ರಾಜ್ಯದ 10 ಸ್ಥಳೀಯ ಸಂಸ್ಥೆಗಳ ಚುನಾವಣೆ: ಕಾಂಗ್ರೆಸ್‌ಗೆ ಭರ್ಜರಿ ಜಯ; BJP ಗೆದ್ದಿದ್ದು ಒಂದು ಮಾತ್ರ!

ರಾಜ್ಯದಲ್ಲಿ 10 ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಈ ಪೈಕಿ 07 ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್‌ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 07 ಪಾಲಿಕೆ, ಪುರಸಭೆಗಳಲ್ಲಿ ಅಧಿಕಾರ ಹಿಡಿದಿದೆ. ಜೆಡಿಎಸ್‌ ಎರಡು ಪುರಸಭೆಗಳನ್ನು ಗೆದ್ದಿದ್ದರೆ, ಆಡಳಿತಾರೂಢ ಬಿಜೆಪಿ ಒಂದೇ ಒಂದು ಪಾಲಿಕೆಯಲ್ಲಿ ಮಾತ್ರ ಗೆದ್ದಿದ್ದು ಭಾರೀ ಮುಖಭಂಗ ಅನುಭವಿಸಿದೆ.

ಬಳ್ಳಾರಿ ಮಹಾನಗರ ಪಾಲಿಕೆ, ಬೀದರ್ – ಭದ್ರಾವತಿ- ರಾಮನಗರ ನಗರಸಭೆ, ಬೇಲೂರು ಪುರಸಭೆ ಮತ್ತು ಗುಡಿಬಂಡೆ – ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಪಕ್ಷವು ಭರ್ಜರಿ ಜಯಗಳಿಸಿದ್ದು, ಅಧಿಕಾರದ ಚುಕ್ಕಾಣಿ ಹಿಡಿದಿದೆ.

ಬಿಜೆಪಿ ಕೇವಲ ಮಡಿಕೇರಿ ನಗರಸಭೆಯನ್ನು ಮಾತ್ರ ಗೆದ್ದಿದೆ. ಆದರೆ, ಸಿಎಂ ಯಡಿಯೂರಪ್ಪ ಅವರ ತವರು ಮತ್ತು ಸಚಿವ ಈಶ್ವರಪ್ಪ ಅವರು ಪ್ರಭಾವ ಹೊಂದಿರುವ ಶಿವಮೊಗ್ಗದ ಎರಡೂ ಸ್ಥಳೀಯ ಸಂಸ್ಥೆ (ಭದ್ರವತಿ ಮತ್ತು ತೀರ್ಥಹಳ್ಳಿ)ಯಲ್ಲಿಯೂ ಬಿಜೆಪಿ ಸೋಲುಂಡಿದ್ದು, ಇದು ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಉಳಿದಂತೆ ಚನ್ನಪಟ್ಟಣ ನಗರಸಭೆ ಮತ್ತು ವಿಜಯಪುರ ಪುರಸಭೆಯಲ್ಲಿ ಜೆಡಿಎಸ್ ಅಧಿಕಾರ ಪಡೆದಿದೆ.

ಫಲಿತಾಂಶದ ಪೂರ್ಣ ವಿವರ ಹೀಗಿದೆ.

ಬಳ್ಳಾರಿ ಮಹಾನಗರ ಪಾಲಿಕೆ – ಕಾಂಗ್ರೆಸ್

ಒಟ್ಟು ಸ್ಥಾನಗಳು 39: ಕಾಂಗ್ರೆಸ್-21, ಬಿಜೆಪಿ-13, ಜೆಡಿಎಸ್-00, ಪಕ್ಷೇತರ-05

ಬೀದರ್ ನಗರಸಭೆ – ಕಾಂಗ್ರೆಸ್

ಒಟ್ಟು ಸ್ಥಾನಗಳು 35: ಕಾಂಗ್ರೆಸ್-15, ಬಿಜೆಪಿ-08, ಜೆಡಿಎಸ್-07 ಪಕ್ಷೇತರ-05

ರಾಮನಗರ ನಗರಸಭೆ – ಕಾಂಗ್ರೆಸ್

ಒಟ್ಟು ಸ್ಥಾನಗಳು 31: ಕಾಂಗ್ರೆಸ್-19, ಬಿಜೆಪಿ-00, ಜೆಡಿಎಸ್-11, ಪಕ್ಷೇತರ-01

ಭದ್ರಾವತಿ ನಗರಸಭೆ – ಕಾಂಗ್ರೆಸ್

ಒಟ್ಟು ಸ್ಥಾನಗಳು 35: ಕಾಂಗ್ರೆಸ್-18, ಬಿಜೆಪಿ-04, ಜೆಡಿಎಸ್-11, ಪಕ್ಷೇತರ-01

ಚನ್ನಪಟ್ಟಣ ನಗರಸಭೆ – ಜೆಡಿಎಸ್

ಒಟ್ಟು ಸ್ಥಾನಗಳು 31: ಕಾಂಗ್ರೆಸ್-07, ಬಿಜೆಪಿ-07, ಜೆಡಿಎಸ್-16, ಪಕ್ಷೇತರ-01

ಮಡಿಕೇರಿ ನಗರಸಭೆ – ಬಿಜೆಪಿ

ಒಟ್ಟು ಸ್ಥಾನಗಳು 23: ಕಾಂಗ್ರೆಸ್-01, ಬಿಜೆಪಿ-16, ಜೆಡಿಎಸ್-01, ಎಸ್‌ಡಿಪಿಐ-05 ಪಕ್ಷೇತರ-00

ಬೇಲೂರು ಪುರಸಭೆ – ಕಾಂಗ್ರೆಸ್

ಒಟ್ಟು ಸ್ಥಾನಗಳು 23: ಕಾಂಗ್ರೆಸ್-17, ಬಿಜೆಪಿ-01, ಜೆಡಿಎಸ್-05, ಪಕ್ಷೇತರ-00

ವಿಜಯಪುರ ಪುರಸಭೆ – ಜೆಡಿಎಸ್

ಒಟ್ಟು ಸ್ಥಾನಗಳು 23: ಕಾಂಗ್ರೆಸ್-06, ಬಿಜೆಪಿ-01, ಜೆಡಿಎಸ್-14, ಪಕ್ಷೇತರ-02

ಗುಡಿಬಂಡೆ ಪಟ್ಟಣ ಪಂಚಾಯಿತಿ – ಕಾಂಗ್ರೆಸ್

ಒಟ್ಟು ಸ್ಥಾನಗಳು 11: ಕಾಂಗ್ರೆಸ್-06, ಬಿಜೆಪಿ-00, ಜೆಡಿಎಸ್-02, ಪಕ್ಷೇತರ-03

ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ – ಕಾಂಗ್ರೆಸ್

ಒಟ್ಟು ಸ್ಥಾನಗಳು 15: ಕಾಂಗ್ರೆಸ್-09, ಬಿಜೆಪಿ-06, ಜೆಡಿಎಸ್-00, ಪಕ್ಷೇತರ-00

 

ಒಟ್ಟು 266 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಪಕ್ಷವು 119 ಸ್ಥಾನಗಳಲ್ಲಿ ಜಯಗಳಿಸಿದ್ದು ಒಟ್ಟು 44.73% ಮತಗಳನ್ನು ಪಡೆದಿದೆ. ಜೆಡಿಎಸ್ 67 ಸ್ಥಾನಗಳಲ್ಲಿ ಜಯಿಸಿದ್ದು, 25.18% ಮತಗಳನ್ನು ಪಡೆದಿದೆ. ಹಾಗೆಯೇ ಬಿಜೆಪಿ 56 ಸ್ಥಾನಗಳಲ್ಲಿ ಜಯಗಳಿಸಿದ್ದು, 21.05% ರಷ್ಟು ಮತಗಳನ್ನು ಪಡೆದಿದೆ.

ಇದನ್ನೂ ಓದಿ: ಸಮೀಕ್ಷೆ: ತಮಿಳಲ್ಲಿ ಸ್ಟ್ಯಾಲಿನ್; ಕೇರಳದಲ್ಲಿ ವಿಜಯನ್‌ಗೆ ಅಧಿಕಾರ; ದಕ್ಷಿಣ ರಾಜ್ಯಗಳಲ್ಲಿ BJPಗೆ ಮುಖಭಂಗ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights