ಮಾಸ್ಟರ್ ಬ್ಲಾಸ್ಟರ್ ರನ್ನು ಭೇಟಿ ಮಾಡಿ ಬೆಳ್ಳಿ ಪದಕ ತೋರಿಸಿದ ಮೀರಾ ಬಾಯಿ ಚಾನು..!

ಟೋಕಿಯೋ ಒಲಿಂಪಿಕ್ಸ್ 2020 (Tokyo Olympics 2020) ರಲ್ಲಿ 49 ಕೆಜಿ ವಿಭಾಗದ ಮಹಿಳಾ ವೇಟ್ಲಿಫ್ಟಿಂಗ್​ನಲ್ಲಿ ಬೆಳ್ಳಿ ಪದಕ ಗೆದ್ದ ಮೀರಾ ಬಾಯಿ ಚಾನು ಅವರು ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿ ಮಾಡಿದ್ದಾರೆ.

ಒಲಿಂಪಿಕ್ ಇತಿಹಾಸದಲ್ಲಿ ಭಾರತ ಪರ ವೇಟ್ಲಿಫ್ಟಿಂಗ್​ನಲ್ಲಿ ಪದಕ ಗೆದ್ದ ಎರಡನೇ ಕ್ರೀಡಾಪಟು ಮೀರಾ ಬಾಯಿ ಅವರು ಕ್ರಿಕೆಟ್ ಲೋಕದಲ್ಲಿ ಸಾಧನೆ ಮಾಡಿದ ಭಾರತದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿ ಮಾಡಿ ಬೆಳ್ಳಿ ಪದಕ ತೋರಿಸಿದ್ದಾರೆ.

ಸಚಿನ್ ತೆಂಡೂಲ್ಕರ್ ಕೂಡ ಮಿರಾಬಾಯಿ ಚಾನು ಟೊಕಿಯೊ ಒಲಿಂಪಿಕ್ಸ್‌ನಲ್ಲಿ ಮಾಡಿದ ಸಾಧನೆಯನ್ನು ಹೊಗಳಿ ಈ ಹಿಂದೆ ಟ್ವೀಟ್ ಮಾಡಿದ್ದರು. ಇದೀಗ ಖುದ್ದಾಗಿ ಮೀರಾಬಾಯಿ ಚಾನು ಮತ್ತು ಸಚಿನ್ ತೆಂಡೂಲ್ಕರ್ ಭೇಟಿಯಾಗಿದ್ದು, ಇಬ್ಬರ ಭೇಟಿಯ ಫೋಟೋಗಳನ್ನು ಮೀರಾಬಾಯಿ ಚಾನು ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ಬುಧವಾರ (ಆಗಸ್ಟ್ 11 ) ಬೆಳಿಗ್ಗೆ ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿಯಾದ ಮೀರಾಬಾಯಿ ಚಾನು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ತಾವು ಗೆದ್ದ ಬೆಳ್ಳಿಯ ಪದಕವನ್ನು ತೋರಿಸಿ ಸಂತಸಪಟ್ಟಿದ್ದಾರೆ.

ಜಾವೆಲಿನ್ ಥ್ರೋ, ಕುಸ್ತಿ, ವೇಟ್ ಲಿಫ್ಟಿಂಗ್, ಬ್ಯಾಡ್ಮಿಂಟನ್, ಬಾಕ್ಸಿಂಗ್ ಹಾಗೂ ಹಾಕಿಯಲ್ಲಿ ಭಾರತದ ಆಟಗಾರರು ಪದಕಗಳನ್ನು ಗೆದ್ದಿದ್ದಾರೆ. ಒಲಿಂಪಿಕ್ಸ್ನ ಅಥ್ಲೆಟಿಕ್ಸ್ನಲ್ಲಿ ಭಾರತವು ಇದೇ ಮೊದಲ ಬಾರಿಗೆ ಚಿನ್ನದ ಪದಕ ಗೆದ್ದಿದ್ದರೆ, ಭಾರತ ಹಾಕಿ ತಂಡವು ನಾಲ್ಕು ದಶಕಗಳ ನಂತರ ಇದೇ ಮೊದಲ ಬಾರಿಗೆ ಕಂಚಿನ ಪದಕ ತಮ್ಮದಾಗಿಸಿಕೊಂಡಿದೆ.

ಭಾರತದ ಮಹಿಳಾ ಹಾಕಿ ತಂಡವೂ ಒಲಿಂಪಿಕ್ಸ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸೆಮಿ ಫೈನಲ್ ಪ್ರವೇಶಿಸಿ ದಾಖಲೆ ನಿರ್ಮಿಸಿದೆ. ಉತ್ತಮ ಆಟದ ವೈಖರಿಯೊಂದಿಗೆ ಕ್ರೀಡಾ ಪ್ರೇಮಿಗಳ ಮನಸ್ಸು ಗೆದ್ದಿದ್ದ ಮಹಿಳಾ ತಂಡ ಸೆಮಿಫೈನಲ್ನಲ್ಲಿ ಪರಾಭವಗೊಂಡು ಭಾರತೀಯರನ್ನು ನಿರಾಶೆಗೊಳಿಸಿತು.

ಹರಿಯಾಣದ ಪಾಣಿಪತ್ನವರಾದ ನೀರಜ್ ಈ ಬಾರಿಯ ಟೋಕಿಯೋ ಒಲಿಂಪಿಕ್ಸ್ನ ಜಾವೆಲಿನ್ ಥ್ರೋ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಇನ್ನು ರೈತನ ಮಗನಾದ ರವಿಕುಮಾರ್ ದಾಹಿಯಾ ಕುಸ್ತಿ ವಿಭಾಗ (57 ಕೆ.ಜಿ)ದಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ವೇಟ್ ಲಿಫ್ಟಿಂಗ್ (49 k g ಮಹಿಳಾ ವಿಭಾಗ) ಮೀರಾಬಾಯಿ ಚಾನು ಬೆಳ್ಳಿ ಪದಕ ಜಯಿಸಿದ್ದಾರೆ. ಭಾರತದ ಪುರುಷರ ಹಾಕಿ ತಂಡವು ಸುಮಾರು 74 ವರ್ಷಗಳ ನಂತರ ಕಂಚಿನ ಪದಕ ತಮ್ಮದಾಗಿಸಿಕೊಂಡಿದೆ. ಹಾಗೆಯೇ ಕುಸ್ತಿಯಲ್ಲಿ ಭಜರಂಗ್ ಪುನಿಯಾ, ಬಾಕ್ಸಿಂಗ್ನಲ್ಲಿ ಲವ್ಲಿನಾ ಮತ್ತು ಬ್ಯಾಡ್ಮಿಂಟನ್ (ಮಹಿಳಾ ಸಿಂಗಲ್ಸ್) ಪಿ.ವಿ. ಸಿಂಧು ಕಂಚಿನ ಪದಕಗಳನ್ನು ಜಯಿಸಿದ್ದಾರೆ.

ಮೀರಾಬಾಯಿ ಸಾಧನೆಗೆ ದೇಶಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದ್ದು, ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights