ಶಿವಮೊಗ್ಗದಲ್ಲಿ ಗಣಪತಿ ವಿಸರ್ಜನೆ ಮೆರವಣಿಗೆಗೆ ಚಾಲನೆ : ಸಾವಿರಾರು ಜನ ಭಾಗಿ

ಶಿವಮೊಗ್ಗ ನಗರದ ಹಿಂದೂ ಮಹಾಸಭಾ ಮಡಳಿಯ ಗಣಪತಿ ವಿಸರ್ಜನೆ ರಾಜಬೀದಿ ಉತ್ಸವಕ್ಕೆ ಚಾಲನೆ ನೀಡಲಾಗಿದೆ. ಭೀಮೇಶ್ವರ ದೇವಾಲಯದಿಂದ ಆರಂಭಗೊಂಡ ರಾಜಬೀದಿ ಉತ್ಸವದಲ್ಲಿ ಸಾವಿರಾರೂ ಜನರು ಮೆರವಣಿಗೆಯಲ್ಲಿ ಭಾಗಿಯಾಗಿದ್ದಾರೆ. ಇದರಿಂದ ಶಿವಮೊಗ್ಗ ನಗರ ಸಂಪೂರ್ಣವಾಗಿ ಕೇಸರಿ ಮಯವಾಗಿದ್ದು,  ವಿವಿಧ ಜನಪದ ಕಲಾ ತಂಡಗಳಿಂದ ಜನಪದ ಕಲೆಗಳ ಪ್ರದರ್ಶನ ನಡೆಸಲಾಗುತ್ತಿದೆ.

ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ‌ ಸಾಗಲಿದ್ದು ಈ ಹಿನ್ನೆಲೆಯಲ್ಲಿ ಶಾಂತಿಯುತ ಮೆರವಣಿಗೆಗೆ ನಡೆಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ಪೊಲೀಸ್ ಇಲಾಖೆ.

ಇದರಿಂದ ಗಣಪತಿ ಮೆರವಣಿಗೆಗೆ ಪೊಲೀಸ್ ಸರ್ಪಗಾವಲು ನಿಯೋಜಿಸಲಾಗಿದೆ. ಓರ್ವ ಎಸ್, ಪಿ, 3 ಎಎಸ್ ಪಿ 16 ಡಿವೈಎಸ್ ಪಿ, ತಲಾ 51 ಸಿಪಿಐ ಹಾಗೂ ಪಿಎಸ್ಐ, 156 ಎಎಸ್ಐ ನಿಯೋಜನೆ. ಜೊತೆಗೆ 3 ಸಾವಿರ ಹೆಚ್ಚು ಜನ ಹೆಚ್ ಪಿಸಿ, ಪಿಸಿ ಹಾಗೂ ಹೋಮ್ ಗಾರ್ಡ್ ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ.

1 ಆರ್ ಎ ಎಫ್, 14 ಕೆಎಸ್ ಆರ್ ಪಿ, 13 ಡಿಎಅರ್ ತುಕಡಿ ನಿಯೋಜಿಸಲಾಗಿದೆ. ಈಗಿರುವ 100 ಸಿಸಿ ಕ್ಯಾಮರಾ ಜೊತೆ 200 ಹೆಚ್ಚುವರಿ ಸಿಸಿ ಕ್ಯಾಮೆರಾ ಮತ್ತ 3 ಡ್ರೋನ್ ಕ್ಯಾಮರಾ ಬಳಕೆ ಮಾಡಲಾಗುತ್ತಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ‌ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯಿಂದ ಸಿದ್ಧತೆ ಮಾಡಿಕೊಳ್ಳಲಾಗಿದೆ.

 

 

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights