FACT CHECK | ಶೇಖರ್ ಆಸ್ಪತ್ರೆ ಬಗ್ಗೆ ವಾಟ್ಸಾಪ್‌ಲ್ಲಿ ಸುಳ್ಳು ಸಂದೇಶ ಹಂಚಿಕೆ
ಬೆಂಗಳೂರಿನ ಬಸವನಗುಡಿಯಲ್ಲಿರುವ ಶೇಖರ್ ಆಸ್ಪತ್ರೆಯ ಬಗ್ಗೆ ಸಂದೇಶವೊಂದನ್ನು ವಾಟ್ಸಾಪ್‌ಗ್ರೂಪ್‌ಗಳಲ್ಲಿ ಕೋಮು ನಿರೂಪಣೆಯೊಂದಿಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಇತ್ತೀಚೆಗೆ ಮುಸ್ಲಿಂ ಸಮುದಾಯವನ್ನು ಸಮಾಜದ ದೃಷ್ಟಿಯಲ್ಲಿ ಅಪರಾಧಿಗಳು ಎಂಬಂತೆ ಬಿಂಬಿಸುವ ಸಲುವಾಗಿ ವ್ಯವಸ್ಥಿತವಾಗಿ ಸಂಚುರೂಪಿಸಲಾಗುತ್ತಿದೆ. ಪ್ರತೀದಿನ ಮುಸ್ಲಿಂ ವಿರೋಧಿ ಸಂದೇಶಗಳನ್ನು ಹರಿಬಿಡಲು ಅನೇಕ ನಕಲಿ ಖಾತೆಗಳು ಸಾಮಾಜಿಕ ಜಾಲತಾಣಗಳಲ್ಲಿ ಸೃಷ್ಟಿಸಲಾಗಿದೆ. ಮತ್ತು ವಾಟ್ಸಾಪ್ ಸಂದೇಶಗಳನ್ನು ಸಹ ನಿರಂತರವಾಗಿ ಹರಿಬಿಡಲಾಗುತ್ತಿದೆ.
ಹಾಗಿದ್ದರೆ ಬಸವನಗುಡಿಯಲ್ಲಿರುವ ಶೇಖರ್ ಆಸ್ಪತ್ರೆಗೆ ಸಂಬಂಧಿಸಿದಂತೆ ವಾಟ್ಸಾಪ್ ಸಂದೇಶದಲ್ಲಿ ಹಂಚಿಕೊಳ್ಳಲಾಗುತ್ತಿರುವ ಸಂದೇಶದಲ್ಲಿ ಮಾಡಿರುವ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ ಚೆಕ್:
ವಾಟ್ಸಾಪ್ ಸಂದೇಶದಲ್ಲಿ ಹಂಚಿಕೊಂಡಿರುವಂತೆ ಬೆಂಗಳೂರಿನ ಬಸವನಗುಡಿಯ ಶೇಖರ್ ಆಸ್ಪತ್ರೆಯು ಮುಸ್ಲಿಮರ ಆಡಳಿತ ಶಾಖೆಯನ್ನು ಹೊಂದಿದೆ ಎಂದು ಕೋಮು ವೈಷಮ್ಯದ ಕಟ್ಟುಕಥೆಯನ್ನು ಹೆಣೆಯಲಾಗಿದೆ. ಬೆಂಗಳೂರಿನ ಬಸವನಗುಡಿಯ ಶೇಖರ್ ಆಸ್ಪತ್ರೆ ಮುಸ್ಲಿಂ ನಿರ್ವಾಹಣೆಯಲ್ಲಿದೆ. ಮುಸ್ಲಿಮರು ಕುರಿತು ದ್ವೇಷ ಹರಡುವ ಸಲುವಾಗಿ ಇಂತಹ ಸಂದೇಶವೊಂದನ್ನು ಹರಿಬಿಡಲಾಗಿದೆ.
ವೈರಲ್ ಸಂದೇಶದಲ್ಲಿ ಆರೋಪಿಸಿರುವಂತೆ ಶೇಖರ್ ಆಸ್ಪತ್ರೆಯ ಮುಖ್ಯ ವೈದ್ಯರ ಕುರಿತು ಪರಿಶೀಲಿಸಲ, ಶೇಖರ್ ಆಸ್ಪತ್ರೆಯ ಅಧಿಕೃತ ವೆಬ್‌ಸೈಟ್‌ನ ಸರ್ಚ್ ಮಾಡಿದಾಗ, ಡಾ. ಅಶ್ವಿನ್ ಎಸ್ ಈ ಆಸ್ಪತ್ರೆಯ ಮುಖ್ಯಸ್ಥರಾಗಿದ್ದಾರೆ. ಇವರು ಕಳೆದ ಇಪ್ಪತ್ತು ವರ್ಷಗಳಿಂದ ವೈಧ್ಯರಾಗಿ ಸೇವೆ ಸಲ್ಲಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಶೇಖರ್ ಆಸ್ಪತ್ರೆಯಲ್ಲಿ ಮುಸ್ಲಿಂ ವೈದ್ಯರು ಯಾರಾದರೂ ಕಾರ್ಯ ನಿರ್ವಹಿಸುತ್ತಿದ್ದಾರೆಯೇ ಎಂದು ಪರಿಶೀಲಿಸಲು ಮತ್ತಷ್ಟು ಸರ್ಚ್ ಮಾಡಿದಾಗ, ಅಂತಹ ಯಾವುದೇ ಮುಸ್ಲಿಂ ವೈದ್ಯರ ಹೆಸರು ಲಭ್ಯವಾಗಿಲ್ಲ. ಡಾ. ವಿಶ್ವಜಿತ್ ಮೂರ್ತಿ, ಡಾ. ಮೀನಾಕ್ಷಿ ಆರ್ ಕಾಮತ್ ಅವರು ಶೇಖರ್ ಆಸ್ಪತ್ರೆಯ ಮುಖ್ಯ ವೈದ್ಯರುಗಳಾಗಿದ್ದಾರೆ.
ಮತ್ತಷ್ಟು ಮಾಹಿತಿಗಾಗಿ ಆಸ್ಪತ್ರೆಯ ಆಡಳಿತ ಮಂಡಳಿಯನ್ನು ಸಂಪರ್ಕಿಸಿ ವಾಟ್ಸಾಪ್‌ನಲ್ಲಿ ಹಂಚಿಕೊಳ್ಳಲಾಗುತ್ತಿರುವ ಸಂದೇಶವ ಕುರಿತು ವಿಚಾರಿಸಿದಾಗ, ವಾಟ್ಸಾಪ್ ಸಂದೇಶದ ಮಾಹಿತಿಯನ್ನು ತಳ್ಳಿಹಾಕಿದ್ದಾರೆ. “ಯಾರೋ ಕೆಲವು ಕಿಡಿಗೇಡಿಗಳು ಆಸ್ಪತ್ರೆಯ ಹೆಸರಿಗೆ ಕೆಟ್ಟ ಹೆಸರು ತರುವ ದುರುದ್ದೇಶದಿಂದ ಸುಳ್ಳು ಮಾಹಿತಿಯನ್ನು ಹರಿಬಿಟ್ಟಿದ್ದಾರೆ. ಶೇಖರ್ ಆಸ್ಪತ್ರೆ ಮುಸ್ಲಿಂ ವೈದ್ಯರ ನಿರ್ವಾಹಣೆಯಲ್ಲಿ ಇಲ್ಲ, ಇಂತಹ ಸಂದೇಶವನ್ನು ನಂಬಬೇಡಿ” ಎಂದು ತಿಳಿಸಿದ್ದಾರೆ. ಆದ್ದರಿಂದ ಬೆಂಗಳೂರಿನ ಬಸವನಗುಡಿಯಲ್ಲಿ ಇರುವ ಶೇಖರ್ ಆಸ್ಪತ್ರೆ ಮುಸ್ಲಿಂ ವೈದ್ಯರ ನಿರ್ವಹಣೆಯಲ್ಲಿದೆ ಎಂಬುದು ಮತ್ತು ರೋಗಿಯೊಬ್ಬರು ಮೋಸಹೋದ ಘಟನೆಯು ಕಟ್ಟುಕಥೆಯಾಗಿದೆ. ಹಾಗಾಗಿ ವೈರಲ್ ಸಂದೇಶವನ್ನು ಪ್ರಸಾರವಾಗತ್ತಿರುವ ಮಾಹಿತಿ ಸುಳ್ಳು.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ವಿಶ್ವಸಂಸ್ಥೆಯಲ್ಲಿ ಭಾರತ ಖಾಯಂ ಸದಸ್ಯತ್ವ ಹೊಂದಿದೆ ಎಂಬುದು ಸುಳ್ಳು