ಹುಬ್ಬಳ್ಳಿಯಲ್ಲಿ ಪೊಲೀಸರ ಹಗಲು ದರೋಡೆ : ವೈರಲ್ ಆಯ್ತು ವಿಡಿಯೋ
ಹುಬ್ಬಳ್ಳಿಯಲ್ಲಿ ಪೊಲೀಸರ ಹಗಲು ದರೋಡೆ ಮಾಡುತ್ತಿರುವ ವಿಡಿಡೋ ಸಖತ್ ವೈರಲ್ ಆಗಿದೆ.
ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರಿಂದ ಮರಳು ಲಾರಿ, ಗೂಡ್ಸ್ ಲಾರಿಗಳನ್ನು ತಡೆದು ಹಣ ಸುಲಿಗಿಳಿದ ದೃಶ್ಯ ಸೆರೆ ಹಿಡಿಯಲಾಗಿದೆ. ಎಎಸ್ಐ ಚೌಡಪ್ಪನವರ್ ನೇತ್ರತ್ವದಲ್ಲಿ ಪೊಲೀಸ್ ಸಿಬ್ಬಂಧಿಗಳು ಲೈಸನ್ಸ್, ಪರ್ಮಿಟ್, ಓವರ್ಲೋಡ್ ಮತ್ತು ದಾಖಲೆ ಕೇಳುವ ನೆಪದಲ್ಲಿ ಹಣ ವಸೂಲಿ ಮಾಡಿದ್ದಾರೆ. ವಸೂಲಿ ಮಾಡುವ ವೇಳೆ ಮೇಲಧಿಕಾರಿಗಳಿಗೆ ಕೊಡಬೇಕೆಂದು ಹೇಳಿ ಲಾರಿ ಚಾಲಕರಿಂದ ಬೆದರಿಸಿ ಹಣ ಸಂಗ್ರಹ ಮಾಡಲಾಗಿದೆ.
ಹುಬ್ಬಳ್ಳಿ- ಕುಸುಗಲ್ ರಸ್ತೆಯ ಊರ ಹೊರವಲಯಕ್ಕೆ ಖಾಸಗಿ ಕಾರಲ್ಲಿ ಸುಲಿಗೆ ನಡೆಸುವ ಪೊಲೀಸರ ಅಸಲಿ ಬಣ್ಣ ಬಯಲಲಾಗಿದೆ. ಪೊಲೀಸರ ಹಗಲು ದರೋಡೆ ದೃಶ್ಯಗಳನ್ನು ಮೊಬೈಲ್ನಲ್ಲಿ ಸೆರೆಹಿಡಿದ ಲಾರಿ ಚಾಲಕರು ಶೇರ್ ಮಾಡಿದ್ದಾರೆ.
ವಸೂಲಿಕೋರ ಪೊಲೀಸರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ವೈರಲ್ ಆಗಿದೆ.