ಕಂಗನಾ ರಣಾವತ್ ಕಚೇರಿ ನೆಲಸಮ; ಮಹಾರಾಷ್ಟ್ರ ಸರ್ಕಾರವನ್ನು ಬಾಬರ್ ಸೈನ್ಯ ಎಂದ ನಟಿ

ಮುಂಬೈ ನನಗೆ ಪಾಕ್‌ ಆಕ್ರಮಿತ ಕಾಶ್ಮೀರದಂತೆ ಕಾಣುತ್ತಿದೆ ಎಂದು ಹೇಳುವ ಮೂಲಕ ಮಹಾರಾಷ್ಟ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ನಟಿ ಕಂಗನಾ ರಣಾವತ್‌ ಅವರ ಮುಂಬೈನಲ್ಲಿರುವ ಕಚೇರಿಯನ್ನು ಇಂದು ಮುಂಬೈ ಮಹಾನಗರ ಪಾಲಿಕೆ ನೆಲಸಮ ಮಾಡುತ್ತಿದೆ.

ಹಿಮಾಚಲ ಪ್ರದೇಶದಿಂದ ಮುಂಬೈ ಕಂಗನಾ ಮರಳುತ್ತಿದ್ದು, ಈ ನಡುವೆ ಅವರ ಮುಂಬೈ ಕಚೇರಿಯನ್ನು ಜೆಸಿಬಿಗಳ ಮೂಲಕ ಬಿಎಂಸಿ ಒಡೆದುರುಳಿಸುತ್ತಿದೆ.

ಸೋಮವಾರವಷ್ಟೇ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ಬಾಂದ್ರಾದ ಪಾಲಿ ಹಿಲ್​ನಲ್ಲಿರುವ ಕಂಗನಾ ಅವರ ಕಚೇರಿಗೆ ಭೇಟಿ ನೀಡಿ, ಕಚೇರಿಯನ್ನು ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಸೀಲ್​ ಮಾಡಿದ್ದರು. ಅಲ್ಲದೆ, ಪರಿಶೀಲನೆ ಬಳಿಕ 14 ನಿಯಮ ಉಲ್ಲಂಘನೆಗಳ ಪಟ್ಟಿ ಸಹ ಮಾಡಿದ್ದರು. ನೆಲಸಮ ಮಾಡುವುದಾಗಿಯೂ ನೋಟಿಸ್​ ಸಹ ಹೊರಡಿಸಿದ್ದರು. ಅದರಂತೆ ಅವರ ಕಚೇರಿಯನ್ನು ನೆಲಸಮ ಮಾಡಲಾಗುತ್ತಿದೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಕಂಗನಾ, ಮಹಾರಾಷ್ಟ್ರ ಸರ್ಕಾರ ಮತ್ತು ಅದರ ಗೂಂಡಾಗಳು ಮುಂಬೈನಲ್ಲಿರುವ ನನ್ನ ಕಚೇರಿಯನ್ನು ಅಕ್ರಮವಾಗಿ ನೆಲಸಮ ಮಾಡುತ್ತಿದ್ದಾರೆ. ‘ನನ್ನ ‘ಮಣಿಕರ್ಣಿಕಾ’ ಆಫೀಸ್ ಸ್ಥಾಪಿಸುವುದಕ್ಕೆ ನನ್ನ 15 ವರ್ಷಗಳ ಪರಿಶ್ರಮವಿದೆ. ನನ್ನದೇ ಸ್ವಂತದ್ದೊಂದು ಆಫೀಸ್​ ಮಾಡಿಕೊಳ್ಳಬೇಕೆಂಬ ಕನಸು ಬಹಳ ವರ್ಷಗಳಿಂದ ಇತ್ತು. ಆ ಕನಸನ್ನು ಅಧಿಕಾರಿಗಳು ನುಚ್ಚುನೂರು ಮಾಡುತ್ತಿರುದ್ದಾರೆ ಎಂದು ಕಿಡಿಕಾರಿದ್ದಾರೆ.

https://twitter.com/KanganaTeam/status/1303569152917946368?s=20


ಇದನ್ನೂ ಓದಿ: ‘ಕಂಗನಾ ರನೌತ್ ಮಹಾರಾಷ್ಟ್ರದ ಚಿತ್ರಣವನ್ನು ಕೆಡಿಸಲು ಪ್ರಯತ್ನಿಸಿದರು’ – ಸಂಜಯ್ ರೌತ್


ಇದನ್ನೂ ಓದಿ: “ನನ್ನ ಕಚೇರಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಂಡಿದ್ದಾರೆ” – ಕಂಗನಾ ಆರೋಪ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights