ಕೊರೊನಾದಿಂದ ತತ್ತರಿಸಿದ ಮಹಾರಾಷ್ಟ್ರ : ಒಂದೇ ದಿನದಲ್ಲಿ 3041 ಕೇಸ್..!

ಕೊರೊನಾ ವೈರಸ್ ಕಾರ್ಮೋಡ ಎಲ್ಲೆಡೆ ಹರಡುತ್ತಿದ್ದು ಕೆಲವೊಂದು ರಾಜ್ಯಗಳನ್ನು ಹೆಚ್ಚಾಗಿ ಬಾಧಿಸುತ್ತಿದೆ. ದೇಶದಲ್ಲಿ ಕೊರೊನಾ ಸೋಂಕು ವೇಗವಾಗಿ ಹರಡುತ್ತಿದ್ದು, ಲಾಕ್ ಡೌನ್ 4.0 ಸಡಿಲಗೊಂಡಾಗಿನಿಂದಲೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ ನಿನ್ನೆ ಒಂದೇ ದಿನದಲ್ಲಿ ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3041 ರಷ್ಟು ದಾಖಲಾಗಿದೆ.

ಹೌದು.. ದೇಶದಲ್ಲಿ ಕೊರೊನಾ ವೈರಸ್ ವೇಗವಾಗಿ ವ್ಯಾಪಿಸುತ್ತಿದ್ದು, 6,977 ಹೊಸ ಪ್ರಕರಣಗಳು ದಾಖಲಾಗಿದ್ದು, 154 ಮಂದಿಯನ್ನು ಬಲಿಯಾಗಿದ್ದಾರೆ. ಇದು ಈವರೆಗೆ ಭಾರತದಲ್ಲಿ ಒಂದೇ ದಿನದಲ್ಲಿ ಅತೀ ಹೆಚ್ಚು ಸೋಂಕಿತರ ಸಂಖ್ಯೆ ದಾಖಲಾದ ದಿನವಾಗಿದೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,38,845ಕ್ಕೆ ತಲುಪಿದೆ. ಸಾವಿನ ಸಂಖ್ಯೆ 4021ಕ್ಕೆ ಏರಿಕೆಯಾಗಿದೆ. ಇವರಲ್ಲಿ 57720 ಮಂದಿ ಗುಣಮುಖರಾಗಿದ್ದು, ಆಸ್ಪತ್ರೆಗಲ್ಲಿ ಪ್ರತ್ಯೇಕವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಾರಾಷ್ಟ್ರದ ಬಳಿಕ ತಮಿಳುನಾಡು ನಂತರ ದೆಹಲಿ, ಗುಜರಾತ್, ಪಶ್ಚಿಮ ಬಂಗಾಳ, ಮತ್ತು ರಾಜಸ್ಥಾನ ಕ್ರಮವಾಗಿ ಸ್ಥಾನ ಪಡೆದುಕೊಂಡಿವೆ.

ಮುಂದಿನ ದಿನಗಳಲ್ಲಿ ಈ ವೈರಸ್​ ಸೋಂಕಿತರ ಸಂಖ್ಯೆ ಮಿತಿ ಮೀರುವ ಸಾಧ್ಯತೆ ಇದೆ. ಸೋಂಕಿತರ ಸಂಖ್ಯೆಯಲ್ಲಿ ಭಾರತ 10ನೇ ಸ್ಥಾನದಲ್ಲಿದ್ದು, ಆಕ್ಟೀವ್ ಕೇಸ್ ಗಳಲ್ಲಿ 5ನೇ ಸ್ಥಾನ ಪಡೆದುಕೊಂಡಿದೆ. 16 ಲಕ್ಷ ಸೋಂಕಿತರನ್ನು ಹೊಂದುವ ಮೂಲಕ ಅಮೆರಿಕ ಮೊದಲ ಸ್ಥಾನದಲ್ಲಿ ಇದ್ದರೆ, 3.63 ಲಕ್ಷ ಸೋಂಕಿತರಿರುವ ಬ್ರೇಜಿಲ್​ ಎರಡನೇ ಹಾಗೂ 3.44 ಲಕ್ಷ ಸೋಂಕಿತರಿರುವ ರಷ್ಯಾ ಮೂರನೇ ಸ್ಥಾನದಲ್ಲಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights