ಹಕ್ಕಿ ಜ್ವರ : ದೇಶದ ಎರಡು ದೊಡ್ಡ ಮೊಟ್ಟೆ ಮಾರುಕಟ್ಟೆಯಲ್ಲಿ ಹೆಚ್ಚಾದ ಆತಂಕ..!

ದೇಶದ ಎರಡು ದೊಡ್ಡ ಮೊಟ್ಟೆ ಮಾರುಕಟ್ಟೆಗಳಲ್ಲಿ ಹೊಸಾ ಆತಂಕ ಶುರುವಾಗಿದೆ. ರಾಜಸ್ಥಾನದಲ್ಲಿ ಪ್ರತಿದಿನ ಸಾಯುತ್ತಿರುವ ಪಕ್ಷಿಗಳಿಂದಾಗಿ ಕೃಷಿ ವ್ಯಾಪಾರಿಗಳ ಕಳವಳ ಹೆಚ್ಚಿಸುತ್ತಿದೆ. ಕೊರೊನಾ ಲಾಕ್ ಡೌನ್ ನಿಂದ ಕುಸಿದಿದ್ದ ಮೊಟ್ಟೆ ವ್ಯಾಪಾರ ಚೇತರಿಕೆ ಕಂಡುಕೊಳ್ಳುತ್ತಿದ್ದಂತೆ ಮತ್ತೊಂದು ಸಮಸ್ಯೆ ಎದುರಾಗಿದ್ದು ಮೊಟ್ಟೆ ವ್ಯಾಪಾರವನ್ನೇ ನಂಬಿಕೊಂಡಿದ್ದ ವ್ಯಾಪಾರಿಗಳಿಗೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಹರಿಯಾಣದ ಅಜ್ಮೀರ್ ಮತ್ತು ಬಾರ್ವಾಲಾದ ಮೊಟ್ಟೆಯ ಮಂಡಿಗಳನ್ನು ದೇಶದ ದೊಡ್ಡ ಮಂಡಿಗಳೆಂದು ಗುರುತಿಸಲಾಗುತ್ತದೆ. ದೇಶದ ಇತರ ರಾಜ್ಯಗಳನ್ನು ಒಳಗೊಂಡಂತೆ ವಿಶೇಷವಾಗಿ ಉತ್ತರ ಭಾರತದಲ್ಲಿ ಈ ಎರಡು ಮಂಡಿಗಳು ಮೊಟ್ಟೆಗಳನ್ನು ಹೆಚ್ಚು ಪೂರೈಸುತ್ತವೆ. ಹರಿಯಾಣದ ಬಾರ್ವಾಲಾ ಮಂಡಿಯಿಂದ ಪ್ರತಿದಿನ ಸರಿಸುಮಾರು 1.25 ಕೋಟಿ ರಿಂದ 1.5 ಕೋಟಿ ಮೊಟ್ಟೆಗಳನ್ನು ವ್ಯಾಪಾರ ಮಾಡಲಾಗುತ್ತದೆ. ಅಜ್ಮೀರ್ ಮಂಡಿಯಿಂದ ದಿನಕ್ಕೆ 70 ರಿಂದ 80 ಲಕ್ಷ ಮೊಟ್ಟೆಗಳನ್ನು ಸರಬರಾಜು ಮಾಡಲಾಗುತ್ತದೆ. ಈಗ ರಾಜಸ್ಥಾನದಲ್ಲಿ ಪಕ್ಷಿ ಜ್ವರ ಹೆಚ್ಚಾಗುತ್ತಿದ್ದು ಹರಿಯಾಣ ಅಜ್ಮೀರ್ ಮಂಡಿ ಬಾರ್ವಾಲಾ ಮಂಡಿಯು ಅತ್ಯಂತ ಅಪಾಯವನ್ನು ಎದುರಿಸುತ್ತಿವೆ.

ಇಲ್ಲಿ ಕೋಳಿ ಸಾಕಾಣಿಕೆ ಕೇಂದ್ರಗಳು ಬಹಳ ದೊಡ್ಡದಾಗಿದ್ದು ಕಿಲೋ ಮೀಟರ್ ಗಟ್ಟಲೆ ಕೋಲೀ ಶೆಡ್ಡುಗಳನ್ನು ಸ್ಥಾಪಿಸಲಾಗಿದೆ. ಇಂತಹ ಶೆಡ್‌ಗಳನ್ನು ಎಲ್ಲೆಡೆ ಸ್ಥಾಪಿಸಲಾಗುತ್ತದೆ. ಪಕ್ಷಿ ಜ್ವರ ಹರಡುವ ಕಾಯಿಲೆಯಾಗಿದ್ದು ಗಾಳಿ ಮೂಲಕ ಶೆಡ್‌ನ ಕೋಳಿಗಳಿಗೂ ಹರಡುತ್ತದೆ. ಅನಾರೋಗ್ಯಕ್ಕೆ ಒಳಗಾಗಿ ಸಾಯಲು ಪ್ರಾರಂಭಿಸುತ್ತವೆ. ಆದರೆ ಕೋಳಿ ಸಾಕಾಣಿಕೆ ಕೇಂದ್ರದಲ್ಲಿ 10 ಕೋಳಿಗಳು ಪಕ್ಷಿ ಜ್ವರದಿಂದ ಸತ್ತರೆ ಎಲ್ಲಾ ಕೋಳಿಗಳನ್ನು ಮುನ್ನೆಚ್ಚರಿಕೆಯಾಗಿ ನಿರ್ಮೂಲನೆ ಮಾಡಬೇಕಾಗುತ್ತದೆ. ಈಗಾಗಲೇ ಕೊರೋನಾ ಹರಡುವ ಭಯದಿಂದಾಗಿ ದೇಶಾದ್ಯಂತ ಶೇಕಡಾ 40 ರಷ್ಟು ಕೋಳಿಗಳನ್ನು ಕೊಲ್ಲಲಾಗಿದೆ.

ಸದ್ಯ ಹಕ್ಕಿ ಜ್ವರದಿಂದಲೂ ಇದೇ ರೀತಿ ಘಟನೆ ಸಂಭವಿಸಿದರೆ ಮೊಟ್ಟೆ, ಕೋಳಿ ವ್ಯಾಪಾರಿಗಳಿಗೆ ಭಾರೀ ನಷ್ಟವಾಗಲಿದೆ. ಆರಂಭದಲ್ಲೇ ಇದಕ್ಕೆ ಸರ್ಕಾರ ಸೂಕ್ತ ದಾರಿ ಕಂಡುಕೊಳ್ಳಬೇಕಾಗಿದೆ. ಇಲ್ಲವಾದಲ್ಲಿ ಅಪಾಯ ತಪ್ಪಿದ್ದಲ್ಲ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights