1.5 ಲಕ್ಷ ರೂ. ಮೌಲ್ಯದ ಬೊನ್ಸಾಯ್ ಸಸ್ಯ ಕದ್ದ ಖತರ್ನಾಕ್ ಕಳ್ಳರು ಅರೆಸ್ಟ್!

1.5 ಲಕ್ಷ ರೂಪಾಯಿ ಮೌಲ್ಯದ ಅಪರೂಪದ ಬೊನ್ಸಾಯ್ ಸಸ್ಯವನ್ನು ಕದ್ದಿದ್ದಕ್ಕಾಗಿ ಹೈದರಾಬಾದ್ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಹೌದು.. ಐಷಾರಾಮಿ ಜುಬಿಲಿ ಹಿಲ್ಸ್ ಪ್ರದೇಶದಲ್ಲಿ ಅಪರೂಪದ 15 ವರ್ಷದ ಕ್ಯಾಸುಆರಿನಾ ಬೊನ್ಸಾಯ್ ಸಸ್ಯ ವನ್ನು ಕದ್ದಿದ್ದ ಇಬ್ಬರನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.

ಈ ಅಪರೂಪದ ಸಸ್ಯವನ್ನು ಸೋಮವಾರ ಮಾಜಿ ಪೊಲೀಸ್ ಮಹಾನಿರ್ದೇಶಕ ವಿ ಅಪ್ಪ ರಾವ್ ಅವರ ಮನೆಯಿಂದ ಕಳವು ಮಾಡಲಾಗಿತ್ತು. ತೋಟಗಾರ ಸಸ್ಯಕ್ಕೆ ನೀರಿಡಲು ಹೋದಾಗ ಸಸ್ಯ ಕಾಣೆಯಾಗಿತ್ತು. ವಿ ಅಪ್ಪ ರಾವ್ ಅವರ ಮನೆಯಲ್ಲಿ ಸ್ಥಾಪಿಸಲಾದ ಎರಡು ಸಿಸಿಟಿವಿ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿಲ್ಲವಾದರೂ, ಲೇನ್‌ನಲ್ಲಿ ಅಳವಡಿಸಲಾದ ಸಾರ್ವಜನಿಕ ಕ್ಯಾಮೆರಾಗಳು ಆರೋಪಿಗಳನ್ನು ಬಂಧಿಸಲು ಪೊಲೀಸರಿಗೆ ಸಹಾಯ ಮಾಡಿವೆ.

ವಿ ಅಪ್ಪ ರಾವ್ ಅವರ ಪತ್ನಿ ಶ್ರೀದೇವಿ ಜುಬಿಲಿ ಹಿಲ್ಸ್ ಪೊಲೀಸರಿಗೆ ಈ ಬಗ್ಗೆ ದೂರು ದಾಖಲಿಸಿದ ನಾಲ್ಕು ದಿನಗಳ ನಂತರ ಪೊಲೀಸರು ಪ್ರಕರಣವನ್ನು ಬಗೆಹರಿದಿದೆ. ಶುಕ್ರವಾರ ಅವರು ಕಳೆದು ಹೋದ ದುಬಾರಿ ಸಸ್ಯವನ್ನು ಮನೆಗೆ ತೆಗೆದುಕೋಮಡು ಹೋಗಿದ್ದಾರೆ.

ಮನೆಯ ಆಗ್ನೇಯ ಗೇಟ್ ಬಳಿಯ ಮಡಕೆಯಲ್ಲಿ ಕಸಿಮಾಡಿದ ಬೊನ್ಸಾಯ್ ಮರವನ್ನು ಕದಿಯುತ್ತಿದ್ದ ಇಬ್ಬರು ಬೈಕ್‌ನಿಂದ ಬಂದ ಪುರುಷರನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಇಬ್ಬರು ಆರೋಪಿಗಳನ್ನು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 379 (ಕಳ್ಳತನಕ್ಕೆ ಶಿಕ್ಷೆ) ಅಡಿಯಲ್ಲಿ ಬಂಧಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights