ಡಿಜೆ ಹಳ್ಳಿ ಪ್ರಕರಣ: ಕೊತ್ತಂಬರಿ ತರುವುದು ಅಪರಾಧವೇ? ನೆಟ್ಟಿಗರದ್ದೇಕೆ ಇಷ್ಟೊಂದು ಅಪಹಾಸ್ಯ!

ಡಿಜೆ ಹಳ್ಳಿಯಲ್ಲಿ ನಡೆದ ಗಲಬೆಯಿಂದಾಗಿ ಹಲವರನ್ನು ಪೊಲೀಸರು ಬಂಧಿಸಿದ್ದಾರೆ. ಅವರಲ್ಲಿ ಡಿಜೆ ಹಳ್ಳಿಯ ತರಕಾರಿ ಸರಬರಾಜು ದಾರನೂ ಒಬ್ಬ. ನಡುರಾತ್ರಿಯಲ್ಲಿ ಮಾರ್ಕೆಟ್‌ಗೆ ಹೋಗಿ ಬರುತ್ತಿದ್ದ ಆತನೂ ಗಲಬೆಯಲ್ಲಿ ಭಾಗಿಯಾಗಿದ್ದ ಎಂದು ಆತನನ್ನು ಪೊಲೀಸರು ಬಂದಿಸಿದ್ದಾರೆ.

ಪ್ರಕರಣದ ನಂತರ ವರದಿಗಾಗಿ ಡಿಜೆ ಹಳ್ಳಿಗೆ ತೆರಳಿದ್ದ ಕನ್ನಡ ಖಾಸಗಿ ಸುದ್ದಿಯಾಹಿನಿಯ ವರದಿಗಾರರೊಬ್ಬರು ಬಂಧಿತನಾಗಿರುವ ಆತನ ತಂಗಿಯನ್ನು ಮಾತನಾಡಿಸಿದ್ದು, ಆಕೆ ನಮ್ಮಣ್ಣ ರಾತ್ರಿ ಒಂದು ಗಂಟೆಯಲ್ಲಿ ಕೊತ್ತಂಬರಿ ಸೊಪ್ಪು ತರಲು ತೆರಳಿದ್ದರು. ಆ ವೇಳೆಗೆ ಇಲ್ಲಿ ಘಟನೆ ನಡೆದಿದ್ದು, ವಾಪಸ್‌ ಬರುತ್ತಿದ್ದಾಗ ಆತನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಆ ಮುಸ್ಲೀಂ ಮಹಿಳೆ ಹೇಳಿದ್ದಾರೆ.

ಆಕೆಯ ಹೇಳಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಲವರು ಟ್ರೋಲ್‌ ಮಾಡಿ ಅಪಹಾಸ್ಯ ಮಾಡುತ್ತಿದ್ದು, ತಮ್ಮ ಅಮಾನವೀಯ ಮನಸ್ಥಿತಿಯನ್ನು ಸೋಷಿಯಲ್‌ ಮೀಡಿಯಾದಲ್ಲಿ ಹೊರಹಾಕುತ್ತಿದ್ದಾರೆ.

ಬಂಧಿತನಾಗಿರುವ ಆತ ಮೂಲತಃ ತರಕಾರಿ ಸರಬರಾಜುದಾರ. ಆತ ತರಕಾರಿ ವ್ಯಾಪಾರಿ ಎಂಬುದನ್ನು ಆತ ಮನೆಗೆ ಬಾರದೆ ಕಾಣೆಯಾಗಿದ್ದಾನೆಂದು ಆತನ ಮನೆಯವರು ಪೊಲೀಸರಿಗೆ ನೀಡಿರುವ ನಾಪತ್ತೆ ದೂರಿನಲ್ಲಿಯೂ ಉಲ್ಲೇಖಿಸಲಾಗಿದೆ.

ಬೆಂಗಳೂರಿನಂತಹ ದೊಡ್ಡ ಪಟ್ಟಣಗಳಿಗೆ ಹೊರನ ಜಿಲ್ಲೆಗಳಿಂದ ತರಕಾರಿ ತುಂಬಿದ ಲಾರಿಗಳು ಬರುವುದೇ ರಾತ್ರಿ 11 ಗಂಟೆಯ ನಂತರ, ಆ ವೇಳೆಗೆ ತರಕಾರಿ ಲಾರಿಗಳು ಬೆಂಗಳೂರು ತಲುಪಿದರೆ ಮಾತ್ರವೇ ಬೆಳಗ್ಗೆ ವೇಳೆಗೆ ಬೆಂಗಳೂರಿಗರಿಗೆ ತಮ್ಮ ನಿವಾಸ ಬಳಿ ತರಕಾರಿ ದೊರೆಯಲು ಸಾಧ್ಯ.

ಹಾಲು ತರಕಾರಿಗಳೆಲ್ಲವೂ ರಾತ್ರಿಯ ವೇಳೆಯಲ್ಲೇ ಹಾಪ್‌ಕಾಮ್ಸ್, ತರಕಾರಿ ಮಳಿಗೆ, ಅಂಗಡಿಗಳಿಗೆ ಸರಬರಾಜಾಗುತ್ತವೆ. ಹಾಗಾಗಿಯೇ ಬೆಳ್ಳಂಬೆಳ್ಳಗೆ ಫ್ರೆಶ್‌ ತರಕಾರಿಗಳು ಬೆಂಗಳೂರಿಗರಿಗೆ ದೊರೆಯಲು ಸಾಧ್ಯ.

ಹಾಗಾಗಿ, ಡಿಜೆ ಹಳ್ಳಿಯ ಮುಸ್ಲೀಂ ಯುವಕ ತರಕಾರಿಗಳನ್ನು ಸರಬರಾಜು ಮಾಡುವುದಕ್ಕಾಗಿ ಮಾಕೆರ್ಟ್‌ಗೆ ಹೋಗಿದ್ದಾನೆ. ಆ ಸಂದರ್ಭದಲ್ಲಿ ಆತನ ಬಂಧಬವಾಗಿದೆ. ಅದನ್ನೇ ಆತನ ತಂಗಿ ಮಾಧ್ಯಮಕ್ಕೆ ಹೇಳಿದ್ದಾಳೆ. ಆಕೆ ಹೇಳಿರುವುದು ಸತ್ಯವೇ ಆಗಿದ್ದರೂ ದುಡಿಮೆ ಎಂದರೇನು ಎಂಬುದನ್ನೇ ಅರಿಯದೆ ಮೂರ್ಖರು ಆಕೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್‌ ಮಾಡಿದ್ದಾರೆ.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

 


ಇದನ್ನೂ ಓದಿ: ಡಿಜಿ ಹಳ್ಳಿ ದೇವಾಲಯ ರಕ್ಷಸಿದ ಮುಸ್ಲೀಂ ಯುವಕರು: ಯಾರು ಅವರು? ಅವರು ಹೇಳಿದ್ದೇನು?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights