Fact Check: ನನ್ನ ಕೆಲಸ ಹಸುಗಳನ್ನು ರಕ್ಷಿಸುವುದಷ್ಟೇ, ಮಹಿಳೆಯರನ್ನಲ್ಲ ಎಂದು ಯೋಗಿ ಆಧಿತ್ಯಾನಾಥ್‌ ಹೇಳಿದ್ದಾರೆಯೇ?

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆಧಿತ್ಯಾನಾಥ್‌ ಅವರು ನನ್ನ ಕೆಲಸ ಹಸುಗಳನ್ನು ರಕ್ಷಿಸುವುದಷ್ಟೇ, ಮಹಿಳೆಯರನ್ನಲ್ಲ ಎಂಬುದಾಗಿ ಹೇಳಿದ್ದಾರೆ ಎಂದು ವರದಿಯಾಗಿರುವ ಹಿಂದಿ ಪತ್ರಿಕೆಯ ತುಣುಕೊಂದು ಸಾಮಾಜಿಕ ಜಾಲತಾನದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಸಿಎಂ ಯೋಗಿ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ. ಪೋಸ್ಟ್‌ನ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಪೋಸ್ಟ್‌ನ ಆರ್ಕೈವ್‌ ಮಾಡಲಾದ ಆವೃತ್ತಿಯನ್ನು ಇಲ್ಲಿ ನೋಡಬಹುದು.

ಪ್ರತಿಪಾದನೆ: ನನ್ನ ಕೆಲಸ ಹಸುಗಳನ್ನು ರಕ್ಷಿಸುವುದಷ್ಟೇ, ಮಹಿಳೆಯರನ್ನು ರಕ್ಷಿಸುವುದಲ್ಲ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆಧಿತ್ಯಾನಾಥ್‌ ಹೇಳಿದ್ದಾರೆ.

ಸತ್ಯಾಂಶ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈ ರೀತಿಯಾದ ಹೇಳಿಕೆಯನ್ನು ನೀಡಿಲ್ಲ. Rhumortimes.com ಎಂಬ ವೆಬ್‌ಸೈಟ್ ವ್ಯಂಗ್ಯಭರಿತ ಲೇಖನಗಳನ್ನು ಪ್ರಕಟಿಸುವುದಲ್ಲಿ ಕುಖ್ಯಾತಿ ಪಡೆದಿದ್ದು, ಈ ರೀತಿಯ ಫೇಕ್‌ ಸುದ್ದಿಯನ್ನು ಪ್ರಕಟಿಸಿದೆ. ಈ ವೆಬ್‌ಸೈಟ್ ಹೊರತಾಗಿ ಇನ್ನೆಲ್ಲಿಯೂ ಈ ರೀತಿಯ ವರದಿ ಪ್ರಕಟವಾಗಿಲ್ಲ. ಹಾಗಾಗಿ ಹಂಚಿಕೊಳ್ಳಲಾಗುತ್ತಿರುವ ಸುದ್ದಿಯ ತುಣುಕು ಸುಳ್ಳಾಗಿದೆ.

ಪೋಸ್ಟ್‌ಗೆ ಸಂಬಂಧಿಸಿದಂತೆ ಹಿಂದಿ ಕೀ ವರ್ಡ್‌ಗಳ ಮೂಲಕ ಹುಡುಕಿದಾಗ ಏಪ್ರಿಲ್ 10, 2018ರಲ್ಲಿ Rhumortimes.com ವೆಬ್‌ಸೈಟ್‌ನಲ್ಲಿ ಪ್ರಕಟವಾದ ಯೋಗಿ ಆದಿತ್ಯನಾಥ್ ಕುರಿತ ಈ ಲೇಖನ ಪತ್ತೆಯಾಗಿದೆ. ಈ ವೆಬ್‌ಸೈಟ್ ಹೊರತಾಗಿ ಅಧಿಕೃತವಾದ, ನಂಬಲರ್ಹ ಹಾಗೂ ವಿಶ್ವಾಸಾರ್ಹವಾದ ಯಾವುದೇ ಸುದ್ದಿ ಸಂಸ್ಥೆಯ ವರದಿಗಳೂ ಪ್ರಕಟವಾಗಿಲ್ಲ. ಅಲ್ಲದೆ, 2018ರಿಂದಲೇ ಈ ಸುದ್ದಿಯ ಬಗ್ಗೆ ಕೆಲವು ಫ್ಯಾಕ್ಟ್‌ಚೆಕ್‌ ಸುದ್ದಿಗಳು ದೊರೆತಿವೆ. ಯೋಗಿಯವರು ನೀಡಿದ್ದಾರೆ ಎನ್ನಲಾದ ಈ ರೀತಿಯ ಹೇಳಿಕೆ ಸುಳ್ಳು ಎಂದು ಸಾಕ್ಷ್ಯ ಸಮೇತ ಟೈಮ್ಸ್‌ ಆಫ್‌ ಇಂಡಿಯಾ ಸಾಬೀತು ಮಾಡಿದೆ.

ಈ ವೆಬ್‌ಸೈಟ್‌ನ ‘ನಮ್ಮ ಬಗ್ಗೆ ತಿಳಿಯಿರಿ’ ವಿಭಾಗಕ್ಕೆ ಭೇಟಿ ಕೊಟ್ಟಾಗ ಈ ವೆಬ್‌ಸೈಟ್ ಕೇವಲ ವ್ಯಂಗ್ಯಭರಿತ, ವಿಡಂಬನಾತ್ಮಕ ಹಾಗೂ ಹಾಸ್ಯಮಯವಾಗಿ ಲೇಖನಗಳನ್ನು ಬರೆದು ಪ್ರಕಟಿಸುವ ವೇದಿಕೆ ಎಂದು ಬರೆದುಕೊಳ್ಳಲಾಗಿತ್ತು.

ಮಹಿಳೆಯರ ಸುರಕ್ಷತೆಗಿಂತಲೂ ಹಸುಗಳ ಸುರಕ್ಷತೆಗೆ ಯೋಗಿ ಸರ್ಕಾರ ಪ್ರಾಧಾನ್ಯತೆ ನೀಡುತ್ತಿದೆ ಎಂದು ಬಿಂಬಿಸುವ ಉದ್ದೇಶದೊಂದಿಗೆ ವಿಡಂಬನಾತ್ಮಕವಾಗಿ ಈ ಲೇಖನ ಬರೆಯಲಾಗಿದೆ ಎಂದು ಹೇಳಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ‘ನನ್ನ ಕೆಲಸ ಹಸುಗಳನ್ನು ರಕ್ಷಿಸೋದಷ್ಟೇ, ಯುವತಿರನ್ನು ಅಲ್ಲ’ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿಲ್ಲ. ಹಂಚಿಕೊಳ್ಳಲಾಗುತ್ತಿರುವ ಸುದ್ದಿ ಸುಳ್ಳು.


Read Also: ಮನಿಷಾಳ ಮೃತದೇಹವನ್ನು ರಾತ್ರೋರಾತ್ರಿ ಸುಟ್ಟಿದ್ದನ್ನೂ ಸಮರ್ಥಿಸಿಕೊಂಡ ಸರ್ಕಾರ: ಹೇಳಿದ್ದೇನು ಗೊತ್ತೇ?

Spread the love

Leave a Reply

Your email address will not be published. Required fields are marked *