ನಡುಕ ಹುಟ್ಟಿಸುವ ಟರ್ಕಿಯ ಭೂಕಂಪನದ ವೀಡಿಯೋ ವೈರಲ್…

ಭೂಕಂಪನ.. ಹೆಸರು ಗಟ್ಟಿಯಾಗಿ ಹೇಳೋದಕ್ಕೂ ಮೈಯಲ್ಲಿ ಒಂದು ಕ್ಷಣ ನಡುಕು ಹುಟ್ಟಿದಂತಾಗುತ್ತೆ. ಯಾಕಂದ್ರೆ ಇದರ ಪವರೇ ಅಂತದ್ದು. ಒಂದು ಬಾರಿ ಭೂಮಿ ಕಂಪಿಸಲು ಶುರುವಾದರೆ ಯಾರು ಬದುಕುತ್ತಾರೆ? ಯಾರು ಇಲ್ಲ ಅನ್ನೋ ಭಯ ಪ್ರಾರಂಭವಾಗುತ್ತದೆ. ಅಂತಹ ಭೂಕಂಪನದ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮೊನ್ನೆ ಶುಕ್ರವಾರ ಟರ್ಕಿಯಲ್ಲಿ ಭೀಕರ ಭೂಕಂಪ ಸಂಭವಿಸಿತ್ತು. ಭೂಕಂಪನದ ಸಾಕಷ್ಟು ವೀಡಿಯೋಗಳು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿವೆ. ಸಾಕಷ್ಟು ಆಸ್ತಿ ಪಾಸ್ತಿ ಹಾನಿಗೊಳಗಾದ ಚಿತ್ರಗಳನ್ನ ನಾವು ಎಲ್ಲೆಡೆ ಕಾಣಬಹುದು. ಪಶ್ವಿಮ ಟರ್ಕಿಯ ಕರಾವಳಿಯಲ್ಲಿ 7.0 ತೀವ್ರತೆಯ ಭೂಕಂಪವಾಗಿತ್ತು. ಇಸ್ತಾಂಬುಲ್ ನಿಂದ ಅಥೆನ್ಸ್ ವರೆಗೆ ಭೂಮಿ ಕಂಪಿಸಿದ ಅನುಭವವಾಗಿತ್ತು. ಟರ್ಕಿಯ ನಗರಗಳಾದ ಇಜ್ಮಿರ್, ಬೋರ್ನೋವಾ ಮತ್ತು ಬೈರಕ್ಲಿಯಲ್ಲಿ ಅನೇಕ ಕಟ್ಟಡಗಳು ಧರೆಗುರುಳಿವೆ. ಇದರಲ್ಲಿ ಐವತ್ತಕ್ಕೂ ಹೆಚ್ಚು ಮಂದಿ ಸಾವನಪ್ಪಿದರೆ, 900 ಜನರು ಗಾಯಗೊಂಡಿದ್ದಾರೆ. ಸಾಕಷ್ಟು ಜನ ಮನೆ ಕಳೆದುಕೊಂಡು ಬೀದಿಪಾಲಾಗಿದ್ದಾರೆ. ಇದೀಗ ಭೂಕಂಪನದ ವೀಡಿಯೋ ವೈರಲ್ ಆಗಿದೆ. ಗೇಮರ್ ಒಬ್ಬರು ಲೈವ್ ಸ್ಟ್ಈಮ್ ನಲ್ಲಿದ್ದಾಗ ಭೂಮಿ ಕಂಪಿಸಿದ ಅಘಾತಕಾರಿ ವೀಡಿಯೋವೊಂದು ಸೆರೆಯಾಗಿದೆ.

ಈ ವೀಡಿಯೋವನ್ನು ಲಕ್ಷಾಂತರ ಮಂದಿ ನೋಡಿದ್ದಾರೆ. ಪತ್ರಕರ್ತ ಮೆಹ್ಮೆಟ್ ಸೊಲ್ಮಾಜ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. `ಏಜಿಯನ್ ಟರ್ಕಿಶ್ ನಗರ ಇಜ್ಮಿರ್‌ನಲ್ಲಿ ಭಾರಿ ಭೂಕಂಪ. ತೀವ್ರತೆ : 6.9. ಈ ಗೇಮರ್‌ನ ಲೈವ್ ಸ್ಟ್ರೀಮ್‌ ಭೂಕಂಪ ಎಷ್ಟು ಭೀಕರವಾಗಿದೆ ಎಂಬುದನ್ನು ತೋರಿಸುತ್ತದೆ. ಅನೇಕ ಕಟ್ಟಡಗಳು ಹಾನಿಗೀಡಾಗಿವೆ ಅಥವಾ ಕುಸಿದಿವೆ ಎಂದು ವರದಿಯಾಗಿದೆ’ ಎಂದು ಇವರು ಕ್ಯಾಪ್ಶನ್ ಬರೆದಿದ್ದಾರೆ. ಸದ್ಯ ಈ ದೃಶ್ಯವನ್ನು ಕಂಡ ನೆಟ್ಟಿಗರು ಶಾಕ್ ಆಗಿದ್ದು ನಿಜವಾಗಿಯೂ ಈ ದೃಶ್ಯ ಭಯಹುಟ್ಟಿಸುವಂತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights