ಭಾರೀ ಮಳೆಗೆ ರಸ್ತೆ ಕುಸಿದು ಭೂಮಿಯಲ್ಲಿ ಸಿಲುಕಿದ ಸರ್ಕಾರಿ ಬಸ್…!
ಭಾರೀ ಮಳೆಯಿಂದಾಗಿ ಸರ್ಕಾರಿ ಬಸ್ ವೊಂದು ರಸ್ತೆ ಕುಸಿದ ಭೂಮಿಯಲ್ಲಿ ಸಿಲುಕಿದ ಘಟನೆ ಬೆಳಗಾವಿಯ ಹೊಸವಂಟಮೂರಿಯಲ್ಲಿ ನಡೆದಿದೆ.
ಹೌದು.. ಬೆಳಗಾವಿಯಿಂದ ಪನಗುತ್ತಿ ಗ್ರಾಮಕ್ಕೆ ತೆರಳುತ್ತಿದ್ದ ಸರ್ಕಾರಿ ಬಸ್ ಹೊಸ ವಂಟಮೂರಿ ಬಳಿ ಏಕಾಏಕಿ ಭೂ ಕುಸಿತ ಉಂಟಾಗಿ ಭಾಗಶಃ ಬಸ್ ನ ಮುಂಭಾಗ ಒಳಗೆ ಇಳಿದಿದೆ. ಕೂಡಲೇ ಪ್ರಯಾಣಿಕರನ್ನು ಕೆಳಗಿಳಿಸಲಾಗಿದೆ.
ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾಹತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.