ರೋಸ್‌ ವ್ಯಾಲಿ ಹಗರಣ: 304 ಕೋಟಿ ರೂ ಮೌಲ್ಯದ ಆಸ್ತಿ ಇಡಿ ವಶಕ್ಕೆ!

ರೋಸ್‌ ವ್ಯಾಲಿ ಪೊಂಜಿ ಕಂಪನಿಯ ಬಹುಕೋಟಿ  ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಂಪನಿ ಸಮೂಕ್ಕೆ ಸೇರಿದ 304 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡಿರುವುದಾಗಿ ಶುಕ್ತವಾರ ತಿಳಿಸಿದೆ.

ಪಶ್ಚಿಮ ಬಂಗಾಳ, ತ್ರಿಪುರಾ ಮತ್ತು ಒಡಿಶಾದಲ್ಲಿರುವ ರೋಸ್‌ವ್ಯಾಲಿ ಕಂಪನಿಗಳ ಸಮೂಹಕ್ಕೆ ಸೇರಿದ ಆಸ್ತಿಯಲ್ಲಿ ‘ಅಕ್ರಮ ಹಣ ವರ್ಗಾವಣೆ ತಡೆ (ಪಿಎಂಎಲ್‌ಎ) ಕಾಯ್ದೆಯಡಿ ವಶಪಡಿಸಿಕೊಳ್ಳಲಾಗಿದೆ’ ಎಂದು ಕೇಂದ್ರೀಯ ತನಿಖಾ ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ.

ವಶಪಡಿಸಿಕೊಂಡ ಆಸ್ತಿಯ ಪೈಕಿ 47 ಕೋಟಿ ರೂ ಮೌಲ್ಯದ 412 ಚರ ಆಸ್ತಿಗಳು ಮತ್ತು 257 ಕೋಟಿ ರೂ ಮೊತ್ತದ 426 ಸ್ಥಿರಾಸ್ತಿಗಳು ಇವೆ ಎಂದು ತಿಳಿಸಿದೆ.

ಹಲವು ನಕಲಿ ಮತ್ತು ಕಲ್ಪಿತ ಯೋಜನೆಗಳಿಗಾಗಿ ಮೋಸದಿಂದ ಸಾರ್ವಜನಿಕರಿಂದ ಅಪಾರ ಪ್ರಮಾಣದ ಹಣ ಸಂಗ್ರಹಿಸಿ, ಅವರಿಗೆ ಮರು ಪಾವತಿ ಮಾಡದಿರುವ’ ಆರೋಪವನ್ನು ರೋಸ್ ವ್ಯಾಲಿ ಕಂಪನಿಗಳ ಸಮೂಹ ಎದುರಿಸುತ್ತಿದೆ.

Read Also: ಸಮೀಕ್ಷೆ: ತಮಿಳಲ್ಲಿ ಸ್ಟ್ಯಾಲಿನ್; ಕೇರಳದಲ್ಲಿ ವಿಜಯನ್‌ಗೆ ಅಧಿಕಾರ; ದಕ್ಷಿಣ ರಾಜ್ಯಗಳಲ್ಲಿ BJPಗೆ ಮುಖಭಂಗ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights