ಒಂದು ರಾಜ್ಯದಲ್ಲಿ ಮಾತ್ರ ಆಕ್ಸಿಜನ್‌ ಕೊರತೆಯಿಂದ ಸಾವುಗಳಾಗಿವೆ ಎಂದ ಕೇಂದ್ರ; ಹೆಸರು ಬಹಿರಂಗ ಪಡಿಸಲು ಹಿಂದೇಟು!

ಕೊರೊನಾ 2ನೇ ಅಲೆಯ ಸಂಬರ್ಭದಲ್ಲಿ ಆಮ್ಲಜನರ ಕೊರತೆಯಿಂದ ಯಾವುದೇ ಸಾವುಗಳು ಸಂಭವಿಸಿಲ್ಲ ಎಂದು ಹೇಳಿದ್ದ ಕೇಂದ್ರ ಸರ್ಕಾರ, ಇದೀಗ ಒಂದು ರಾಜ್ಯದಲ್ಲಿ ಮಾತ್ರ ಆಕ್ಸಿಜನ್‌ ಕೊರತೆಯಿಂದ ಸಾವುಗಳು ಸಂಭವಿಸಿವೆ ಎಂದು ಹೇಳಿದೆ. ಅದಾಗ್ಯೂ, ಅದು ಯಾವ ಎಂದು ಬಹಿರಂಗ ಪಡಿಸಿಲ್ಲ.

ಸಂಸತ್‌ ಅಧಿವೇಶನ ಆರಂಭವಾದಗ ರಾಜ್ಯಸಭ್ಯೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದ ಕೇಂದ್ರ ಆರೋಗ್ಯ ಸಚಿವ, ದೇಶದಲ್ಲಿ ಕೊರೊನಾ 2ನೇ ಅಲೆ ಆಕ್ರಮಿಸಿದ್ದ ವೇಳೆ, ಆಕ್ಸಿಜನ್‌ ಕೊರತೆಯಿಂದ ಯಾವುದೇ ಸಾವುಗಳು ಸಂಭವಿಸಿಲ್ಲ. ಆ ಬಗ್ಗೆ ನಮ್ಮಲ್ಲಿ ದಾಖಲೆಗಳಿಲ್ಲ. ಇದಕ್ಕೆ ರಾಜ್ಯ ಸರ್ಕಾರಗಳೇ ಜವಾಬ್ದಾರಿ ಎಂದು ಹೇಳಿದ್ದರು.

ಇದಕ್ಕೆ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಹಲವು ಸರ್ಕಾರಗಳು ಕೇಂದ್ರ ಸರ್ಕಾರ ಪ್ರತ್ಯೇಕ ಅಂಕಿಅಂಶಗಳನ್ನು ಕೇಳಿಯೇ ಇಲ್ಲ ಎಂದು ಆರೋಪಿಸಿದ್ದವು.

ಇದನ್ನೂ ಓದಿ: ಕೊರೊನಾ 2ನೇ ಅಲೆಯಲ್ಲಿ ಆಕ್ಸಿಜನ್ ಕೊರತೆಯಿಂದ ಸಾವುಗಳು ಸಂಭವಿಸಿಲ್ಲವೇ? ಸುಳ್ಳು ಹೇಳಿದ ಕೇಂದ್ರ ಸರ್ಕಾರ; ಸಾಕ್ಷ್ಯಗಳು ಹೀಗಿವೆ!

ಇದೀಗ, ಕೋವಿಡ್ ಸಾವಿನ ವರ್ಗೀಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್‌ವಾಲ್ ವಿವರಣೆ ನೀಡಿದ್ದು, ಇದುವರೆಗೆ ಬಂದ ವರದಿಗಳ ಪ್ರಕಾರ, ಒಂದು ರಾಜ್ಯ ಮಾತ್ರ ಆಮ್ಲಜನಕ ಕೊರತೆಯಿಂದ ಸಾವುಗಳ ಸಂಭವಿಸಿವೆ ಎಂದು ಹೇಳಿದ್ದಾರೆ. ಆದರೆ, ಅದು ಯಾವು ರಾಜ್ಯ ಎಂಬುದನ್ನೂ ಅವರು ಬಹಿರಂಗ ಪಡಿಸಿಲ್ಲ.

ವಿಶ್ವ ಆರೋಗ್ಯ ಸಂಸ್ಥೆಯ ಚೌಕಟ್ಟಿನ ಆಧಾರದಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಕೋವಿಡ್-19 ಸಾವುಗಳನ್ನು ವರ್ಗೀಕರಿಸಲು ನಿರ್ದಿಷ್ಟ ನಿಯಮಗಳನ್ನು ಅನುಸರಿಸುತ್ತಿದೆ. ಸಕಾಲಿಕವಾಗಿ ಕೋವಿಡ್ ಸಾವುಗಳ ವರದಿ ಮಾಡುವಂತೆ ಮತ್ತು ಪರಿಶೋಧನೆ ಮಾಡುವಂತೆ ರಾಜ್ಯಗಳಿಗೆ ಕೇಂದ್ರ ಒತ್ತಡ ಹಾಕುತ್ತಿದೆ ಎಂದು ಅವರು ಹೇಳಿದ್ದಾರೆ.

ಅಲ್ಲದೆ, ಮನೆಯಲ್ಲೇ ಐಸೊಲೇಶನ್‌ನಲ್ಲಿದ್ದ ರೋಗಿಗಳು ಆಸ್ಪತ್ರೆಗೆ ಸೇರಿದ 24 ಗಂಟೆ, 48 ಗಂಟೆ ಮತ್ತು 72 ಗಂಟೆಗಳ ಅವಧಿಯಲ್ಲಿ ಹೇಗೆ ಮೃತಪಟ್ಟಿದ್ದಾರೆ ಎಂಬ ಬಗ್ಗೆಯೂ ರಾಜ್ಯಗಳಿಂದ ವರದಿ ಕೇಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಆಕ್ಸಿಜನ್ ಸಾವುಗಳ ಬಗ್ಗೆ ಕೇಂದ್ರ ಸರ್ಕಾರ ಅಂಕಿಅಂಶವನ್ನೇ ಕೇಳಿಲ್ಲ: ಛತ್ತಿಸ್‌ಘಡ ಆರೋಗ್ಯ ಸಚಿವ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights