ದೇಶಾದ್ಯಂತ 72ನೇ ಗಣರಾಜ್ಯೋತ್ಸವದ ಸಂಭ್ರಮ : ಶುಭಕೋರಿದ ಗಣ್ಯರು!

ದೆಹಲಿಯ ರಾಜ್ಪಥ್ ನಲ್ಲಿ 72ನೇ ಗಣರಾಜೋತ್ಸವ ಆಚರಿಸಲಾಗುತ್ತಿದೆ. ಈ ಬಾರಿ ಕೊರೊನಾ ಕಾರಣದಿಂದ ಸರಳವಾಗಿ ಗಣರಾಜ್ಯೋತ್ಸವ ನಡೆಯುತ್ತಿದ್ದು ಮುಖ್ಯ ಅತಿಥಿಗಳಿಗೆ ಆಹ್ವಾನಿಸಲಾಗಿಲ್ಲ. ಬದಲಿಗೆ ಕೇವಲ 25,000 ಮಂದಿಗೆ ಮಾತ್ರ ಪರೇಡ್ ವೀಕ್ಷಿಸಲು ಅವಕಾಶ ನೀಡಲಾಗಿದೆ. 600 ಬದಲು 160 ವಿದ್ಯಾರ್ಥಿಗಳಿಗಷ್ಟೇ ಭಾಗವಹಿಸಲು ಅವಕಾಶಿಸಲಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 72ನೇ ಗಣರಾಜ್ಯೋತ್ಸವದ ದಿನದ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂಡಿಯಾಗೇಟ್ ಬಳಿಯಿರುವ ಅಮರ್ ಜವಾನ್ ಜ್ಯೋತಿಯಲ್ಲಿ ಹುತಾತ್ಮ ವೀರ ಯೋಧರಿಗೆ ನಮನ ಸಲ್ಲಿಸಿದರು. ಮೋದಿಯವರು ಅಮರ ಜವಾನ್ ಜ್ಯೋತಿಗೆ ನಮನ ಸಲ್ಲಿಸಿದ ಬಳಿಕ ರಾಷ್ಟ್ರಪತಿ ರಾಮನಾಥ್ ಕೋವಿದ್ ಅವರು ಧ್ವಜಾರೋಹಣ ನೆರವೇರಿಸಿ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದರು.

ರಾಷ್ಟ್ರಗೀತೆ ಹಾಡಿದ ನಂತರ ಬಂದೂಕು ಗೌರವ ವಂದನೆ ಸಲ್ಲಿಸಲಾಯಿತು. ಯುದ್ಧ ಸ್ಮಾರಕದ ಸಂದರ್ಶಕರ ಪುಸ್ತಕದಲ್ಲಿ ಮೋದಿ ತಮ್ಮ ಚಿಂತನೆಗಳನ್ನು ಬರೆದಿದ್ದಾರೆ.

ಈ ಸಂದರ್ಭದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂದ್, ಮೂರು ಪಡೆಗಳ ರಕ್ಷಣಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಭಾರತೀಯ ಸೇನಾಪಡೆ ಮುಖ್ಯಸ್ಥ ಎಂಎಂ ನರವಾಣೆ, ನೌಕಾಪಡೆಯ ಮುಖ್ಯಸ್ಥ ಕರಂಬೀರ್ ಸಿಂಗ್ ಹಾಗೂ ಭಾರತೀಯ ವಾಯುಪಡೆಯ ಮಾರ್ಷಲ್ ಆರ್’ಕೆಎಸ್ ಭದೌರಿಯಾ ಅವರು ಹಾಜರಿದ್ದರು.

ಶಿಸ್ತು ಮತ್ತು ವೈಭವ ಕಾಪಾಡಿಕೊಂಡ ಆಚರಣೆಯಲ್ಲಿ ಪ್ರಮುಖ ಆಕರ್ಷಣೆಯಾಗಿರುವ ಸ್ತಬ್ದಚಿತ್ರ ಮತ್ತು ಪರೇಡ್ ಎಂದಿನಂತೆ ನಡೆಯುತ್ತಿದೆ. ಟಿ-72 ಯುದ್ಧ ಟ್ಯಾಂಕರ್ ಪರೇಡ್, ಎರಡು ಸಾಲುಗಳಲ್ಲಿ ವಾಯುಪಡೆ ನೌಕಪಡೆ ತುಗಡಿ, ರಷ್ಯ ನಿರ್ಮಿತ ಟಿ-90 ಯುದ್ಧ ಪರೇಡ್ ನಡೆಯುತ್ತಿವೆ.

ಮಾತ್ರವಲ್ಲ ಭಾರತದ ಬಳಿ ಇರುವ ಅತ್ಯತ್ತಮ ಯುದ್ಧವಿಮಾನಗಳಾದ ಫ್ರಾನ್ಸ್ ನಿಂದ ಖರೀಧಿಸಿ ರಫೆಲ್ ಫೈಟರ್ ಜೆಟ್ ಗಳು ಮೊದಲ ಬಾರಿಗೆ ಪರೇಡ್ ನಲ್ಲಿ ಭಾಗವಹಿಸಲಿವೆ.

ಜೊತೆಗೆ ಭಾರತದ ಮೊದಲ ಮಹಿಳಾ ಫೈಟರ್ ಪೈಲಟ್ ಭಾವನಾ ಪರೇಡ್ ನಲ್ಲಿ ಭಾಗಿಯಾಗಿದ್ದಾರೆ. ಆಂಧ್ರಪ್ರದೇಶದ ಪ್ರಸಿದ್ಧ ಲೇಪಾಕ್ಷಿ ದೇವಸ್ಥಾನದ ಸ್ತಬ್ದಚಿತ್ರ, ಐಎನ್ಎಸ್ ವಿಕ್ರಾಂತ್ ಮತ್ತು ನೌಕಾಪಡೆ ಸ್ತಬ್ದಚಿತ್ರ ಮೆರವಣಿಗೆ, ಯುಪಿ ರಾಮಮಂದಿರ ಪ್ರತಿಕೃತಿ ಸ್ತಬ್ದಚಿತ್ರ ಜೊತೆಗೆ ವಿವಿಧ ರಾಜ್ಯಗಳಿಂದ ರೈತರು ಪ್ರತ್ಯೇಕ ಸ್ತಬ್ದಚಿತ್ರಗಳನ್ನು ಪ್ರದರ್ಶಿಸಲಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights