Lock down effect :ಏರ್ ಡೆಕ್ಕನ್ ವಿಮಾನ ಸಂಸ್ಥೆ ’ಲಾಕ್ಡೌನ್’, ನೌಕರರಿಗೆ ಸಂಬಳ ಇಲ್ಲದ ರಜೆ..
ಕೊರೋನಾ ಮತ್ತು ಅದಕ್ಕೆ ಕಡಿವಾಣ ಹಾಕಲು ಜಾರಿಯಲ್ಲಿರುವ ಲಾಕ್ಡೌನ್ ಪರಿಣಾಮ ಎದುರಿಸಲಾಗದೇ ಅನೇಕ ಕಂಪನಿಗಳು ಮುಚ್ಚುತ್ತಿವೆ.. ಕರೋನಾಕ್ಕೆ ಬಲಿಯಯಾದ ಪಟ್ಟಿಗೆ ಏರ್ ಡೆಕ್ಕನ್ ಸಂಸ್ಥೆ ಹೆಸರು ಇಗ ಸೆರಿಕೋಡಿದೆ..

ಅಹಮದಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಭಾವನಗರ, ದಿಯು ಮತ್ತು ಮುಂದ್ರಾ ಶಹರಕ್ಕೆ ಎರಡು ವಿಮಾನಗಳನ್ನು ಹಾರಿಸುವ ಏರ್ ಡೆಕ್ಕನ್ ಅನಿರ್ದಿಷ್ಟಾವಧಿಗೆ ಬಾಗಿಲು ಎಳೆದಿದೆ. ಯಾವುದೇ ವೇತನ ಬಾಕಿ ನೀಡದೇ ತನ್ನ ಎಲ್ಲ ನೌಕರ ಮತ್ತು ಸಿಬ್ಬಂದಿ ವರ್ಗವನ್ನು ಸುದೀರ್ಘ ಅವಧಿಗೆ ರಜೆ ಮೇಲೆ ತೆರಳಲು ಸೂಚಿಸಿರುವ ಏರ್ ಡೆಕ್ಕನ್ ಸದ್ಯದ ಮಟ್ಟಿಗೆ ಬಾಗಿಲು ಬಂದ್ ಮಾಡಿದೆ.
ದೇಶದಲ್ಲಿ ಕಡಿಮೆ ಬೆಲೆಯೆ ವಿಮಾನ ಯಾನದ ಹೊಸ ಶಕೆ ಆರಂಭ ಮಾಡಿದ ಕೀರ್ತಿಯ, ಕನ್ನಡಿಗ ಗೋಪಿನಾಥ್ ಅವರ ಮುಂದಾಳತ್ವದ ಏರ್ ಡೆಕ್ಕನ್ ಎರಡು ವರ್ಷಗಳ ಹಿಂದಷ್ಟೇ ಗುಜರಾತಿನ ಮಟ್ಟಿಗೆ ಸೇವೆ ಆರಂಭಿಸಿತ್ತು. ಸದ್ಯದ ಅನಿಶ್ಚಿತ ಪರಿಸ್ಥಿತಿಯಲ್ಲಿ ಸಂಸ್ಥೆ ನಡೆಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ಕ್ರಮ ಅನಿವಾರ್ಯವಾಗಿದೆ ಎಂದು ಏರ್ ಡೆಕ್ಕನ್ ಸಂಸ್ಥೆಯ ಸಿಇಒ ಅರುಣ್ ಕುಮಾರ್ ನೌಕರರಿಗೆ ಸಂದೇಶ ರವಾನಿಸಿದ್ದಾರೆ.
ದೇಶಕ್ಕೆ ವಕ್ಕರಿಸಿರುವ ಕೊರೋನಾ ವೈರಾಣುವಿನ ಕಾಟದಿಂದ ಬಚಾವ್ ಆಗಲು ಕೇಂದ್ರ ಸರಕಾರ ಕಳೆದ ತಿಂಗಳ 25ರಿಂದ ಏಪ್ರಿಲ್ 14ರ ತನಕ 21 ದಿನಗಳ ವಿಮಾನ ಸೇವೆ ಬಂದ್ ಮಾಡಿದೆ. ಈ ಅವಧಿಯಲ್ಲಿ ವಿಮಾನ, ಬಸ್, ರೈಲು ಸಂಚಾರ ಸ್ಥಗಿತಗೊಳಿಸಲಾಗಿದ್ದು ಇಡೀ ದೇಶಾದ್ಯಂತ ಸಂಪೂರ್ಣ ಲಾಕ್ಡೌನ್ ವಿಧಿಸಲಾಗಿದೆ.

ಲಾಕ್ಡೌನ್ ತೆರವಿಗೆ ದನಗಣನೆ ಆರಂಭವಾಗಿದ್ದರೂ ಆ ಕುರಿತು ಸರಕಾರದಿಂದ ಯಾವುದೇ ರೀತಿಯ ಸ್ಪಷ್ಟತೆ ಈವರೆಗೆ ದೊರೆತಿಲ್ಲ. ದೇಶೀಯ ವಿಮಾನ ಸಂಸ್ಥೆಗಳು 15ರ ನಂತರ ಮುಂಗಡ ಟಿಕೆಟ್ ನೀಡುತ್ತಿವೆಯಾದರೂ ವಿಮಾನಗಳು ಹಾರುವುದೇ ಇಲ್ಲವೇ ಎಂಬ ಪ್ರಶ್ನೆ ಇತ್ಯರ್ಥ ಕಂಡಿಲ್ಲ.
ಏಪ್ರಿಲ್ 15ಕ್ಕೆ ಲಾಕ್ಡೌನ್ ಅಂತ್ಯಗೊಂಡರೂ ಏಕಾಏಕಿ ಮೊದಲಿನ ಪರಿಸ್ಥಿತಿ ಇರುವುದಿಲ್ಲ. ಕೊರೋನಾ ವಿರುದ್ಧದ ನಿರ್ಬಂಧಗಳನ್ನು ಹಂತ ಹಂತವಾಗಿ ಸಡಿಲಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಯೊಚಿಸುತ್ತಿದೆ ಎಂಬ ವರದಿಗಳು ಇವೆ.

