ಬೆಂಗಳೂರಿನ ಅಭಿವೃದ್ಧಿಗಾಗಿ ಚುನಾವಣಾ ತಯಾರಿ : ಆಮ್ ಆದ್ಮಿ ವಾರ್ಡ್ ಅಧ್ಯಕ್ಷರುಗಳ ನೇಮಕ

ದೇಶದ ರಾಜಧಾನಿ ದೆಹಲಿಯನ್ನು ಮಾದರಿ ನಗರವನ್ನಾಗಿ ಕಟ್ಟುವಲ್ಲಿ ದೆಹಲಿಯ ಎಎಪಿ ಸರ್ಕಾರ ಯಶಸ್ವಿಯಾಗಿದೆ. ಅದೇ ಹಾದಿಯಲ್ಲಿ ಬೆಂಗಳೂರು ನಗರವನ್ನು ವಿಶ್ವದರ್ಜೆಯ ನಗರವನ್ನಾಗಿ ಕಟ್ಟಲು ಮುಂದಾಗಿರುವ ಕರ್ನಾಟಕದ ಆಮ್ ಆದ್ಮಿ ಪಕ್ಷವು ಜನ ಮನ್ನಣೆ ಪಡೆದು ಬಿಬಿಎಂಪಿಯಲ್ಲಿ ಚುಕ್ಕಾಣಿ ಹಿಡಿಯಲು ತಯಾರಿ ನಡೆಸುತ್ತಿದ್ದು, ಈಗಾಗಲೇ ಬೆಂಗಳೂರಿನ ಎಲ್ಲಾ ಕ್ಷೇತ್ರಗಳಲ್ಲೂ ಜನಸಂಪರ್ಕ ಪಾದಯಾತ್ರೆ, ವಾರ್ಡ್ ಸಭೆಗಳು, ಮನೆ-ಮನೆ ಪ್ರಚಾರ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ. ಚುನಾವಣಾ ತಯಾರಿಯನ್ನು ಮತ್ತಷ್ಟು ಚುರುಕುಗೊಳಿಸಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಪಕ್ಷದ ಕ್ಷೇತ್ರ ಅಧ್ಯಕ್ಷರನ್ನು ನೇಮಿಸಲಾಗುತ್ತಿದೆ.

ದೆಹಲಿ ಸರ್ಕಾರ ಅಭಿವೃದ್ಧಿ ಮಾದರಿಯನ್ನು ಬೆಂಗಳೂರಿಗೂ ತರಲು ಹಲವಾರು ಸ್ಥಳೀಯ ಮುಖಂಡರು ಮುಂದೆ ಬಂದಿದ್ದಾರೆ. ಜನರ ಸಮಸ್ಯೆಗಳನ್ನು ಆಲಿಸಲು, ಸ್ಥಳೀಯ ಕುಂದುಕೊರತೆಗಳ ಬಗ್ಗೆ ತಿಳಿಯಲು, ಜನಸಂಪರ್ಕ, ವಾರ್ಡ್ ಸಭೆಗಳು ಮಾಡಲು ಮತ್ತು ವಿಧಾನಸಭಾ ಕ್ಷೇತ್ರವಾರು ಯೋಜನೆಗಳನ್ನು ರೂಪಿಸಲು ಜನಪರ ಚಿಂತನೆಯೊಂದಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಲು ಉತ್ಸುಕಾಗಿರುವವರನ್ನು ವಿಧಾನ ಸಭಾ ಕ್ಷೇತ್ರ ಮಟ್ಟದ ಅಧ್ಯಕ್ಷರನ್ನು ನೇಮಿಸಲಾಗುತ್ತಿದೆ.

ಈ ನಿಟ್ಟಿನಲ್ಲಿ, ಕ್ಷೇತ್ರವಾರು ಜವಾಬ್ದಾರಿ ಹೊತ್ತಿರುವ ಕ್ಷೇತ್ರಗಳ ಮುಖಂಡರನ್ನು ಕೆಳಕಂಡ ವಿಧಾನ ಸಭಾ ಕ್ಷೇತ್ರಗಳಿಗೆ ಪಕ್ಷದ ಅಧ್ಯಕ್ಷರನ್ನು ನೇಮಿಸಲಾಗಿದೆ.
ಸಿ.ವಿ.ರಾಮನ್ ನಗರ – ಆನಂದ್ ವಾಸುದೇವನ್,
ಬೊಮ್ಮನಹಳ್ಳಿ – ವಿಜಯ್ ಕುಮಾರ್,
ರಾಜಾಜಿನಗರ – ಗುರುಮೂರ್ತಿ,
ಸರ್ವಜ್ಞ ನಗರ – ಮೊಹಮ್ಮದ್ ಅಸದ್,
ಬಿಟಿಎಂ ಲೇಔಟ್ – ಫಿರೋಜ಼್ ಖಾನ್,
ವಿಜಯನಗರ – ಚೆನ್ನಪ್ಪಗೌಡ,
ಚಾಮರಾಜಪೇಟೆ – ಜಗದೀಶ್ ಚಂದ್ರ,
ಮಲ್ಲೇಶ್ವರ – ಸಿದ್ದಗಂಗಯ್ಯ. ಆರ್,
ಶಾಂತಿನಗರ – ಅಬ್ದುಲ್ ಖಾದರ್,
ಗೋವಿಂದರಾಜ ನಗರ – ವಿಕ್ರಮ್
ಅಧ್ಯಕ್ಷರ ಜವಾಬ್ದಾರಿ ಹೊತ್ತಿರುವ ಇವರು ಆಯಾ ಕ್ಷೇತ್ರಗಳಲ್ಲಿ ಪಕ್ಷ ಕಟ್ಟುವ ಕೆಲಸ ಮತ್ತು ಜನರ ಸಮಸ್ಯೆಯನ್ನು ಅರಿಯಲು ಸಕ್ರಿಯರಾಗಿ ಕಾರ್ಯನಿರ್ವಹಿಸುತ್ತಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights