BJPಗೆ ಸೇರಿದ್ದ ಗೋವಾ ಹಾಲಿ ಡಿಸಿಎಂ ಮತ್ತು 09 ಶಾಸಕರ ವಿರುದ್ದ ಕಾಂಗ್ರೆಸ್‌ ದೂರು ದಾಖಲು!

ತಮ್ಮ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನ ಮಾಡುವುದಾಗಿ ನಕಲಿ ದಾಖಲೆಗಳನ್ನು ಸಿದ್ದಪಡಿಸಿ ವಂಚಿಸಿದ್ಧಾರೆ ಎಂಬ ಆರೋಪದ ಮೇಲೆ 2019ರಲ್ಲಿ ಬಿಜೆಪಿಗೆ ಸೇರಿದ್ದ 10 ಮಾಜಿ ಕಾಂಗ್ರೆಸಿಗರು ಹಾಗೂ ಹಾಲಿ ಬಿಜೆಪಿ ಶಾಸಕರ ವಿರುದ್ದ ಪೊಲೀಸ್‌ ಠಾಣೆಯಲ್ಲಿ ಗೋವಾ ಕಾಂಗ್ರೆಸ್‌ ದೂರು ದಾಖಲಿಸಿದೆ. ಗೋವಾ ಅಸೆಂಬ್ಲಿ ಸ್ಪೀಕರ್ ಅವರು 10 ಶಾಸಕರ ವಿರುದ್ದದ ಅನರ್ಹತೆ ಅರ್ಜಿಯನ್ನು ವಜಾಗೊಳಿಸಿದ ನಂತರ ಈ ಬೆಳವಣಿಗೆ ನಡೆದಿದೆ.

ಗೋವಾ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಚೋಡಂಕರ್ ಅವರು ಪಣಜಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ದೂರಿನಲ್ಲಿ ಮಾಜಿ ಕಾಂಗ್ರೆಸ್ಸಿಗ ಮತ್ತು ಈಗಿನ ಉಪಮುಖ್ಯಮಂತ್ರಿ ಚಂದ್ರಕಾಂತ್ ಕಾವ್ಲೇಕರ್ ಅವರ ಹೆಸರನ್ನೂ ಸೇರಿಸಿದ್ದಾರೆ.

ಕಳೆದ ಗೋವಾ ವಿಧಾನಸಭಾ ಚುನಾವಣೆಯ ನಂತರ ಬಿಜೆಪಿ ಅಧಿಕಾರಕ್ಕೆ ಏರಿತ್ತು. ಈ ವೇಳೆ 2019ರಲ್ಲಿ ಕಾಂಗ್ರೆಸ್‌ನ 10 ಶಾಸಕರು ಆಡಳಿತಾರೂಢ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ 10 ಮಾಜಿ ಕಾಂಗ್ರೆಸ್‌ ಶಾಸಕರು ಮತ್ತು ಇಬ್ಬರು ಎಂಜಿಪಿ (ಮಹಾರಾಷ್ಟ್ರವಾದಿ ಗೋಮಾಂತಕ್‌ ಪಾರ್ಟಿ)ಯ ಶಾಸಕರ ವಿರುದ್ದ ಅನರ್ಹತೆ ಅರ್ಜಿಯನ್ನು ಕಾಂಗ್ರೆಸ್‌ ಮತ್ತು ಎಂಜಿಪಿ ಪಕ್ಷಗಳು ಸಲ್ಲಿಸಿದ್ದವು. ಆದರೆ, ಆಡಳಿತಾರೂಢ ಬಿಜೆಪಿಯಿಂದ ಸ್ಪೀಕರ್‌ ಆಗಿರುವ ಅನಂತ್‌ ಶೇಠ್‌ ಅವರು ಅರ್ಜಿಯನ್ನು ವಜಾಗೊಳಿಸಿದ್ದಾರೆ.

40 ಸದಸ್ಯತ್ವವಿರುವ ಗೋವಾ ವಿಧಾನಸಭೆಯಲ್ಲಿ ಬಿಜೆಪಿ ಪ್ರಸ್ತುತ 27 ಶಾಸಕರನ್ನು ಹೊಂದಿದೆ.

ಇದನ್ನೂ ಓದಿ: ಗೋವಾ ಚುನಾವಣೆ: ರಾಜಧಾನಿ ಹಾಗೂ 06 ಪುರಸಭೆಗಳ ಅಧಿಕಾರ BJP ವಶಕ್ಕೆ!

ಚೋಡಂಕರ್ ಅವರ ದೂರಿನಲ್ಲಿ ಹೆಸರಿಸಿರುವ ಶಾಸಕರ ಹೆಸರುಗಳು ಹೀಗಿವೆ: ಕಾವ್ಲೇಕರ್, ಫಿಲಿಪ್ ನೆರಿ ರೊಡ್ರಿಗಸ್, ಜೆನಿಫರ್ ಮೊನ್ಸೆರಾಟ್ಟೆ, ಐಸಿಡೋರ್ ಫೆರ್ನಾಂಡಿಸ್, ನೀಲಕಾಂತ್ ಹಲಾರ್ಂಕರ್, ಅಟಾನಾಸಿಯೊ ಮೊನ್ಸೆರಾಟ್ಟೆ, ಆಂಟೋನಿಯೊ ಫರ್ನಾಂಡಿಸ್, ಫ್ರಾನ್ಸಿಸ್ ಸಿಲ್ವೀರಾ, ವಿಲ್ಫ್ರೆಡ್ ಡಿಸಾ ಮತ್ತು ಕ್ಲಾಫಾಸಿಯೊ ಡಯಾಸ್.

ವಾದದ ಪ್ರಕಾರ, “ಆರೋಪಿಗಳು ಒಟ್ಟಾಗಿ ಪಿತೂರಿ ನಡೆಸಿ, ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿಯ (ಜಿಪಿಸಿಸಿ) ನಿರ್ಣಯ ಎಂದು ಹೇಳುವ ಸುಳ್ಳು ದಾಖಲೆಯನ್ನು ರಚಿಸಿ ಜುಲೈ 10, 2019 ರಂದು, ಗೋವಾ ವಿಧಾನಸಭೆಯಲ್ಲಿ ಬಿಜೆಪಿಯೊಂದಿಗೆ (ಕಾಂಗ್ರೆಸ್ ಶಾಸಕಾಂಗ ಪಕ್ಷ) ಪಕ್ಷವನ್ನು ವಿಲೀನಗೊಳಿಸಿದ್ದರು”.

“ಮೇಲಿನ ದಾಖಲೆಯನ್ನು ನಕಲಿ ಲೆಟರ್ ಹೆಡ್ ಮತ್ತು ಜಿಪಿಸಿಸಿಯ ನಕಲಿ ಮುದ್ರೆ(ಸೀಲ್‌)ಯನ್ನು ಬಳಸಿ ಅಕ್ರಮವಾಗಿ ರಚಿಸಲಾಗಿದೆ” ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಮರಾಠರನ್ನು ಆಕ್ರಮಕಾರರು ಎಂದ ಗೋವಾ ಟೂರಿಸಂ ಇಲಾಖೆ; ವಿರೋಧಕ್ಕೆ ಮಣಿದು ಕ್ಷಮೆಯಾಚಿಸಿದೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights