Fact Check: ಜೈಲಿನಲ್ಲಿರುವ ಬರ್ಮಾದ ಮಾಜಿ ಪ್ರಧಾನ ಮಂತ್ರಿ ಆಂಗ್ ಸಾನ್ ಸೂ ಕಿ ಎಂದು ತಿರುಚಿತ ಚಿತ್ರ ವೈರಲ್‌!

ಕಂಬಿಗಳ ಹಿಂದೆ ಇರುವ ಮಹಿಳೆ ಆಂಗ್ ಸಾನ್ ಸೂಕಿ ಎಂದು ಹೇಳಿಕೊಂಡು ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ವಿಡಿಯೋದಲ್ಲಿರುವ ಮಹಿಳೆ ಬರ್ಮಾದ ಮಾಜಿ ಪ್ರಧಾನ ಮಂತ್ರಿ (ಮ್ಯಾನ್ಮಾರ್ ರಾಜ್ಯ ಸಲಹೆಗಾರ್ತಿ)ಯಾಗಿದ್ದು, ಅವರು ‘ಬರ್ಮಾ ಮತ್ತು ರೋಹಿಂಗ್ಯಾ ಮುಸ್ಲಿಮರಿಗೆ’ ಚಿಕಿತ್ಸೆ ನೀಡಿದ್ದಕ್ಕಾಗಿ ಅವರನ್ನು ಬಂಧಿಸಲಾಗಿದೆ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ. ವೀಡಿಯೊದಲ್ಲಿ ಮಾಡಿದ ಪ್ರತಿಪಾದನೆಯ ಸತ್ಯಾ-ಸತ್ಯತೆಯನ್ನು ಪರಿಶೀಲಿಸೋಣ.

ಪೋಸ್ಟ್‌ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು.

ಪ್ರತಿಪಾದನೆ: ಜೈಲಿನಲ್ಲಿರುವ ಬರ್ಮಾ ಮಾಜಿ ಪ್ರಧಾನಿ ಆಂಗ್ ಸಾನ್ ಸೂ ಕಿ ಅವರ ಫೋಟೋ.

ಸತ್ಯ: ಈ ಫೋಟೋ ಬರ್ಮಾದ ಮಾಜಿ ಪ್ರಧಾನ ಮಂತ್ರಿ ಆಂಗ್ ಸಾನ್ ಸೂ ಕಿ ಅವರದ್ದಲ್ಲ. ಈ ಫೋಟೋ 2019ರಲ್ಲಿ ಪ್ರಕಟವಾದ ಲೇಖನದಲ್ಲಿದ್ದ ಪೋಟೋದ ತಿರುಚಿದ ಚಿತ್ರವಾಗಿದೆ. 01 ಫೆಬ್ರವರಿ 2021 ರಂದು, ಮ್ಯಾನ್ಮಾರ್‌ನಲ್ಲಿನ ಮಿಲಿಟರಿ (ಟಾಟ್ಮಡಾವ್ ಎಂದು ಕರೆಯಲ್ಪಡುತ್ತದೆ) ದೇಶದ ನಿಯಂತ್ರಣವನ್ನು ತನ್ನ ವಶಕ್ಕೆ ಪಡೆದುಕೊಂಡು, ಒಂದು ವರ್ಷದ ಅವಧಿಯ ತುರ್ತು ಪರಿಸ್ಥಿತಿಯನ್ನು ಘೋಷಿಸಿತು. ಈ ವೇಳೆ ಹೋರಾಟಗಳು ನಡೆದವು. ದಂಗೆಯ ನಂತರ, ಮ್ಯಾನ್ಮಾರ್ ಆಡಳಿತವು ಮೇ 2021 ರಲ್ಲಿ ಸೂಕಿ ಅವರ ಮೊದಲ ಚಿತ್ರಗಳನ್ನು ಪ್ರಕಟಿಸಿತ್ತು. ಆದರೆ ಈ ಚಿತ್ರಗಳು ವೀಡಿಯೊದಲ್ಲಿರುವ ಚಿತ್ರದೊಂದಿಗೆ ಹೊಂದಾಣಿಕೆಯಾಗುವುದಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ವಿಡಿಯೊದ ಸ್ಕ್ರೀನ್‌ಶಾಟ್‌ಗಳನ್ನು ರಿವರ್ಸ್ ಇಮೇಜ್ ಮೂಲಕ ಹುಡುಕಿದಾಗ, 28 ಆಗಸ್ಟ್ 2019 ರಂದು ಪ್ರಕಟವಾದ ಲೇಖನ ದೊರೆತಿದೆ. “ಜೈಲಿನಲ್ಲಿ ವೃದ್ಧಾಪ್ಯ: ಕಂಬಿಗಳ ಹಿಂದೆ ಮಹಿಳೆಯರ ಮರೆತುಹೋದ ದುರವಸ್ಥೆ” (Aging in Prison: The Forgotten Plight of Women Behind Bars) ಎಂಬ ಶೀರ್ಷಿಕೆಯ ಲೇಖನದ ಚಿತ್ರಿಕ್ಕೆ ವೀಡಿಯೊದಲ್ಲಿರುವ ಚಿತ್ರವನ್ನು ಹೋಲಿಸಿದಾಗ ಒಂದೇ ರೀತಿಯ ಹಿನ್ನೆಲೆಯನ್ನು ಹೊಂದಿರುವುದು ಗೊತ್ತಾಗುತ್ತದೆ.

01 ಫೆಬ್ರವರಿ 2021 ರಂದು, ಮ್ಯಾನ್ಮಾರ್‌ನಲ್ಲಿನ ಮಿಲಿಟರಿ (ಟಾಟ್ಮಡಾವ್ ಎಂದು ಕರೆಯಲ್ಪಡುತ್ತದೆ) ದೇಶದ ನಿಯಂತ್ರಣವನ್ನು ವಶಪಡಿಸಿಕೊಂಡು, ಒಂದು ವರ್ಷದ ಅವಧಿಯ ತುರ್ತು ಪರಿಸ್ಥಿತಿಯನ್ನು ಘೋಷಿಸಿತು. ಮ್ಯಾನ್ಮಾರ್‌ ಸಾವ್ರರ್ತಿಕ ಚುನಾವಣೆಯಲ್ಲಿ ಆಂಗ್ ಸಾನ್ ಸೂ ಕಿ ಅವರ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ (ಎನ್‌ಎಲ್‌ಡಿ) ಭರ್ಜರಿ ಜಯ ಸಾಧಿಸಿತ್ತು. 2015 ರಲ್ಲಿ, ಆಂಗ್ ಸಾನ್ ಸೂಕಿ ಅವರ NLD 25 ವರ್ಷಗಳಲ್ಲಿ ಮೊದಲ ಬಾರಿಗೆ ಬಹಿರಂಗವಾಗಿ ಸ್ಪರ್ಧಿಸಿ ಭರ್ಜರಿ ಗಳಿಸಿತ್ತು. ಈ ವೇಳೆ, ಸೂ ಕಿ ಅವರ ಮಕ್ಕಳು ವಿದೇಶಿ ಪೌರತ್ವವನ್ನು ಹೊಂದಿದ್ದರಿಂದ ಅವರು ರಾಷ್ಟ್ರಪತಿ ಹುದ್ದೆ ಪಡೆಯುವುದನ್ನು ನಿಷೇಧಿಸಲಾಗಿತ್ತು. ‘ಆಕೆಯ ಅಧಿಕೃತ ಶೀರ್ಷಿಕೆಯೂ ‘ರಾಜ್ಯ ಸಲಹೆಗಾರ’ ಎಂದೇ ಇದ್ದು, ಇದು ಪ್ರಧಾನಿಗೆ ಸಮಾನವಾಗಿದೆ. 2021 ರ ದಂಗೆಯವರೆಗೂ ರಾಷ್ಟ್ರಪತಿ ವಿನ್ ಮೈಂಟ್ ಅವರಿಗೆ ಆಪ್ತ ಸಹಾಯಕರಾಗಿದ್ದರು. ’ಈ ಕುರಿತು ಲೇಖನಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಓದಬಹುದು.

ದಂಗೆಯ ನಂತರ, ಮ್ಯಾನ್ಮಾರ್ ಬೋರ್ಡ್‌ವು ಮೇ 2021 ರಲ್ಲಿ ಸೂ ಕಿ ಅವರ ಮೊದಲ ಚಿತ್ರಗಳನ್ನು ಪ್ರಕಟಿಸಿತು. ಆದರೆ ಈ ಚಿತ್ರಗಳು ವೀಡಿಯೊದಲ್ಲಿರುವ ಚಿತ್ರದೊಂದಿಗೆ ಹೊಂದಿಕೆಯಾಗುವುದಿಲ್ಲ.

ಇದನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ, ತಿರುಚಿದ ಚಿತ್ರವನ್ನು ಜೈಲಿನಲ್ಲಿರುವ ಬರ್ಮಾದ ಮಾಜಿ ಪ್ರಧಾನ ಮಂತ್ರಿ ಆಂಗ್ ಸಾನ್ ಸೂ ಕಿ ಅವರ ಚಿತ್ರವೆಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.

ಮೂಲ: ಫ್ಯಾಟ್ಕ್ಲಿ

– ಸೋಮಶೇಖರ್ ಚಲ್ಯ

Read Also: ಅತ್ಯಾಚಾರ ಎಸಗಿದ್ದು 11 ನಿಮಿಷ ಮಾತ್ರವೆಂದು ಶಿಕ್ಷೆ ಕಡಿಮೆ ಮಾಡಿದ ಕೋರ್ಟ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights