ರಾಜ್ಯದಲ್ಲಿ 70 ಸಾವಿರಕ್ಕೂ ಅಧಿಕ ಆರೋಗ್ಯ ಕಾರ್ಯಕರ್ತರಿಗೆ ಕೊರೊನಾ ಲಸಿಕೆ!

ಕರ್ನಾಟಕದಲ್ಲಿ ಮೊದಲ ಕೆಲವು ದಿನಗಳಲ್ಲಿ 70ಸಾವಿರಕ್ಕೂ ಅಧಿಕ ಆರೋಗ್ಯ ಕಾರ್ತಕರ್ತರಿಗೆ ಕೋವಿಡ್ -19 ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಾಃಇತಿ ನೀಡಿದೆ.

ಕರ್ನಾಟಕದಾದ್ಯಂತ ಕನಿಷ್ಠ 70,773 ಆರೋಗ್ಯ ಕಾರ್ಯಕರ್ತರು ಮಂಗಳವಾರದ ವೇಳೆಗೆ ಕೋವಿಡ್ -19 ಲಸಿಕೆ ಪಡೆದಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ ಬಹಿರಂಗಪಡಿಸಿದ ಅಂಕಿ ಅಂಶಗಳು ತಿಳಿಸಿವೆ. ಜನವರಿ 19 ರಂದು 15,223 ಫಲಾನುಭವಿಗಳಿಗೆ ಚುಚ್ಚುಮದ್ದು ನೀಡಲಾಗಿದೆ.

ರಾಜ್ಯದಾದ್ಯಂತ 645 ಜನರು ಸೋಂಕಿಗೆ ಒಳಗಾಗಿದ್ದರೆ, 807 ಜನರು ಚೇತರಿಸಿಕೊಂಡಿದ್ದಾರೆ. ಜನವರಿ 19ಕ್ಕೆ 7865 ಪ್ರಕರಣಗಳು ಸಕ್ರಿಯವಾಗಿವೆ. ಮಾರ್ಚ್ 8 ರಿಂದ ರಾಜ್ಯದಲ್ಲಿ ಸುಮಾರು 9.33 ಲಕ್ಷಕ್ಕೆ ಪ್ರಕರಣಗಳು ಏರಿಕೆಯಾಗಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights