ಕಿನ್ನೌರ್ ಭೂಕುಸಿತ : ಓರ್ವ ಸಾವು – 30ಕ್ಕೂ ಹೆಚ್ಚು ಜನ ನಾಪತ್ತೆ : ಸ್ಕಿಡ್ ಆಗಿ ನದಿಗೆ ಬಿದ್ದ ವಾಹನಗಳು..!

ಹಿಮಾಚಲ ಪ್ರದೇಶದ ಕಿನ್ನೌರ್ ನಲ್ಲಿ ಭೂಕುಸಿತದಿಂದಾಗಿ ಓರ್ವ ಸಾವನ್ನಪ್ಪಿದ್ದು 30 ಜನ ನಾಪತ್ತೆಯಾಗಿದ್ದಾರೆ. ಸ್ಥಳೀಯರ ವಾಹನಗಳು ರಸ್ತೆಯಿಂದ ಸ್ಕಿಡ್ ಆಗಿದ್ದು, ನದಿಗೆ ಬಿದ್ದಿವೆ.

ಇಂದು ಮಧ್ಯಾಹ್ನ 3ರ ಸುಮಾರಿಗೆ ಹಿಮಾಚಲ ಪ್ರದೇಶದ ಕಿನ್ನೌರ್ ನಲ್ಲಿ ಸಂಭವಿಸಿದ ಭಾರೀ ಭೂಕುಸಿತದಿಂದ 40 ಜನರು ಸಿಲುಕಿರುವ ಶಂಕೆ ಇದೆ. ಕಿನ್ನೌರ್ ನಿಂದ ಹರಿದ್ವಾರಕ್ಕೆ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ 30 ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಬಸ್ ಹಾಗೂ ಇತರ ಕೆಲವು ವಾಹನಗಳು ಅವಶೇಷಗಳ ಅಡಿಯಲ್ಲಿ ಹೂತು ಹೋಗಿವೆ. ಕೆಲವು ವಾಹನಗಳು ರಸ್ತೆಯಿಂದ ಸ್ಕಿಡ್ ಆಗಿ ಕೆಳಗೆ ಹರಿಯುವ ಸಟ್ಲೆಜ್ ನದಿಗೆ ಬಿದ್ದಿರುವ ಶಂಕೆ ಇದೆ.

ಕಿನ್ನೌರ್ ಭೂಕುಸಿತದ ಬಗ್ಗೆ ಟ್ವೀಟ್ ಮಾಡಿದ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು, “ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಭೂಕುಸಿತವು ತುಂಬಾ ಆತಂಕವನ್ನುಂಟು ಮಾಡಿದೆ. ಇಲ್ಲಿ ಅನೇಕ ಜನರು ಸಿಕ್ಕಿಬಿದ್ದಿದ್ದಾರೆ ಎಂದು ವರದಿಯಾಗಿದೆ. ಐಟಿಬಿಪಿ ತಂಡಗಳನ್ನು ರಕ್ಷಿಸಲು ನಿಯೋಜಿಸಲಾಗಿದೆ. ನಾನು ಪಕ್ಷದ ಕಾರ್ಯಕರ್ತರಲ್ಲಿ ಸಾಧ್ಯವಿರುವ ಎಲ್ಲ ಸಹಾಯವನ್ನು ಮಾಡಲು ವಿನಂತಿಸುತ್ತೇನೆ. ಆ ಪ್ರದೇಶದ ಜನರ ಯೋಗಕ್ಷೇಮಕ್ಕಾಗಿ ನನ್ನ ಪ್ರಾರ್ಥನೆಗಳು” ಎಂದು ಬರೆದಿದ್ದಾರೆ.

25 ಸದಸ್ಯರನ್ನು ಒಳಗೊಂಡ NDRF ನ ಒಂದು ತಂಡ ಕಿನ್ನೌರ್ ಭೂಕುಸಿತದ ಸ್ಥಳವನ್ನು ತಲುಪಿದ್ದು ಬಂಡೆಗಲ್ಲುಗಳು ಇಳಿಜಾರಿನಲ್ಲಿ ಉರುಳುತ್ತಲೇ ಇರುವುದರಿಂದ ರಕ್ಷಣಾ ಕಾರ್ಯಗಳು ಇನ್ನೂ ಆರಂಭವಾಗಿಲ್ಲ. ಅದರೂ ಇಲ್ಲಿಯವರೆಗೆ 4 ಜನರನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. NDRF, ITBP, CISF ಮತ್ತು ಪೊಲೀಸ್ ತಂಡಗಳು ಸ್ಥಳದಲ್ಲಿವೆ. ರಕ್ಷಣಾ ಕಾರ್ಯಾಚರಣೆಗಾಗಿ ಪ್ರಯತ್ನಗಳನ್ನು ನಡೆಯುತ್ತಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights