WFH: ಎಣ್ಣೆ ಗಮ್ಮತ್ತಿನ ಫೋಟೋ ಹಾಕಿ ಕೈಹಿಸುಕಿಕೊಂಡ ಕೇಂದ್ರ ಗೃಹ ಖಾತೆ ಫೇಸ್ಬುಕ್ ಪುಟ

ಲಾಕ್ ಡೌನ್ ನಡುವೆ ಮನೆಯಿಂದ ಕೆಲಸ ಮಾಡುವುದು ಸುಲಭ ಅಂದುಕೊಂಡಿದ್ದರೆ ಮತ್ತೊಮ್ಮೆ ಯೋಚಿಸಿ. ಕೇಂದ್ರ ಗೃಹ ಖಾತೆಯ ಫೇಸ್ಬುಕ್ ಪುಟ ನಿರ್ವಹಿಸುವವರು ಇಂತದೊಂದು ಅಚಾತುರ್ಯ ಮಾಡಿಕೊಂಡು ನಂತರ ಸರಿಪಡಿಸಿಕೊಂಡಿದ್ದಾರೆ.

ಕೇಂದ್ರ ಗೃಹ ಖಾತೆಯ ಫೇಸ್ಬುಕ್ ಪುಟ ನಿರ್ವಹಿಸುವ ವ್ಯಕ್ತಿ ಎರಡು ಬಾಟೆಲ್ ವಿಸ್ಕಿ ಮತ್ತು ಸೈಡ್ಸ್ ಇರುವ ಫೋಟೋ ಜೊತೆಗೆ ಪಶ್ಚಿಮ ಬಂಗಾಳದಲ್ಲಿ ಆಂಫಾನ್ ಸೈಕ್ಲೋನ್ ಪರಿಹಾರ ಕಾರ್ಯದ ಚಟುವಟಿಕೆಯ ಫೋಟೋಗಳನ್ನು ಸೇರಿಸಿ ಪೋಸ್ಟ್ ಹಾಕಿದ್ದಾರೆ. ಬೆಳಗ್ಗೆ ಒಂಬತ್ತು ಘಂಟೆಗೆ ಪೋಸ್ಟ್ ಮಾಡಿರುವ ಈ ಫೋಟೋಗಳನ್ನು ಅರ್ಧ ಘಂಟೆಯ ನಂತರೆ ತೆಗೆದು ಹಾಕಲಾಗಿದೆ. ಆದರೆ ಸ್ಕ್ರೀನ್ ಶಾಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಇದರ ಬೆಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವಾಲಯದ ಅಧಿಕಾರಿಗಳು, ಇದು ಕಣ್ತಪ್ಪಿನಿಂದ ಆಗಿದೆ. ಫೇಸ್ಬುಕ್ ಪುಟವನ್ನು ನಿರ್ವಹಿಸುವ ವ್ಯಕ್ತಿ ಅವರ ವೈಯಕ್ತಿಕ ಮತ್ತು ಗೃಹ ಸಚಿವಾಲಯದ ಕೆಲಸವನ್ನು ಮಿಕ್ಸ್ ಮಾಡಿ ತಪ್ಪೆಸಗಿದ್ದಾರೆ ಎಂದಿದ್ದಾರೆ. ಇದಕ್ಕೆ ಆ ಪುಟ ನಿರ್ವಹಿಸುತ್ತಿರುವ ವ್ಯಕ್ತಿ ಕ್ಷಮೆ ಕೋರಿದ್ದಾರೆ ಎಂದು ಕೂಡ ಅವರು ತಿಳಿಸಿಸಿದ್ದಾರೆ.

ಆದರೆ ಇದರ ಬಗ್ಗೆ ಟ್ವಿಟ್ಟರ್ ಮತ್ತು ಫೇಸ್ಬುಕ್ ನಲ್ಲಿ ಹಾಸ್ಯದ ಹೊನಲು ಹರಿದಿದೆ. ಯಾರೋ ಒಬ್ಬರು “ಕೆಲಸದ ನಡುವೆಯ ಎಕ್ಸೈಸ್ ಡ್ಯೂಟಿ ಕಟ್ಟುತ್ತಿದ್ದಾರೆ” ಎಂದು ಬರೆದಿದ್ದರೆ ಮತ್ತೊಬ್ಬರು “ಈ ಆರ್ಥಿಕ ಹಿಂಜರಿತದ ಸಮಯದಲ್ಲಿ ಆರ್ಥಿಕತೆ ವೃದ್ಧಿಸಲು ಮದ್ಯ ಕೊಳ್ಳಿ ಎಂಬ ಪರೋಕ್ಷ ಸೂಚನೆ ಕೊಡುತ್ತಿದ್ದಾರೆ” ಎಂದು ಬರೆದಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights