ರಾಜ್ಯದಲ್ಲಿಂದು 100 ಹೊಸ ಕೊರೊನಾ ಕೇಸ್ : ಸೋಂಕಿತರ ಸಂಖ್ಯೆ 2,282ಕ್ಕೇರಿಕೆ!

ಕರುನಾಡಿಕೆ ಸದ್ಯ ಮಹಾರಾಷ್ಟ್ರ ಸೇರಿದಂತೆ ಅನ್ಯ ರಾಜ್ಯಗಳ ಕಂಟಕ ಶುರುವಾಗಿದೆ. ಪರಿಣಾಮ ರಾಜ್ಯದಲ್ಲಿ ಕೊರೊನಾ ಸೋಂಕಿತ ಸಂಖ್ಯೆ ಕಡಿಮೆಯಾಗುವ ಲಕ್ಷಣಗಳೇ ಕಾಣಿಸಿಸುತ್ತಿಲ್ಲ. ಇಂದು ಹೊಸದಾಗಿ 100 ಕೊರೊನಾ ಕೇಸ್ ದಾಖಲಾಗಿದ್ದು ರಾಜ್ಯದಲ್ಲಿ ಈವರಗೆ ಸೋಂಕಿತರ ಸಂಖ್ಯೆ 2,282ಕ್ಕೇರಿಕೆಯಾಗಿದೆ.

ಹೌದು.. ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಮದ್ಯಾಹ್ನದ ಬುಲಿಟಿನ್ ವರದಿಯಲ್ಲಿ 100 ಕೊರೊನಾ ಕೇಸ್ ದಾಖಲಾಗಿವೆ. ನಿನ್ನೆ ಮದ್ಯಾಹ್ನದ ವರದಿಯಲ್ಲಿ 69 ಇದ್ದ ಕೊರೊನಾ ಪೀಡಿತರ ಸಂಖ್ಯೆ ಇಂದು ಮದ್ಯಾಹ್ನಕ್ಕೆ ಶತಕ ಬಾರಿಸಿದೆ. ಕರ್ನಾಟಕದಲ್ಲಿ ಕೊರೊನಾ ವೈರಸ್ ಸೋಂಕಿತರ ಪೈಕಿ ಬಹುತೇಕ ಜನರಿಗೆ ಬೇರೆ ರಾಜ್ಯಗಳಿಂದ ವಾಪಸ್ ಆಗಿರುವ ನಹಿನ್ನೆಲೆಯನ್ನು ಹೊಂದಿದ್ದಾರೆ. ಮಹಾರಾಷ್ಟ್ರದಿಂದ ಆಗಮಿಸಿ 46 ಮಂದಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ.

ಇಂದು ದಾಖಲಾದ 100 ಪ್ಚಿರಕರಣಗಳ ಪೈಕಿ ಚಿತ್ರದುರ್ಗ – 20, ಯಾದಗಿರಿ – 14, ಹಾಸನ – 13, ಬೆಳಗಾವಿ 13, ಬೀದರ್ -10, ವಿಜಯಪುರ -5, ಉಡುಪಿ, ದಕ್ಷಿಣ ಕನ್ನಡ – 3, ಬೆಂಗಳೂರು ನಗರ-2 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಚಿತ್ರದರ್ಗದಲ್ಲಿ ಅಧಿಕ ಸೋಂಕಿತ ಸಂಖ್ಯೆ ಇದ್ದು, ಸಂಜೆ ವೇಳೆಗೆ ಕೊರೊನಾ ಪಾಸಿಟಿವ್ ಸಂಖ್ಯೆ ಅಧಿಕವಾಗುವ ಸಾಧ್ಯತೆ ಇದೆ.

ತಮಿಳುನಾಡಿನಿಂದ ಆಗಮಿಸಿದ 21 ಮಂದಿಗೆ ಕೊವಿಡ್-19 ಕನ್ಫರ್ಮ್ ಆಗಿದೆ. ಇದರ ಜೊತೆಗೆ ಜಾರ್ಖಂಡ್ ನಿಂದ ರಾಜ್ಯಕ್ಕೆ ಆಗಮಿಸಿದ 13 ಮಂದಿಗೂ ಕೊರೊನಾ ವೈರಸ್ ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆ ವೇಳೆ ಪತ್ತೆಯಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights