ಡಿಕೆ ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಒಲಿಯಲು ಕಾರಣಗಳೇನು..?

ಬಹುನಿರೀಕ್ಷಿತ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಗೊಂದಲಕ್ಕೆ ಸದ್ಯ ತೆರೆ ಬಿದ್ದಿದ್ದು ಅಧ್ಯಕ್ಷ ಸ್ಥಾನವನ್ನು ಡಿಕೆ ಶಿವಕುಮಾರ್ ಅವರಿಗೆ ನೀಡಿ ಎಐಸಿಸಿ ಆದೇಶ ಹೊರಡಿಸಿದೆ.

ದಿನೇಶ್ ಗುಂಡೂರಾವ್ ಅವರು ರಾಜೀನಾಮೆ ಬಳಿಕ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಬಹಳಷ್ಟು ಲಾಬಿಗಳು ನಡೆದಿದ್ದವು. ಸಾಕಷ್ಟು ಊಹಾಪೋಹಗಳು ಸೃಷ್ಟಿಯಾಗಿದ್ದವು. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿಕೆ ಶಿವಕುಮಾರ್ ಅವರ ಹೆಸರು ಹೇಳಿ ಬಂದಾಗ ಕಾಂಗ್ರೆಸ್ ನಲ್ಲಿ ಕೆಲವರು, ಡಿಕೆ ಶಿವಕುಮಾರ್ ಹಲವು ಹಿರಿಯ ನಾಯಕರನ್ನು ಕಡೆಗಣಿಸುತ್ತಾರೆ ಮತ್ತು ಹಿರಿಯರನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲ ಎನ್ನುವ ಮಾತು ಕೇಳಿ ಬಂದಿದ್ದವು. ಹೀಗಾಗಿ ಸಿದ್ದರಾಮಯ್ಯ ಅವರು ಡಿಕೆ ಶಿವಕುಮಾರ್ ಅವರ ಹೆಸರನ್ನು ಬಿಟ್ಟು ಎಂಬಿ ಪಾಲೀಟ್ ಅವರ ಹೆಸರನ್ನು ಸೂಚಿಸಿದ್ದರು ಕೂಡ. ಇನ್ನೂ ಕೆಲವು ನಾಯಕರ ಪಡೆ ಡಿಕೆ ಶಿವಕುಮಾರ್ ಅವರಿಗೆ ನೀಡಬೇಕು ಎಂದಿತ್ತು.

ಸದ್ಯ ಇದಕ್ಕೆಲ್ಲ ತೆರೆ ಎಳೆದು ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಕನಕಪುರ ಬಂಡೆ ಅಲಂಕರಿಸಿದೆ. ಡಿ.ಕೆ ಶಿವಕುಮಾರ್ ಅವರು ರಾಜ್ಯ ಕಾಂಗ್ರೆಸ್ ಸಾರಥಿಯಾಗಿದ್ದಾರೆ. ಸಿದ್ದರಾಮಯ್ಯ ಎರಡು (ಸಿಎಲ್ ಪಿ ಮತ್ತು ವಿಪಕ್ಷ ಹುದ್ದೆ) ಹುದ್ದೆಗಳಲ್ಲಿ ಮುಂದುವರೆಯಲಿದ್ದಾರೆ. ಇದು ಕಾಂಗ್ರೆಸ್ ನ ಕೆಲ ನಾಯಕರ ಕೆಂಗೆಣ್ಣಿಗೆ ಗುರಿಯಾದ್ರೆ ಇನ್ನೂ ಕೆಲವರಿಗೆ ಖುಷಿ ತಂದಿದೆ.

ಇನ್ನೂ ಈಶ್ವರ್ ಖಂಡ್ರೆ, ಸಲೀಂ ಅಹ್ಮದ್, ಸತೀಶ್ ಜಾರಕಿಹೊಳಿ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಆದೇಶ ಹೊರಡಿಸಿದ್ದಾರೆ. ಯಾವುದೇ ಸಮುದಾಯಕ್ಕೂ ಇಲ್ಲಿ ಬೇಸರವನ್ನುಂಟು ಮಾಡದೆ ಕಾಳಜಿ ವಹಿಸಿದ್ದು ಕಂಡುಬಂದಿದೆ. ಈ ವೇಳೆ ವಿಧಾನಸೌಧದಲ್ಲಿ ಸಿದ್ಧರಾಮಯ್ಯ ಅವರಿಗೆ ರೆಡ್ ರೋಸ್ ಕೊಟ್ಟು ಅಭಿನಂದಿಸಿದ ಡಿಕೆ ಶಿವಕುಮಾರ್ ಗೆ ಶಾಸಕರು ಅಭಿನಂದನೆ ತಿಳಿಸಿದ್ದಾರೆ.

ಡಿಕೆ ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಒಲಿಯಲು ಕಾರಣಗಳೇನು..?

ಪಕ್ಷ ನಿಷ್ಠೆ

ರಾಜ್ಯದ್ಯಾಂತ ಸುತ್ತಿ ಅವಲೋಕಿಸಿ ಪಕ್ಷ ಕಟ್ಟುವ ಶಕ್ತಿ

ಸಿದ್ದರಾಮಯ್ಯ ಜೊತೆಗೂಡಿ ಪಕ್ಷ ಮುನ್ನೆಡೆಸುವ ಸಾಮಾರ್ಥ್ಯ

ಮೂಲ ಕಾಂಗ್ರೆಸ್ ಗರಿಂದ ಡಿಕೆಶಿ ಪರ ಲಾಬಿ

ಒಡೆದ ಬಣಗಳನ್ನು ಒಗ್ಗೂಡಿಸಬಲ್ಲ ವ್ಯಕ್ತಿ

 

 

 

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights