕ್ಷಕ್ಕೆ ಕಳಂಕ ತಂದಿದ್ದಾರೆ ಎಂದು ಅಮಾನತುಗೊಳಿಸಲಾಗಿದೆ.
ಅವರು ಪಕ್ಷದಿಂದು ಶಾಶ್ವಾತವಾಗಿ ಉಚ್ಚಾಟನೆಯಾಗಬಾರದು ಎಂದು ಬಯಸಿದ್ದರೆ, ಅಮಾನತು ಆದೇಶವನ್ನು ಅಂಗೀಕರಿಸಿದ ಒಂದು ವಾರದೊಳಗೆ ಅವರು ಲಿಖಿತ ವಿವರಣೆ ನೀಡಬೇಕು ಎಂದು ಸೂಚಿಸಲಾಗಿದೆ.
ಅವರು ಉತ್ತರ ನೀಡಲು ವಿಫಲರಾದರೆ, ಅವರು ಮುಂದೆ ಹೇಳಲು ಏನೂ ಇಲ್ಲ ಎಂದು ಭಾವಿಸಲಾಗುವುದು. ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗುವುದು ಎಂದು ಸುಧಾಕರನ್ ಹೇಳಿದ್ದಾರೆ.
ರಾಜಮೋಹನ್ ಉನ್ನಿಥನ್ ಅವರು ಶನಿವಾರ ತಡರಾತ್ರಿ ಸಂಸತ್ ಅಧಿವೇಶನಕ್ಕೆ ಹಾಜರಾಗಲು ನವದೆಹಲಿಗೆ ಕರಿಪುರ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಈ ಇಬ್ಬರು ಕಾಂಗ್ರೆಸ್ ನಾಯಕರು ಅವರನ್ನು ರೈಲಿನಲ್ಲಿ ನಿಂದಿಸಿದ್ದಾರೆ.
ಇದನ್ನೂ ಓದಿ: ಒಂದು ರಾಜ್ಯದಲ್ಲಿ ಮಾತ್ರ ಆಕ್ಸಿಜನ್ ಕೊರತೆಯಿಂದ ಸಾವುಗಳಾಗಿವೆ ಎಂದ ಕೇಂದ್ರ; ಹೆಸರು ಬಹಿರಂಗ ಪಡಿಸಲು ಹಿಂದೇಟು!

