ಕ್ರಿಕೆಟ್ ಅಭಿಮಾನಿಗಳಿಗೆ ಗುಡ್‌ ನ್ಯೂಸ್; ಭಾರತದಲ್ಲೇ ನಡೆಯಲಿದೆ ಐಸಿಸಿ ಟಿ20 ವಿಶ್ವಕಪ್!

ಕ್ರಿಕೆಟ್ ಅಭಿಮಾನಿಗಳಿಗೆ ಮೇಲಿಂದ ಮೇಲೆ ಗುಡ್‌ ನ್ಯೂಸ್ ಸಿಗುತ್ತಲೇ ಇದೆ. ಐಪಿಎಲ್‌ ಆರಂಭವಾಗೋದು ಒಂದೆಡೆಯಾದ್ರೆ, ಮತ್ತೊಂದೆಡೆ ಟಿ20 ವಿಶ್ವಕಪ್‌ ಸಂಬಂಧ ಪಟ್ಟಂತೆ ಖುಷಿ ವಿಚಾರವೊಂದು ಸಿಕ್ಕಿದೆ. ಕೊರೊನಾ ನಡುವೆಯೇ ಕ್ರಿಕೆಟ್ ಆಟ ತನ್ನ ಗತಿ ಕಂಡುಕೊಳ್ಳುತ್ತಿದೆ. ಮುಂದುಡಲ್ಪಟ್ಟ 2021ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಆತಿಥ್ಯವನ್ನ ಭಾರತವೇ ವಹಿಸಿಕೊಳ್ಳಲಿದೆ. ಈ ಬಾರಿಯ ಟೂರ್ನಿಯ ಆತಿಥ್ಯ ವಹಿಸಬೇಕಾಗಿದ್ದ ಆಸ್ಟ್ರೇಲಿಯಾ  2022ರ ಟಿ20 ವಿಶ್ವಕಪ್‌ ಟೂರ್ನಿಯನ್ನು  ಆತಿಥ್ಯ ವಹಿಸಲಿದೆ.

ಈ ವರ್ಷ ಅಕ್ಟೋಬರ್‌-ನವೆಂಬರ್‌ನಲ್ಲಿ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿ ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆಯಬೇಕಾಗಿತ್ತು. ಆದರೆ, ಕೋವಿಡ್​ 19 ವಿಶ್ವವ್ಯಾಪಿ ಆವರಿಸಿರುವುದರಿಂದ, ಟೂರ್ನಿಯನ್ನು 2022ಕ್ಕೆ ಮುಂದೂಡಲಾಗಿದೆ. 2023ರಲ್ಲಿ ಭಾರತ ಏಕದಿನ ವಿಶ್ವಕಪ್‌ ಟೂರ್ನಿಗೆ ಆತಿಥ್ಯ ವಹಿಸುತ್ತಿದೆ. ಈ ಕಾರಣದಿಂದ 2022ರ ಆವೃತ್ತಿಯಲ್ಲಿ ಟಿ20 ವಿಶ್ವಕಪ್‌ ಆತಿಥ್ಯವನ್ನು ಆಸ್ಟ್ರೇಲಿಯಾಗೆ ನೀಡಲಾಗಿದೆ. ಆ ಮೂಲಕ ಭಾರತಕ್ಕೆ ಐಸಿಸಿ ಟೂರ್ನಿಗಳನ್ನು ಆಯೋಜಿಸಲು ಒಂದು ವರ್ಷ ಕಾಲವಕಾಶ ದೊರೆತಿದೆ.

2021ರ ಟಿ20 ವಿಶ್ವಕಪ್‌ ಏಳನೇ ಆವೃತ್ತಿಯಾಗಿದ್ದು, 2016ರ ಬಳಿಕ ಮೊದಲ ಚುಟುಕು ವಿಶ್ವಕಪ್‌ ಟೂರ್ನಿ ಆಗಲಿದೆ. ಕೊನೆಯ ಟಿ20 ವಿಶ್ವಕಪ್‌ ಟೂರ್ನಿಗೂ ಭಾರತವೇ ಆತಿಥ್ಯ ವಹಿಸಿತ್ತು. ಫೈನಲ್‌ ಹಣಾಹಣಿಯಲ್ಲಿ ಇಂಗ್ಲೆಂಡ್‌ ತಂಡವನ್ನು ಸೋಲಿಸಿ ವೆಸ್ಟ್ ಇಂಡೀಸ್‌ ಪ್ರಶಸ್ತಿ ತನ್ನದಾಗಿಸಿಕೊಂಡಿತ್ತು. ಇತ್ತ ಐಪಿಎಲ್ ತಂಡಗಳು ಟೂರ್ನಿಗಾಗಿ ಅಂತಿಮ ಹಂತದ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದು, ಹಣಾಹಣಿಗೆ ರೆಡಿ ಯಾಗುತ್ತಿವೆ…

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights