IPL 2021: ಹರಾಜು ಪಟ್ಟಿಯಲ್ಲಿ ಸ್ಥಾನ ಪಡೆದ ಸಚಿನ್‌ ಪುತ್ರನ ಮೂಲ ಬೆಲೆ ಎಷ್ಟು ಗೊತ್ತೇ?

2021ರ ಐಪಿಎಲ್‌ ಟೂರ್ನಿಗೆ ಕೆಲವೇ ತಿಂಗಳುಗಳು ಮಾತ್ರ ಉಳಿದಿದ್ದು, ಎಪಿಎಲ್‌ ಅಡಲಿರುವ ತಂಡಗಳಿಗೆ ಆಟಗಾರರ ಆಯ್ಕೆಗಾಗಿ ಹರಾಜು ಪ್ರಕ್ರಿಯೆ ಆರಂಭವಾಗುತ್ತಿದೆ. ಈ ಬಾರಿಯ ಹರಾಜಿನ ಪಟ್ಟಿಯಲ್ಲಿ ಮಾಜಿ ಟೀಂ ಇಂಡಿಯಾ ನಾಯಕ ಸಚಿನ್‌ ತೆಂಡೂಲ್ಕರ್‌ ಪುತ್ರ ಅರ್ಜುನ್‌ ತೆಂಡೂಲ್ಕರ್‌ ಸ್ಥಾನ ಪಡೆದುಕೊಂಡಿದ್ದಾರೆ.

ಅರ್ಜುನ್ ತೆಂಡೂಲ್ಕರ್ ಆಲ್‌ರೌಂಡರ್ ವಿಭಾಗದ ಹರಾಜಿನ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ₹ 20 ಲಕ್ಷ ಮೂಲ ಬೆಲೆಯೊಂದಿಗೆ ನಿಗದಿ ಮಾಡಲಾಗಿದೆ.

ಐಪಿಎಲ್‌ನ ಹರಾಜು ಪ್ರಕ್ರಿಯೆಗೆ 164 ದೇಶೀಯ ಆಟಗಾರರು ಮತ್ತು 125 ವಿದೇಶಿ ಆಟಗಾರರು ಸೇರಿ 292 ಮಂದಿ ಹರಾಜಿನಲ್ಲಿ ಭಾಗವಹಿಸುತ್ತಿದ್ದಾರೆ.

ಎಡಗೈ ಮಧ್ಯಮ ವೇಗದ ಬೌಲಿಂಗ್ ಮತ್ತು ಎಡಗೈ ಬ್ಯಾಟ್ಸ್‌ಮನ್‌ ಆಗಿರುವ ಅರ್ಜುನ್‌, ಇತ್ತೀಚೆಗೆ ನಡೆದ ಮುಷ್ತಾಕ್ ಅಲಿ ಟ್ರೋಫಿ ಮೂಲಕ ಟಿ-20 ಕ್ರಿಕೆಟ್‌ ಪದಾರ್ಪಣೆ ಮಾಡಿದ್ದಾರೆ. ಈ ಟ್ರೋಫಿಯಲ್ಲಿ ಮುಂಬೈ ಪರ ಎರಡು ಪಂದ್ಯಗಳನ್ನು ಆಡಿದ್ದ ಅವರು 9.57 ರೇಟಿಂಗ್‌ನಲ್ಲಿ  2 ವಿಕೆಟ್ ಪಡೆದಿದ್ದರು.

ಫೆಬ್ರುವರಿ 20ರಂದು ಆರಂಭವಾಗಲಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಅಡಲಿರುವ ಮುಂಬೈ ತಂಡದಲ್ಲಿ ಅರ್ಜುನ್ ತೆಂಡೂಲ್ಕರ್ ಅವರಿಗೆ ಸ್ಥಾನ ಸಿಕ್ಕಿಲ್ಲ.

ಹಾಗಾಗಿ, ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಸ್ಥಾನ ಪಡೆದುಕೊಂಡಿದ್ದರೂ, ಯಾವುದಾದರೂ ತಂಡದಲ್ಲಿ ಸ್ಥಾನ ಸಿಗಬಹುದೇ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಇದನ್ನೂ ಓದಿ: 2023ರ ವರೆಗೆ BCCI ಕ್ರಿಕೆಟ್‌ ವೇಳಾಪಟ್ಟಿ ಬಿಡುಗಡೆ: ಟೀಂ ಇಂಡಿಯಾಗೆ ಬ್ಯಾಕ್‌ ಟು ಬ್ಯಾಕ್‌ ಟೂರ್ನಿಗಳು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights