ಖಾಸಗಿ ಬ್ಯಾಂಕುಗಳಿಂದ ಹಣವನ್ನು ಹಿಂಪಡೆದರೆ ಹಣಕಾಸಿನ ಸ್ಥಿರತೆಗೆ ಧಕ್ಕೆಯಾಗುತ್ತದೆ; ರಾಜ್ಯಗಳಿಗೆ ಆರ್‌ಬಿಐ ಸೂಚನೆ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಲ್ಲಾ ರಾಜ್ಯ ಸರ್ಕಾರಗಳಿಗೆ ತಮ್ಮ ಹಣವನ್ನು ಖಾಸಗಿ ವಲಯದ ಬ್ಯಾಂಕುಗಳಿಂದ ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ವರ್ಗಾಯಿಸುವುದನ್ನು ನಿಲ್ಲಿಸುವಂತೆ ಪತ್ರ ಬರೆದಿದೆ. ಸರ್ಕಾರಗಳ ಇಂತಹ ಕ್ರಮವು ಆರ್ಥಿಕ ಸ್ಥಿರತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿಸಿದೆ.

ಖಾಸಗಿ ವಲಯದ ಯೆಸ್ ಬ್ಯಾಂಕ್‌ನಲ್ಲಾದ ತೊಂದರೆಗಳ ನಂತರ ಖಾಸಗಿ ವಲಯದ ಬ್ಯಾಂಕುಗಳಲ್ಲಿ ಠೇವಣಿಗೆಳನ್ನು ಇಡುವುದರ ಬಗೆಗೆ ಸಾರ್ವಜನಿಕರಲ್ಲಿ ಆತಂಕ ವ್ಯಕ್ತವಾಗಿದೆ. ಆರ್‌ಬಿಐ ಯೆಸ್‌ ಬ್ಯಾಂಕ್‌ ಆಡಳಿತವನ್ನು ತನ್ನ ಸುಪರ್ದಿಗೆ ತೆಗೆದುಕೊಂಡು ನಗದು ಹಿಂಪಡೆಯುವಿಕೆಯನ್ನು 50,000ಕ್ಕೆ ಸೀಮಿತಗೊಳಿಸಿದ ನಂತರ ಹಣದ ಸುರಕ್ಷತೆಯ ಬಗ್ಗೆ ಮತ್ತಷ್ಟು ಕಳವಳ ಹೆಚ್ಚಾಗಿದೆ.

ಮಹಾರಾಷ್ಟ್ರದಂತಹ ರಾಜ್ಯ ಸರ್ಕಾರಗಳು ತಮ್ಮ ವ್ಯಾಪ್ತಿಯಲ್ಲಿರುವ ರಾಜ್ಯ ಘಟಕಗಳು ಮತ್ತು ಇಲಾಖೆಗಳಿಗೆ ತಮ್ಮ ಹಣವನ್ನು ಖಾಸಗಿ ಸ್ವಾಮ್ಯದ ಬ್ಯಾಂಕುಗಳಿಂದ ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ವರ್ಗಾಯಿಸಲು ಸಲಹೆ ನೀಡಿವೆ ಎಂದು ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಆರ್‌ಬಿಐ  ಮಾರ್ಚ್ 12 ರಂದು ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದೆ.

ಪತ್ರದಲ್ಲಿ, “ಖಾಸಗಿ ವಲಯದ ಬ್ಯಾಂಕುಗಳಲ್ಲಿನ ಠೇವಣಿಗಳ ಸುರಕ್ಷತೆಯ ಬಗ್ಗೆ ಆತಂಕವು ಸರಿಯಾದುದಲ್ಲ. ಅಂತಹ ಪ್ರತಿಕ್ರಿಯಾತ್ಮಕ ನಿರ್ಧಾರವು ಸಾಮಾನ್ಯವಾಗಿ ಹಣಕಾಸು ವ್ಯವಸ್ಥೆಯ ಸ್ಥಿರತೆ ಮತ್ತು ನಿರ್ದಿಷ್ಟವಾಗಿ ಬ್ಯಾಂಕಿಂಗ್ ವ್ಯವಸ್ಥೆಯ ಮೇಲೆ ದುಷ್ಪರಿಣಾಮ” ಬೀರುತ್ತದೆ ಎಂದು ಹೇಳಿದೆ.

ಖಾಸಗಿ ವಲಯದ ಬ್ಯಾಂಕುಗಳನ್ನು ನಿಯಂತ್ರಿಸಲು ಮತ್ತು ಮೇಲ್ವಿಚಾರಣೆ ಮಾಡಲು ಸಾಕಷ್ಟು ಅಧಿಕಾರಗಳಿವೆ. ಈ ಅಧಿಕಾರಗಳನ್ನು ಬಳಸುವುದರಿಂದ ಖಾಸಗೀ ಬ್ಯಾಂಕುಗಳನ್ನು ನಿಯಂತ್ರಿಸಬಹುದು ಹಾಗೂ ರಕ್ಷಿಸಬಹುದು. ಠೇವಣಿದಾರರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಅವರ ಹಣ ಸುರಕ್ಷಿತವಾಗಿದೆ ಎಂದು ಆರ್‌ಬಿಐ ಖಚಿತಪಡಿಸಿದೆ. ಖಾಸಗಿ ಬ್ಯಾಂಕುಗಳಿಂದ ತಮ್ಮ ಹಣವನ್ನು ಬದಲಾಯಿಸುವ ಬಗೆಗಿನ ನಿರ್ಧಾರವನ್ನು ಮರುಪರಿಶೀಲಿಸುವಂತೆ ರಾಜ್ಯ ಸರ್ಕಾರಗಳನ್ನು ಆರ್‌ಬಿಐ ಕೇಳಿದೆ.

ಆದರೆ, ಎಸ್‌ ಬ್ಯಾಂಕ್‌ನ ಬಿಕ್ಕಟ್ಟು ಆರಂಭವಾಗಿದ್ದು 2015ರಲ್ಲಿ. ಇದು ತಿಳಿದಿದ್ದರೂ ಆರ್‌ಬಿಐ ತನ್ನ ಯಾವ ಅಧಿಕಾರವನ್ನು ಬಳಸಲಿಲ್ಲ. ಯೆಸ್‌ ಬ್ಯಾಂಕ್‌ ಮೇಲೆ ನಿಯಂತ್ರಣವನ್ನು ಹೇರಲಿಲ್ಲ. ಇದರಿಂದಾಗಿ ರಾಜ್ಯ ಸರ್ಕಾರಗಳೇ ಖಾಸಗೀ ಬ್ಯಾಂಕುಗಳ ಮೇಲಿನ ವಿಶ್ವಸವನ್ನು ಕಳೆದುಕೊಂಡು ತಮ್ಮ ಹಣವನ್ನು ಸಾರ್ವಜನಿಕ ಬ್ಯಾಂಕುಗಳಿಗೆ ವರ್ಗಾಯಿಸುವ ನಿರ್ಧಾರಕ್ಕೆ ಬಂದಿವೆ. ಹೀಗಿರುವಾಗ ಇನ್ನ ಸಾಮಾನ್ಯ ಜನರಲ್ಲಿ ತಮ್ಮ ಠೇವಣಿಗಳ ಬಗೆಗೆ ಎಷ್ಟು ಆತಂಕವಿರಬುದು ಎಂಬುದನ್ನು ಆರ್‌ಬಿಐ ಅರಿತುಕೊಳ್ಳಬೇಕು.

ಆಳುವವರ ಹಿತಾಸಕ್ತಿ ಮತ್ತು ರಾಜಕೀಯ ಲಾಭಕ್ಕಾಗಿ ದೇಶದ ಆರ್ಥಿಕತೆಯನ್ನೂ, ಜನಸಾಮಾನ್ಯರ ಜೀವನವನ್ನು ಅಸ್ಥಿರಗೊಳಿಸಿ ಕಂಗಾಲಾವಂತೆ ಮಾಡದೆ. ಆರ್ಥಿಕತೆಯನ್ನು ಮೇಲೆತ್ತುವ, ಬಂಡವಾಳಶಾಹಿ ಖಾಳ ಧನಿಕರಕ ಲೂಟಿಗೆ ಕಡಿವಾಣ ಹಾಕಿದಾಗ ಮಾತ್ರ ಇಂತಹ ಬ್ಯಾಂಕುಗಳ ದಿವಾಳಿತನ ನಿಲ್ಲುತ್ತದೆ. ಸಾರ್ವಜನಿಕರಲ್ಲಿಯೂ ಬ್ಯಾಂಕುಗಳ ಮೇಲೆ ವಿಶ್ವಸ ಹೆಚ್ಚುತ್ತದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights