ಗೋವಾ ಚುನಾವಣೆ: ರಾಜಧಾನಿ ಹಾಗೂ 06 ಪುರಸಭೆಗಳ ಅಧಿಕಾರ BJP ವಶಕ್ಕೆ!

ಗೋವಾ ರಾಜಧಾನಿ ಪಣಜಿಯ ಮಹಾನಗರ ಪಾಲಿಕೆ ಸೇರಿದಂತೆ ವಿವಿಧ ಸ್ಥಳೀಯ ಸಂಸ್ಥೆಗಳ ಒಟ್ಟು 328 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿದೆ. ಪಣಜಿ ಮಹಾನಗರ ಪಾಲಿಕೆಯ ಒಟ್ಟು 30 ಸ್ಥಾನಗಳಲ್ಲಿ 25 ಸ್ಥಾನಗಳನ್ನು ಬಿಜೆಪಿ ಗೆದಿದ್ದು, ರಾಜಧಾನಿಯಲ್ಲಿ ಅಧಿಕಾರವನ್ನು ಉಳಿಸಿಕೊಂಡಿದೆ.

ಗೋವಾದಲ್ಲಿ ಪಣಜಿ ಮಹಾನಗರ ಪಾಲಿಕೆ, 6 ಪುರಸಭೆಗಳು, 22 ಪಂಚಾಯತ್‌ಗಳು ಮತ್ತು ಒಂದು ಜಿಲ್ಲಾ ಪಂಚಾಯತ್‌ಗೆ ಶನಿವಾರ ಮತದಾನ ನಡೆದಿತ್ತು.

ಈ ಪೈಕಿ ಆರು ಪುರಸಭೆಗಳು ಮತ್ತು ಪಣಜಿ ಪಾಲಿಕೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.

ಬಾಬುಷ್ ಮೊನ್ಸೆರಟ್ಟೆ ನೇತೃತ್ವದ ಬಿಜೆಪಿ ಸಮಿತಿ ಪಂಜಿಮ್ ನಿಗಮದ 18 ವಾರ್ಡ್‌ಗಳಲ್ಲಿ 14 ರಲ್ಲಿ ಜಯಗಳಿಸಿದೆ. ಪೆರ್ನೆಮ್, ಕರ್ಚೋರೆಮ್, ವಾಲ್ಪೊಯಿ, ಕೆನಕೋನಾ ಮತ್ತು ಬಿಚೋಲಿಮ್ ಪುರಸಭೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

“ಪುರಸಭೆ ಚುನಾವಣೆಯಲ್ಲಿ ಗೆದ್ದ ಎಲ್ಲ ಅಭ್ಯರ್ಥಿಗಳನ್ನು ನಾನು ಅಭಿನಂದಿಸುತ್ತೇನೆ. ಎಲ್ಲಾ ಪುರಸಭೆಗಳಲ್ಲಿ ಬಿಜೆಪಿ ಬೆಂಬಲಿತರು ಅಭ್ಯರ್ಥಿಗಳು ಉತ್ತಮ ಪ್ರದರ್ಶನ ನೀಡಿದ್ದಾರೆ. ಪಣಜಿ ಕಾರ್ಪೊರೇಶನ್ ಚುನಾವಣೆಯಲ್ಲಿ ನಾವು ದೊಡ್ಡ ಗೆಲುವು ಸಾಧಿಸಿದ್ದೇವೆ. ಬಿಚೋಲಿಮ್, ವಾಲ್ಪೊಯಿ, ಪರ್ನೆಮ್, ಕೆನಕೋನಾ ಮತ್ತು ಕರ್ಚೋರೆಮ್ ನಾವು ಗೆದ್ದಿದ್ದೇವೆ. ಕುಂಕೋಲಿಮ್‌ನಲ್ಲಿ ನಿಕಟ ಫಲಿತಾಂಶವೂ ಬಿಜೆಪಿ ಗೆಲುವನ್ನು ಖಚಿತ ಪಡಿಸಿದೆ”ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.

ಇದನ್ನೂ ಓದಿ: ಜೀವನ ಪ್ರಮಾಣಪತ್ರಕ್ಕೆ ಆಧಾರ್ ಕಾರ್ಡ್‌ ಕಡ್ಡಾಯವಲ್ಲ: ಕೇಂದ್ರ ಸರ್ಕಾರ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights