Fact Check: ಠಾಕೂರರಿಗೆ ರಕ್ತ ಬಿಸಿ ಇರುತ್ತದೆ ಹಾಗಾಗಿ ತಪ್ಪುಗಳು (ಅತ್ಯಾಚಾರ) ಆಗೋದು ಸಹಜ ಎಂದು ಯೋಗಿ ಆದಿತ್ಯನಾಥ್‌ ಹೇಳಿಲ್ಲ!

“ಠಾಕೂರರಿಗೆ ರಕ್ತ ಬಿಸಿ ಇರುತ್ತದೆ ಹಾಗಾಗಿ ತಪ್ಪುಗಳು (ಅತ್ಯಾಚಾರ) ಆಗೋದು ಸಹಜ” ( ‘ठाकुरों का खून गर्म होता है। ठाकुरों से गलतियां हो जाती है।’) ಎಂದು ಹತ್ರಾಸ್‌ ಅತ್ಯಾಚಾರ ಆರೋಪಿಗಳನ್ನು ಬೆಂಬಲಿಸಿ ಉತ್ತರ ಪ್ರದೇಶ ಸಿಎಂ ಯೋಗಿ ಆಧಿತ್ಯನಾಥ್‌ ಹೇಳಿಕೆ ನೀಡಿದ್ದಾರೆ ಎಂದು ‘ಆಜ್‌ ತಕ್‌’ ನ್ಯೂಸ್‌ ಚಾನೆಲ್‌ನ ವಿಡಿಯೋ ಫೂಟೇಜ್‌ ಒಂದರ ಸ್ಕ್ರೀನ್‌ಶಾಟ್‌ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.  ಪೋಸ್ಟ್‌ನ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಪೋಸ್ಟ್‌ನ ಆರ್ಕೈವ್ ಮಾಡಲಾದ ಆವೃತ್ತಿಯನ್ನು ಇಲ್ಲಿ ನೋಡಬಹುದು.

ಪ್ರತಿಪಾದನೆ: ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಹತ್ರಾಸ್ ಅತ್ಯಾಚಾರ ಆರೋಪಿಗಳು ಮತ್ತು ಠಾಕೂರ್ ಸಮುದಾಯವನ್ನು ಬೆಂಬಲಿಸಿ ಹೇಳಿಕೆ ನೀಡಿದ್ದಾರೆ.

ಸತ್ಯ: ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿರುವ ಪೋಸ್ಟ್‌, ‘02 ಅಕ್ಟೋಬರ್ 2020’ರಂದು‘ಆಜ್ ತಕ್’ಸುದ್ದಿ ಚಾನೆಲ್‌ನಲ್ಲಿ ಪ್ರಸಾರವಾದ ಮೂಲ ತುಣುಕಿನ ಮಾರ್ಫಡ್ ಆವೃತ್ತಿಯಾಗಿದೆ. ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಹತ್ರಾಸ್ ಅತ್ಯಾಚಾರ ಆರೋಪಿಗಳನ್ನು ಅಥವಾ ಠಾಕೂರ್ ಸಮುದಾಯವನ್ನು ಬೆಂಬಲಿಸುವ ಯಾವುದೇ ಹೇಳಿಕೆ ನೀಡಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಲಾಗಿರುವ ಪ್ರತಿಪಾದನೆ ತಪ್ಪಾಗಿದೆ.

ಈ ಆರೋಪಗಳಿಗೆ ಸಂಬಂಧಿಸಿದ ಮಾಹಿತಿಗಾಗಿ ಹುಡುಕುತ್ತಿರುವಾಗ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ‘ಆಜ್ ತಕ್’ ಸುದ್ದಿ ಚಾನೆಲ್ ಕ್ಲಿಪ್‌ನ ಮೂಲ ವಿಡಿಯೋವನ್ನು ಟ್ವಿಟರ್‌ನಲ್ಲಿ ‘ಆಜ್ ತಕ್’ ಸುದ್ದಿ ಚಾನೆಲ್ ಪೋಸ್ಟ್ ಮಾಡಿರುವುದು ಕಂಡುಬಂದಿದೆ. ಮೂಲ ವಿಡಿಯೋ ತುಣುಕಿನಲ್ಲಿ, ಹತ್ರಾಸ್ ಅತ್ಯಾಚಾರ ಆರೋಪಿ ಮತ್ತು ಠಾಕೂರ್ ಸಮುದಾಯದವರನ್ನು ಬೆಂಬಲಿಸಿ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರ ಯಾವುದೇ ಹೇಳಿಕೆ ಪ್ರಸಾರವಾಗಲಿಲ್ಲ. ಈ ವಿಡಿಯೋ ಕ್ಲಿಪ್‌ನ 0.56 ಸೆಕೆಂಡ್‌ನಲ್ಲಿರುವ ಖಾಲಿ ಕ್ಲಿಪ್‌ ಅನ್ನು ಸ್ಕ್ರೀನ್‌ ಶಾಟ್‌ ತೆಗೆದು ಖಾಲಿ ಜಾಗದಲ್ಲಿ “ಠಾಕೂರರ ರಕ್ತ ಬಿಸಿ ಇರುತ್ತದೆ ಹಾಗಾಗಿ ತಪ್ಪುಗಳು (ಅತ್ಯಾಚಾರ) ಆಗೋದು ಸಹಜ: ಯೋಗಿ” ಎಂದು ಬರೆಯಲಾಗಿದೆ.  (ಮೂಲ ಕ್ಲಿಪ್ ಅನ್ನು ನೋಡಬಹುದು). ಅಲ್ಲದೆ, ಪೋಸ್ಟ್‌ನಲ್ಲಿನ ಪಠ್ಯ ಮತ್ತು ಸ್ಕ್ರೀನ್‌ಶಾಟ್‌ನ ಹಿನ್ನೆಲೆ ‘ಆಜ್ ತಕ್’ ಸುದ್ದಿ ಚಾನೆಲ್ ಪ್ರಸಾರದ ಪಠ್ಯಕ್ಕಿಂತ ಭಿನ್ನವಾಗಿದೆ.

‘ಆಜ್ ತಕ್’ ಫ್ಯಾಕ್ಟ್-ಚೆಕಿಂಗ್ ಗ್ರೂಪ್ ಪ್ರಕಟಿಸಿದ ಫ್ಯಾಕ್ಟ್-ಚೆಕ್‌ ಲೇಖನದಲ್ಲಿ, ಠಾಕೂರ್ ಸಮುದಾಯವನ್ನು ಬೆಂಬಲಿಸುವ ಯೋಗಿ ಆದಿತ್ಯನಾಥ್ ಅವರ ಹೇಳಿಕೆಯ ಸ್ಕ್ರೀನ್‌ಶಾಟ್ ಪೋಸ್ಟ್‌, ‘ಆಜ್ ತಕ್’ ಸುದ್ದಿ ವಾಹಿನಿಯಲ್ಲಿ ’02 ಅಕ್ಟೋಬರ್ 2020 ರಂದು’ ಪ್ರಸಾರವಾದ ಮೂಲ ತುಣುಕಿನ ಮಾರ್ಫಡ್ ಆವೃತ್ತಿಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ‘ಆಜ್ ತಕ್’ ಸುದ್ದಿ ಚಾನೆಲ್ ಸ್ಕ್ರೀನ್‌ಶಾಟ್ ಅನ್ನು ಬಳಸಿಕೊಂಡು ಮಾರ್ಫಿಂಗ್ ಮಾಡಿ, ಠಾಕೂರ್ ಸಮುದಾಯವನ್ನು ಬೆಂಬಲಿಸುವ ಯೋಗಿ ಆದಿತ್ಯನಾಥ್ ಅವರ ಹೇಳಿಕೆ ಎಂದು ಸುಳ್ಳು ಮಾಹಿತಿ ಹಂಚಿಕೊಳ್ಳಲಾಗಿದೆ.

ಸೋಮಶೇಖರ್ ಚಲ್ಯ


ಇದನ್ನೂ ಓದಿ: Fact Check: ನನ್ನ ಕೆಲಸ ಹಸುಗಳನ್ನು ರಕ್ಷಿಸುವುದಷ್ಟೇ, ಮಹಿಳೆಯರನ್ನಲ್ಲ ಎಂದು ಯೋಗಿ ಆಧಿತ್ಯಾನಾಥ್‌ ಹೇಳಿದ್ದಾರೆಯೇ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights