ವಿವಾದಾತ್ಮಕ ಪೋಸ್ಟ್ ಹಾಕಿದ ಕಂಗನಾ ರನೌತ್ ಟ್ವಿಟ್ಟರ್ ಖಾತೆ ಅಮಾನತು!

ವಿವಾದಾತ್ಮಕ ಪೋಸ್ಟ್ ಮಾಡಿದ್ದರಿಂದ ಕಂಗನಾ ರನೌತ್ ಅವರನ್ನು ಟ್ವಿಟ್ಟರ್ ನಿಂದ ಶಾಶ್ವತವಾಗಿ ತೆಗೆದುಹಾಕಲಾಗಿದೆ.

ಬಂಗಾಳದಲ್ಲಿ ಚುನಾವಣಾ ನಂತರದ ಫಲಿತಾಂಶಕ್ಕೆ ಸಂಬಂಧಿಸಿದ ವಿವಾದಾತ್ಮಕ ಟ್ವೀಟ್ ಮಾಡಿದ ನಟಿ ಕಂಗನಾ ರನೌತ್ ಅವರ ಟ್ವಿಟ್ಟರ್ ಖಾತೆಯನ್ನು ಶಾಶ್ವತವಾಗಿ ಅಮಾನತುಗೊಳಿಸಲಾಗಿದೆ. “ದ್ವೇಷದ ನಡವಳಿಕೆ ಮತ್ತು ನಿಂದನಾತ್ಮಕ ನಡವಳಿಕೆ” ಕುರಿತು ಟ್ವಿಟ್ಟರ್ ನೀತಿಯನ್ನು ಖಾತೆ ಪದೇ ಪದೇ ಉಲ್ಲಂಘಿಸಿದೆ ಎಂದು ಸಾಮಾಜಿಕ ಮಾಧ್ಯಮ ಸೈಟ್ ಇಂದು ತಿಳಿಸಿದೆ.

34 ವರ್ಷದ ನಟಿ ಇತ್ತೀಚೆಗೆ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷ ಗೆದ್ದ ಬಳಿಕ ಬಂಗಾಳದಲ್ಲಿ ಹಿಂಸಾಚಾರ ಜಾಸ್ತಿ ಆಗಿದೆ. ಅಧ್ಯಕ್ಷೀಯ ಆಡಳಿತ ತರಬೇಕು ಎಂದು ಒತ್ತಾಯಿಸಿದ್ದರು. ನೂರಾರು ಕೊಲೆಗಳು ನಡೆಯುತ್ತಿವೆ ಎಂದು ಟ್ವೀಟ್ ಮಾಡಿದ್ದರು. ಅವರ ಖಾತೆಯಲ್ಲಿ ದ್ವೇಷಪೂರಿತ ನಡುವಳಿಕೆ ಮತ್ತು ನಿಂದನಾತ್ಮಕ ಅಂಶಗಳು ಕಂಡು ಬಂದಿದ್ದು, ಪದೇ ಪದೇ ಟ್ವಿಟರ್​ ನೀತಿಯನ್ನು ಉಲ್ಲಂಘಿಸಿದ್ದಾರೆ ಎಂದು ಟ್ವೀಟರ್​ ತಿಳಿಸಿದೆ.

ಕಂಗನಾ ರನೌತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಅತಿರೇಕದ, ಫಿಲ್ಟರ್ ಇಲ್ಲದ ಪೋಸ್ಟ್‌ಗಳಿಗೆ ಕುಖ್ಯಾತರಾಗಿದ್ದಾರೆ, ಅವುಗಳಲ್ಲಿ ಹಲವು ಪ್ರಚೋದನಕಾರಿ ಕರೆಗಳಾಗಿವೆ.

ಮಾತ್ರವಲ್ಲದೇ ಬಾಲಿವುಡ್ ನಟ ಸೋನು ಸೂದ್ ಕೊರೊನಾ ಸಂತ್ರಸ್ತರಿಗೆ ಸಹಾಯ ಮಾಡಿ ದೇವರು ಎನಿಸಿಕೊಂಡಿದ್ದರು. ಆದರೆ ಸೋನು ಸೂದ್ ಅವರು ಹಣಕ್ಕಾಗಿ ಸಂತ್ರಸ್ತರಿಗೆ ಸಹಾಯ ಮಾಡುತ್ತಿದ್ದಾರೆನ್ನುವ ಟೀಕಿಸಿದ ಪೋಸ್ಟ್ ವೊಂದನ್ನು ಲೈಕ್ ಮಾಡುವ ಮೂಲಕ ಕಂಗನಾ ಮತ್ತೆ ವಿವಾದಕ್ಕೆ ಸಿಲುಕ್ಕಿದ್ದಾಳೆ.

ಟ್ವೀಟರ್​ ಖಾತೆ ಅಮಾನತು ಹಾಕಿರುವ ಹಿನ್ನಲೆ ಇನ್ಸ್ಟಾಗ್ರಾಂ ಮೂಲಕ ನೋವು ಹೊರ ಹಾಕಿದ ನಟಿ ಇದು ಪ್ರಜಾಪ್ರಭುತ್ವದ ಕೊಲೆ ಎಂದಿದ್ದಾರೆ. ಕಳೆದ ವರ್ಷ, ಕಂಗನಾ ರನೌತ್ ಅವರ ಸಹೋದರಿ ರಂಗೋಲಿ ಚಾಂಡೆಲ್ ಅವರು ಕೋವಿಡ್ ಹರಡುವಿಕೆಗೆ ತಬ್ಲಿಘಿ ಜಮಾಅತ್ ಅನ್ನು ದೂಷಿಸುವ ಟ್ವೀಟ್ ಮೂಲಕ ಕೋಪವನ್ನು ಪ್ರಚೋದಿಸಿದ್ದರು.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights