Covid 19 : ಕ್ಷೇತ್ರಾಭಿವೃದ್ಧಿ ಅನುದಾನವನ್ನು PM ಪರಿಹಾರ ನಿಧಿಗೆ ನೀಡಲು MPಗಳ ಮೀನಾಮೇಷ

ಕೋವಿಡ್ ವಿರುದ್ಧ ಹೋರಾಟಕ್ಕೆ ನೆರವಾಗುವ ಉದ್ದೇಶದಿಂದ ಕಳೆದ ವಾರ  ಆರಂಭಿಸಲಾದ  ಪರಿಹಾರ ನಿಧಿಗೆ ದೇಣಿಗೆ ನೀಡಲು ಹಲವಾರು ಸಂಸದರು ಹಿಂದೇಟು ಹಾಕುತ್ತಿದ್ದಾರೆ.   ಕ್ಷೇತ್ರದ ಅಭಿವೃದ್ಧಿಗೆಂದು  ಪ್ರತಿ ವರ್ಷ ನೀಡಲಾಗುವ 5 ಕೋಟಿ ರೂಗಳಲ್ಲಿ ಒಂದು ಭಾಗವನ್ನು ಪಿಎಂ ಪರಹಾರ ನಿಧಿಗೆ ನೀಡಲು ಹಲವಾರು ಸಂಸದರು ಉತ್ಸುಕರಾಗಿಲ್ಲ.

 

ಕ್ಷೇತ್ರಾನುದಾನದ ಹಣದಲ್ಲಿ ಒಂದು ಕೋಟಿ ರೂಗಳನ್ನು ಪರಿಹಾರ ನಿಧಿಗೆ ನೀಡಲು ಅನುಮತಿ ನೀಡುವಂತೆ ಲೋಕಸಭೆ ಹಾಗೂ ರಾಜ್ಯಸಭಾ ಮುಖ್ಯಸ್ಥರು ಎಲ್ಲ ಎಂಪಿಗಳಿಗೆ ಪತ್ರ ಬರೆದಿದ್ದಾರೆ. ಆದರೆ ಎರಡೂ ಸದನಗಳು ಸೇರಿ 700ಕ್ಕೂ ಹೆಚ್ಚು ಎಂಪಿಗಳಿದ್ದರೂ ಈವರೆಗೆ ಸುಮಾರು 300 ಮಂದಿ ಮಾತ್ರ ತಮ್ಮ ಅನುದಾನದ ಒಂದು ಭಾಗವನ್ನು ಪಿಎಂ ನಿಧಿಗೆ ನೀಡಲು ಒಪ್ಪಿದ್ದಾರೆ ..

ಪರಹಾರ ನಿಧಿಗೆ ನೀಡುವ ಬದಲಾಗಿ ತಮ್ಮ ಕ್ಷೇತ್ರಾನುದಾನವನ್ನು ನೇರವಾಗಿ ಜಿಲ್ಲಾಸ್ಪತ್ರೆಗಳಿಗೆ ಕೊರೋನಾ ಕೆಲಸಗಳಿಗಾಗಿ ಬಿಡುಗಡೆ ಮಾಡುವುದು ಹೆಚ್ಚು ಉಚಿತ ಎಂಬುದು ಬಹುತೇಕ ಎಂಪಿಗಳ ಮಾತಾಗಿದೆ. ಬಹುತೇಕ ವಿರೋಧ ಪಕ್ಷಗಳ ಸದಸ್ಯರು ಮಾತ್ರವಲ್ಲದೇ ಬಿಜೆಪಿಯ ಹಲವಾರು ಸಂಸದರು ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ..

ಈ ಮಧ್ಯೆ ಕ್ಷೇತ್ರಾನುದಾನವನ್ನು ಪಿರಂ ನಿಧಿಗೆ ನೀಡುವ ಸಂಸದರ ಕ್ರಮದ ವಿರುದ್ಧ ಮಾಜಿ ಸಿಎಂ ಸಿದ್ದರಾಂಯ್ಯ ಅವರೂ ಸಹ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.  ಕ್ಷೇತ್ರಗಳ ಅಭಿವೃದ್ಧಿಗೆ ಎಂದು ಸಂಸದರಿಗೆ ಹಣವನ್ನು ನೀಡಲಾಗಿದೆ. ಅದನ್ನು ಬಳಸಿ ಕೊರೋನಾ ವಿರುದ್ಧ ಹೋರಾಡುತ್ತಿರುವವರ ನೆರವಿಗೆ ಬರಬಹುದು. ಅದನ್ನು ಬಿಟ್ಟು ತಮ್ಮಮ ಕ್ಷೇತ್ರದ ಅಭಿವೃದ್ಧಿಗೆಂದು ಬರುವ ಹಣವನ್ನು ಕೇಂದ್ರದ ನಿಧಿಗೇ ವಾಪಸ್ ನೀಡುವುದರ ಔಚಿತ್ಯವನ್ನು ಸಿದ್ದರಾಂಯ್ಯ ಪ್ರಶ್ನಿಸಿದ್ದಾರೆ.

ಎಲ್ಲ ಸಂಸತ್ ಸದಸ್ಯರೂ ಈ ನಿಧಿಗೆ ದೇಣಿಗೆ ನೀಡಿದರೆ ಅದರಿಂದ ಸುಮಾರು 700 ಕೋಟಿಗೂ ಹೆಚ್ಚು ಹಣ ಆಕರವಾಗಲಿದೆ. ಈಗಾಗಲೇ ಒಂದು ವಾರದಲ್ಲಿ ಈ ನಿಧಿಗೆ 2 ಕೋಟಿಗಿಂತಲೂ ಹೆಚ್ಚು ದೇಣಿಗೆ ಬಂದಿದ್ದು, ಕಾರ್ಪೊರೇಟ್ ಸಂಸ್ಥೆಗಳು ಕೈಯೆತ್ತಿ ದಾನ ಮಾಡಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights