ರಾಜ್ಯದಲ್ಲಿ ಹೊಸದಾಗಿ 36 ಕೊರೊನಾ ಪಾಸಿಟಿವ್ : 789ಕ್ಕೇರಿದ ಸೋಂಕಿತರ ಸಂಖ್ಯೆ!

ರಾಜ್ಯದಲ್ಲಿಂದು ಹೊಸದಾಗಿ 36 ಕೊರೊನಾ ಪ್ರಕರಣಗಳು ದಾಖಲಾಗಿದ್ದು ಬೆಂಗಳೂರಿನಲ್ಲಿ 12 ಕೊರೊನಾ ಪಾಸಿಟಿವ್ ಬಂದಿದೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 789ಕ್ಕೇರಿಕೆಯಾಗಿದೆ.

ಹೌದು… ರಾಜ್ಯದಲ್ಲಿ ದಿನೇ ದಿನೇ ಕೊರೊನಾ ವೈರಸ್ ವೇಗವಾಗಿ ಹರಡುತ್ತಿದ್ದು, ನಿನ್ನೆ 45ಕ್ಕೂ ಹೆಚ್ಚು ಜನರಿಗೆ ಸೋಂಕು ಹರಡಿದ್ದು, ಇಂದು 36 ಜನರಿಗೆ ಸೋಂಕು ಹರಡಿರುವುದು ದೃಢಪಟ್ಟಿದೆ. ನಿನ್ನೆ ಸಂಜೆಯಿಂದ ಇಂದು ಬೆಳಿಗಿನ ವರದಿಯಲ್ಲಿ ಈ ಮಾಹಿತಿ ಲಭ್ಯವಾಗಿದೆ. ಈವರೆಗೆ ರಾಜ್ಯದಲ್ಲಿ 789 ಸೋಂಕಿತರ ಸಂಖ್ಯೆ ಇದ್ದು, ಇವರಲ್ಲಿ 30 ಜನ ಸಾವನ್ನಪ್ಪಿದ್ದಾರೆ. ಗುಣಮುಖರಾದವರ ಸಂಖ್ಯೆ 379 ಇದೆ.

ಇಂದು ದಾಖಲಾದ ಒಟ್ಟು 36 ಪ್ರಕರಣಗಳಲ್ಲಿ ಬೆಂಗಳೂರು 12, ಉತ್ತರ ಕನ್ನಡ ಜಿಲ್ಲೆಯ ಭಟ್ಕಳ 7ರಲ್ಲಿ ಇಬ್ಬರು ಮಕ್ಕಳು, ದಾವಣಗೆರೆ 6 ಜನ, ಬೀದರ್ 3, ಚಿತ್ರದುರ್ಗ 3, ವಿಜಯಪುರ 1, ತುಮಕೂರು 1, ದಕ್ಷಿಣ ಕನ್ನಡ 3 ಕೊರೊನಾ ಕೇಸ್ ದಾಖಲಾಗಿವೆ. ಇದರಿಂದ ಹಸಿರು ವಲಯಕ್ಕೆ ಸೇರಿದ್ದ ಚಿತ್ರದುರ್ಗ, ದಾವಣಗೆರೆಯಲ್ಲಿ ಆತಂಕ ಹೆಚ್ಚಾಗಿದೆ.  ಇದರಲ್ಲಿ ಒಂದೂವರೆ , ಎರಡು ವರ್ಷದ ಮಕ್ಕಳು ಸೇರಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights