Lock down : Hot spot ಲಾಕ್‌ಡೌನ್ ಮುಂದುವರಿಕೆ ಖಚಿತ PM ನರೇಂದ್ರ ಮೋದಿ ಇಂಗಿತ..

ಮುಂದಿನ ತಿಂಗಳ ಮೂರರ ನಂತರವೂ ದೇಶದಲ್ಲಿ ಲಾಕ್‌ಡೌನ್ ಮುಂದುವರಿಯುವುದು ಬಹುತೇಕ ಖಚಿತವಾಗಿದೆ. ವಿವಿಧ ರಾಜ್ಯಗಳ ಸಿಎಂಗಳ ಜೊತೆ ನಡೆಸಿದ ವಿಡಿಯೋ ಸಭೆಯಲ್ಲಿ ಈ ಕುರಿತ ಅಭಿಪ್ರಾಯ ಮುಡಿದೆ. ಆದರೆ ಈ ಬಾರಿ ಲಾಕ್‌ಡೌನ್ ಕಾರಸ್ಥಾನಗಳಿಗೆ (Hot spot )  ಸೀಮಿತವಾಗಲಿದೆ.

ಹಾಟ್‌ಸ್ಪಾಟ್‌ಗಳಲ್ಲಿ ಯಾವುದೇ ರೀತಿಯ ವಿನಾಯ್ತಿ ಸಾಧ್ಯವಿಲ್ಲ ಎಂದು ಪ್ರಧಾನಿ ಸಭೆಗೆ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾಗಿ ವರದಿಯಾಗಿದೆ. ಹಾಟ್‌ಸ್ಪಾಟ್‌ಗಳ ಹೊರತಾಗಿ ಸಾಮಾಜಿಕ ಅಂತರ ನಿಯಮಗಳ ಅನುಸಾರ ಲಾಕ್‌ಡೌನ್ ಸಡಿಲಿಕೆ ಬಗ್ಗೆ ಸಭೆಯಲ್ಲಿ ಸಾಕಷ್ಟು ಚರ್ಚೆಯಾಗಿದೆ.

ವಾಣಿಜ್ಯ ಚಟುವಟಿಕೆಗಳನ್ನು ದೀರ್ಘಕಾಲ ಸ್ಥಬ್ಧಗೊಳಿಸುವುದು ಕಾರ್‍ಯಸಾಧುವಲ್ಲ ಎಂಬ ಅಭಿಪ್ರಾವೂ ಈ ಸಭೆಯಲ್ಲಿ ವ್ಯಕ್ತವಾಯಿತು ಎನ್ನಲಾಗಿದೆ. ಈ ಮಧ್ಯೆ ದೇಶದ ಆರ್ಥಿಕ ಪರಿಸ್ಥಿತಿ ಸಬಲವಾಗಿದ್ದು ಯಾರೂ ಈ ಬಗ್ಗೆ ಆತಂಕ ಪಡುವ ಅಗತ್ಯವಲ್ಲಿ ಎಂದು ಪ್ರಧಾನಿ ಮೋದಿ ಸಭೆಗೆ ಆಶ್ವಾಸನೆ ನೀಡಿದ್ದಾರೆ.

ಲಾಕ್‌ಡೌನ್‌ನಿಂದಾಗಿ ಆರ್ಥಿಕತೆ ಮೇಲೆ ಬಲವಾದ ಪೆಟ್ಟು ಬೀಳಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ಮೋದಿ ಅವರು ಸಿಎಂಗಳಿಗೆ ಈ ಅಭಯ ನೀಡಿದ್ದಾರೆ ಎನ್ನಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights