BSY cabinet : ರಮೇಶ್ ಪಟ್ಟಿಗೆ ಮಣಿದ ಸಿಎಂ: ಜಲ ಸಂಪನ್ಮೂಲಕ್ಕೆ ಜಾರಕಿಹೊಳಿ ಬಾಸ್..

ಕಳೆದ ಗುರುವಾರ ಸಂಪುಟಕ್ಕೆ ಸೇರ್ಪಡೆಯಾದ 10 ಮಂದಿ ನೂತನ ಸಚಿವರಿಗೆ ಕೊನೆಗೂ ಖಾತೆ ಹಂಚಿಕೆಯಾಗಿದೆ. ಪ್ರಮಾಣವಚನ ಸ್ವೀಕರಿಸಿ ನಾಲ್ಕು ದಿನಗಳ ತರುವಾಯ ಈ ಮಂತ್ರಿಗಳಿಗೆ ಸೋಮವಾರ ಖಾತೆ ಭಾಗ್ಯ ನೀಡಲಾಗಿದೆ.
ಮಾಜಿ ಸಚಿವ ಡಿಕೆ ಶಿವಕುಮಾರ್‍ ವಿರುದ್ಧ ಸಡ್ಡು ಹೊಡೆದು ಮೈತ್ರಿ ಸರಕಾರ ಬೀಳಿಸುವ ಗುಂಪಿನ ನಾಯಕತ್ವ ವಹಿಸಿದ್ದ ರಮೇಶ್ ಜಾರಕಿಹೊಳಿ ಪಟ್ಟಿಗೆ ಮುಖ್ಯುಮಂತ್ರಿ ಯಡಿಯೂರಪ್ಪ ಕೊನೆಗೂ ಮಣಿದಿದ್ದಾರೆ. ಜಾರಕಿಹೊಳಿಗೆ ಅವರ ಬೇಡಿಕೆಯ ಜಲ ಸಂಪನ್ಮೂಲ ಖಾತೆಯನ್ನೇ ದಯಪಾಲಿಸಿದ್ದಾರೆ.

ಋಹಿಲಾಖೆ ಮೇಲೆ ಕಣ್ಣಿಟ್ಟಿದ್ದ ಬಿಸಿ ಪಾಟೀಲರಿಗೆ ಅದರ ಬದಲಾಗಿ ಅರಣ್ಯ ಖಾತೆ ನೀಡಲಾಗಿದ್ದು, ಶ್ರೀಮಂತ ಪಾಟೀಲರಿಗೆ ಜವಳಿ ವ್ಯವಹಾರ ನೋಡಿಕೊಳ್ಳಲು ಹೇಳಲಾಗಿದೆ. ಮುಖ್ಯಮಂತ್ರಿ ಶಿಫಾರಸಿನ ಂಏರೆಗೆ ರಾಜ್ಯಪಾಲರು ನೂತನ ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ್ದಾರೆ.

ಯಾರಿಗೆ ಯಾವ ಖಾತೆ

ರಮೇಶ್ ಜಾರಕಿಹೊಳಿ- ಜಲಸಂಪನ್ಮೂಲ

ಬಿ.ಸಿ.ಪಾಟೀಲ್- ಅರಣ್ಯ

ಎಸ್.ಟಿ.ಸೋಮಶೇಖರ್- ಸಹಕಾರ

ಬಿ.ಎ.ಬಸವರಾಜು- ನಗರಾಭಿವೃದ್ಧಿ

ಡಾ.ಕೆ.ಸುಧಾಕರ್- ವೈದ್ಯಕೀಯ ಶಿಕ್ಷಣ

ಕೆ.ಗೋಪಾಲಯ್ಯ- ಸಣ್ಣ ಕೈಗಾರಿಕೆ

ಶಿವರಾಮ್ ಹೆಬ್ಬಾರ್- ಕಾರ್ಮಿಕ

ಶ್ರೀಮಂತ ಪಾಟೀಲ್- ಜವಳಿ

ನಾರಾಯಣ ಗೌಡ- ಪೌರಾಡಳಿತ,ತೋಟಗಾರಿಕೆ

ಆನಂದ್ ಸಿಂಗ್- ಆಹಾರ ಮತ್ತು ನಾಗರಿಕ ಪೂರೈಕೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights